ಹೆಸ್ಕಾಂ ಕಚೇರಿಗೆ ಮುತ್ತಿಗೆ ರೈತರಿಂದ ದಿಢೀರ ಪ್ರತಿಭಟನೆ
ಬಸವನಬಾಗೇವಾಡಿ:ಏ.3: ಸಮೀಪದ ಕೊಡಗನೂರ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಹೆಸ್ಕಾಂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ರೈತರು ಮಂಗಳವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ದಿಢೀರ ಪ್ರತಿಭಟನೆ ಆರಂಭಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಸ್ಕಾಂ ಇಲಾಖೆಯ ಇಇ ಸಿದ್ರಾಮ್ ಬಿರಾದರ ಭೇಟಿ ನೀಡಿ ಪ್ರತಿಭಟನಾ ನಿರತರನ್ನ ಮನವೊಲಿಸಲು ಯತ್ನಿಸಿದರು, ಪಟ್ಟು ಬಿಡದ ಪ್ರತಿಭಟನಾ ನಿರತರು ಕೂಡಲೇ ವಿದ್ಯುತ್ ಕಂಬಗಳನ್ನು ನೀಡುವಂತೆ ಪಟ್ಟು ಹಿಡಿದರು, ಸರ್ಕಾರಿ ಕೆಲಸಗಳನ್ನ ಕಾನೂನಿನ ಚೌಕಟ್ಟಿನಲ್ಲಿ ಮಾಡಬೇಕಾಗುತ್ತದೆ, ಪ್ರೋಸಿಜರ್ ಪ್ರಕಾರ ಇಲಾಖೆಯ ಸಾಮಗ್ರಿಗಳು ಕಳ್ಳತನವಾದರೇ ಅಥವಾ ಅಪಘಾತಕ್ಕಿಡಾದರೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ನಂತರ ಎಸ್ಟಿಮೆಂಟ್ ಮಾಡಿ ಕಾಮಗಾರಿಯನ್ನ ಆರಂಭಿಸಬೇಕಾಗುತ್ತದೆ, ಚುನವಣೆ ನೀತಿ ಸಂಹಿತಿ ಜಾರಿಯಲ್ಲಿದೆ ಹಿಂಗೆಲ್ಲ ಪ್ರತಿಭಟನೆ ಮಾಡುವಂತಿಲ್ಲ ಎಂದು ಇಇ ಸಿದ್ರಾಮ್ ಬಿರಾದರ ತಿಳಿಸುತ್ತಿದ್ದಂತೆ ಆಕ್ರೋಶಗೊಂಡ ರೈತರು ಪ್ರತಿಭಟನೆ ಹಿಂಪಡೆಯುವುದಿಲ್ಲ ನಮ್ಮ ಮೇಲೆ ಕೇಸ್ ದಾಖಲಿಸಿ, ಆದರೆ ನಮಗೆ ವಿದ್ಯುತ್ ಕಂಬಗಳನ್ನು ನೀಡುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು,
ಮುಖಂಡ ಮುತ್ತುರಾಜ ಹಾಲಿಯಾಳ ಮಾತನಾಡಿ ಕಳೆದ 5 ದಿನಗಳಿಂದ ಕೊಡಗನೂರ ಗ್ರಾಮದಲ್ಲಿ ಸುಮಾರು 8 ವಿದ್ಯುತ್ ಕಂಬಗಳು ಮುರಿದು ಬಿದ್ದು ರೈತರ ಜಮೀನುಗಳಿಗೆ ವಿದ್ಯುತ್ ಪೂರೈಕೆ ಆಗುತ್ತಿಲ್ಲ, ಇದರಿಂದ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ, ಈ ಹಿನ್ನಲೆಯಲ್ಲಿ ಕಳೆದ 5 ದಿನಗಳಿಂದ ಹೆಸ್ಕಾಂ ಇಲಾಖೆಗೆ ಅಲೆದಾಡುತ್ತಿದ್ದೆವೆ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ, ವಿದ್ಯುತ್ ಕಂಬಗಳನ್ನು ಕೊಡುವ ವರೆಗೂ ಧರಣಿಯನ್ನ ಹಿಂಪಡೆಯುವುದಿಲ್ಲ ಎಂದು ಆಕ್ರೋಶ ಹೋರ ಹಾಕಿದರು.
ಪ್ರತಿಭಟನೆಯಲ್ಲಿ ಶಿವಶಂಕರಯ್ಯಾ ಹಿರೇಮಠ, ಬಸವರಾಜ ಕುಂಟೋಜಿ, ಶಿವನಗೌಡ ಬಳವಾಟ, ಗೌಡಪ್ಪಗೌಡ ಬಿರಾದಾರ, ಬಸಯ್ಯ ಹಿರೇಮಠ, ಮಹೇಶ ತಿಳಗೋಳ, ಅರ್ಜುನ ಅಂಬಳನೂರ, ಜಗದೀಶ ಹಾಲಿಯಾಳ, ಮಲ್ಲನಗೌಡ ಬಿರಾದಾರ, ಆಲೂಮ ಪಟೇಲ ಶಿವಣಗಿ, ಪಾರುಕ್ ಶಿವಣಗಿ, ಪ್ರಭು ಬಿರಾದಾರ, ಸಂಗಪ್ಪ ಬಿರಾದಾರ, ಮೈಬೂ ವಾಲಿಕಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.