ಅಕ್ರಮ ಮರಳು ಗಣಿಗಾರಿಕೆ: ಟ್ರ್ಯಾಕ್ಟರ್ ವಶ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.03: ಅಕ್ರಮ ಮರಳು ಗಣಿಗಾರಿಕಾ ತಾಣದ ಮೇಲೆ ದಿಢೀರ್ ದಾಳಿ ನಡೆಸಿರುವ ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮರಳು ಸಾಗಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್‍ವೊಂದನ್ನು ವಶಪಡಿಸಿಕೊಂಡು ಪೆÇಲೀಸರಿಗೆ ಒಪ್ಪಿಸಿದ್ದಾರೆ.
ತಾಲೂಕಿನ ಪಿಡಿಜಿ ಕೊಪ್ಪಲು ಗ್ರಾಮದ ಬಳಿ ಹೇಮಾವತಿ ನದಿಯಿಂದ ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಮುಂಗಳವಾರ ತಡರಾತ್ರಿ 01 ಘಂಟೆಯ ವೇಳೆಗೆ ತಹಸೀಲ್ದಾರ್ ಲೋಕೇಶ್ ತಮ್ಮ ಇಲಾಖಾ ಸಿಬ್ಬಂಧಿಗಳ ಮೂಲಕ ಮರಳು ಗಣಿಗಾರಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದರು. ದಾಳಿ ಸಂದರ್ಭದಲ್ಲಿ ಮರಳು ತುಂಬಿದ ಟ್ರ್ಯಾಕ್ಟರ್ ಸ್ಥಳದಲ್ಲಿಯೇ ಬಿಟ್ಟು ಚಾಲಕ ಸೇರಿದಂತೆ ಎಲ್ಲರೂ ಪರಾರಿಯಾಗಿದ್ದಾರೆ. ಟ್ರ್ಯಾಕ್ಟರ್ ಪಿಡಿಜಿ ಕೊಪ್ಪಲು ಗ್ರಾಮದ ನಾಗಾರ್ಜುನ ಎನ್ನುವವರಿಗೆ ಸೇರಿದ್ದೆಂದು ತಿಳಿಸಿರುವ ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ವಶಕ್ಕೆ ಪಡೆದಿರುವ ಟ್ರ್ಯಾಕ್ಟರ್ ಅನ್ನು ಕೆ.ಆರ್.ಪೇಟೆ ಗ್ರಾಮಾಂತರ ಪೆÇಲೀಸರಿಗೆ ಒಪ್ಪಿಸಿದ್ದು ಟ್ರ್ಯಾಕ್ಟರ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ನಾನು ಇದೀಗ ನೂತನವಾಗಿ ಕೆ.ಆರ್.ಪೇಟೆ ತಹಸೀಲ್ದಾರ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆ ಕುರಿತು ಪತ್ರಿಕಾ ವರದಿಗಳನ್ನು ಗಮನಿಸಿದ್ದೇನೆ. ಮರಳು ಗಣಿಗಾರಿಕೆ ಕಾನೂನಿಗೆ ವಿರುದ್ದವಾಗಿದ್ದು ಪರಿಸರಕ್ಕೆ ವಿರುದ್ದವಾಗಿದೆ. ಪರಿಸರ ಸಂರಕ್ಷಣೆ ನನ್ನ ಮೊದಲ ಆದ್ಯತೆಯಾಗಿದ್ದು ಯಾವುದೇ ಕಾರಣಕ್ಕೂ ಅಕ್ರಮ ಮರಳು ಗಣಿಗಾರಿಕೆಯನ್ನು ನಾನು ಸಹಿಸುವುದಿಲ್ಲ ಎಂದು ತಿಳಿಸಿರುವ ತಹಸೀಲ್ದಾರ್ ಎಸ್.ವಿ.ಲೋಕೇಶ್ ಈ ಕುರಿತು ಪೆÇಲೀಸ್ ಇಲಾಖೆ, ಕಂದಾಯ ಇಲಾಕೆಯ ಸಿಬ್ಬಂಧಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೂ ಅಕ್ರಮ ಮರಳು ಗಣಿಗಾರಿಕೆಯ ವಿರುದ್ದ ಕ್ರಮ ವಹಿಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.