ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬೆಟ್ಟಳ್ಳಿ ಮಾರಮ್ಮನ ರಥೋತ್ಸವ
ಸಂಜೆವಾಣಿ ವಾರ್ತೆ
ಹನೂರು ಏ 3 :- ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ನೂತನವಾಗಿ ನಿರ್ಮಾಣ ವಾಗಿರುವ ರಥೋತ್ಸವವು ಅದ್ದೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವ ಮೊದಲನೇ ಸೋಮವಾರ ಸಂಜೆ ಜಾಗರ ಸಮರ್ಪಣೆ ಹಾಗೂ ಜಾತ್ರೆಯ ಎರಡನೇ ದಿನವಾದ ಮಂಗಳವಾರ ದಂದು ಮುಂಜಾನೆ ಇಂದಲೇ ಶ್ರೀ ಬೆಟ್ಟಳ್ಳಿ ಮಾರಮ್ಮನಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು, ಭಕ್ತರು ಬೆಳಿಗ್ಗೆ ಯಿಂದಲೇ ತಂಪು ಜ್ಯೋತಿ ಸಮರ್ಪಣೆ ಮಾಡಿ ಭಕ್ತಿ ಪರಾಕಾಷ್ಠೆ ಮೆರೆದರು.
ಹನೂರು ಪಟ್ಟಣದಲ್ಲಿ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ರಠೋತ್ಸವನ್ನು ಬಹಳ ಅದ್ದೂರಿಯಾಗಿ ಎಳೆಯಲಾಯಿತು. ಕಳೆದ ಎರಡು ದಿನಗಲಿಂದಲೂ ಸಹ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಇಂದು , ತಾಯಿ ಬೆಟ್ಟಳ್ಳಿ ಮಾರಮ್ಮನ ವಿಗ್ರಹ ವನ್ನು ರಥೋತ್ಸವ ದಲ್ಲಿ ಇಟ್ಟು ವಿವಿಧ ಫಲ ಪುಷ್ಪ ಗಳಿಂದ ಅಲಂಕಾರ ಮಾಡಲಾಗಿತ್ತು.
ಸುಮಾರು ಮದ್ಯಾಹ್ನ 12 ರ ವೇಳೆಯಲ್ಲಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ರಥ ವನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಯಿತು. ನಂತರ ನೂತನ ರಥವನ್ನು ಎಳೆಯುವ ಮೂಲಕ ಜೈಕಾರಗಳನ್ನು ಕೂಗಿ ಭಕ್ತರು ನಮಿಸಿದರು.
ಹರಕೆ ಹೊತ್ತ ಮಹಿಳೆಯರು ಹಾಗೂ ಭಕ್ತರು ಹಣ್ಣು ಜವನ ಗಳನ್ನು ಎಸೆದು ತಮ್ಮ ಭಕ್ತಿಯ ಪರಕಷ್ಟೆ ಗೈದರು. ಇನ್ನು ಇದೆ ಮೊದಲ ಬಾರಿಗೆ ರಥೋತ್ಸವ ಜರುಗುತ್ತಿರುವ ಹಿನ್ನಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೆರದಿದ್ದು ತಮ್ಮ ಆಶಯಗಳನ್ನು ಈಡೇರಿಸುವಂತೆ ನಮಿಸಿದರು,
ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಶಾಸಕ ಎಂಆರ್ ಮಂಜುನಾಥ್ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಜನತೆಗೆ ಒಳಿತು ಮಾಡಲಿ ಮಳೆ ಬೆಳೆಯಾಗಲೆಂದು ಪ್ರಾರ್ಥನೆ ಸಲ್ಲಿಸಿದರು.
ಇನ್ನು ದೇವಾಲಯದ ಪ್ರದಾನ ಅರ್ಚಕರಾದ ರಾಜೋಜಿ ರಾವ್, ಹಾಗೂ ಜಯಂತ್ ರಾವ್ ಸೇರಿದಂತೆ ಗ್ರಾಮದ ವಿವಿಧ ಕೋಮಿನ ಯಜಮಾನ ರುಗಳು, ಮುಖಂಡರುಗಳು ಹಾಗೂ ಮಹಿಳೆಯರು ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತದಿಗಳು ಉಪಸ್ಥಿತರಿದ್ದರು.