ಕಲ್ಯಾಣ ಕರ್ನಾಟಕ ಒಟ್ಟು ಸಾಧನೆಗೆ ಕೈಜೋಡಿಸೋಣ: ಪಾಟೀಲ
ಆಳಂದ:ಸೆ.19: ಹಿಂದುಳಿದ ಹೈ.ಕ. ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂಬ ಮರುನಾಮಕರಣ ಆಶಯವನ್ನು ಈಡೇರಲು ಸರ್ವರು ಕೈಜೋಡಿಸುವ ಮೂಲಕ ಹಿಂದುಳಿದ ಹಣೆಪಟ್ಟಿಯನ್ನು ಅಳಿಸಿಹಾಕಬೇಕಿದೆ ಎಂದು ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಆಡಳಿತಸೌಧನಲ್ಲಿ ಮಂಗಳವಾರ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ಉತ್ಸವ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮತ್ತು ಭಗವಾನ ಶ್ರೀ ವಿಶ್ವಕರ್ಮ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತರೆ ಒಂದ ವರ್ಷದ ಬಳಿಕ ಕಲ್ಯಾಣ ಕರ್ನಾಟಕ ಪ್ರದೇಶವು ಸರ್ದಾರ ವಲ್ಲಾಭಾಯಿ ಪಟೇಲರ ಮೂಲಕ ಸಿಕ್ಕ ಸ್ವಾತಂತ್ರ್ಯವಾಗಿ ಇಂದು ನಾವು ಸಂಭ್ರಮವಾಗಿ ಆಚರಿಸಲಾಗುತ್ತಿದೆ. ಈ ಪ್ರದೇಶ ಒಟ್ಟು ಅಭಿವೃದ್ಧಿಯ ನಿಟ್ಟಿನಲ್ಲಿ ಈಗ 371 (ಜೆ), ಅನ್ವಯ ಮೂಲಕ ಶಿಕ್ಷಣ, ಆರೋಗ್ಯ ನೀರಾವರಿ, ಉದ್ಯೋಗದಂತ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಒಗ್ಗಟ್ಟಿನಿಂದ ಸಾಗಬೇಕಿದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ವೇದಪಾಠಕ ಅವರು ವಿಶ್ವಕರ್ಮರ ಸಾಧನೆ ಮತ್ತು ತತ್ವ ಮಾನವ ಬದುಕಿಗೆ ದಾರಿದೀಪವಾಗಿವೆ ಆಚರಣೆಗೆ ತರಬೇಕು ಎಂದು ಹೇಳಿದರು.
ವಿಶ್ವಕರ್ಮ ಸಮಾಜ ಅಧ್ಯಕ್ಷ ಬಸವರಾಜ ತಡಕಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ಸಮಾಜಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ, ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ ಹೊನ್ನಪಗೊಳ್ಳ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸಂಜಯ ಮಿಸ್ಕಿನ್, ಸುನಿಲ ಹಿರೋಳಿಕರ್, ವಿಶ್ವಕರ್ಮ ಸಮಾಜ ಮುಖಂಡ ದೇವಿಂದ್ರಪ್ಪಾ ಮಾಸ್ಟರ್, ಕಾಳಿಕಾ ದೇವಿಟ್ರಸ್ಟ್ ಅಧ್ಯಕ್ಷ ಮಹಾದೇವ ಕೆ. ಪೋದ್ದಾರ, ದತ್ತು ಪೋದ್ದಾರ, ಲಕ್ಷ್ಮೀಕಾಂತ ಸುತಾರ, ಸುಜ್ಞಾನಿ ಪೋದ್ದಾರ, ಸತೀಶ ನಿರಗುಡಿ, ನಾಗನಾಥ ಪೋದ್ದಾರ, ನಾಗಣ್ಣಾ ಸುತಾರ, ಶಿವಶರಣಪ್ಪ ಸುತಾರ ಖಜೂರಿ, ಮನೋಜ ಪೋದ್ದಾರ, ಮಲ್ಲಮ್ಮಾ ಸುತಾರ, ವಿಶ್ವಕರ್ಮ ಮಹಿಳಾ ಘಟಕದ ಅಧ್ಯಕ್ಷೆ ವೈಶಾಲಿ ಅಶೋಕ ಪೋದ್ದಾರ, ಪುಷ್ಪಾ ಸುಭಾಷ ಪೋದ್ದಾರ ಅನೇಕರು ಪಾಲ್ಗೊಂಡಿದ್ದರು.