ಮಗನ ಕಂಡು ಬಿಕ್ಕಿ ಬಿಕ್ಕಿ ಅತ್ತಳಾ ತಾಯಿದರ್ಶನ್ ಭೇಟಿಯಾದ ಮೀನಾ ತೂಗುದೀಪ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.19: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ಮಗ ನಟ ದರ್ಶನ್ ಕಂಡೊಡನೆ ತಾಯಿ ಮೀನಾ ತೂಗುದೀಪ ಹಾಗೂ ಸಹೋದರಿ  ದೀಪಾ, ಭಾವ ಮಂಜುನಾಥ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇಂದು ಜೈಲಿಗೆ ಭೇಟಿ ನೀಡಿದ ಅವರು, ಮಗ ದರ್ಶನ್ ಅವರ ಪರಿಸ್ಥಿತಿಯನ್ನು, ಸೋತ ದೇಹವನ್ನು ಕಂಡು ಮರುಗಿದರು. ಅವರ ಸಂಕಟಕ್ಕೆ ಸ್ವತಃ ದರ್ಶನ್ ಸುಧಾರಿಸಿಕೊಂಡು ತಾಯಿ ಹಾಗೂ ಸಹೋದರಿಯನ್ನ ಸಮಾಧಾನಪಡಿಸಿದರಂತೆ.
ದರ್ಶನ್ ಸ್ಥಿತಿ ಕಂಡು ಹೇಗಿದ್ದವನು ಹೇಗಾದೆಯೋ ಎಂದು ಗೋಳಾಡಿದರಂತೆ. ಬರುವಾಗ ತಂದ ಹಣ್ಣು ನೀಡಿದ್ದಾರೆ, ಒಂದಷ್ಟು ಇಟ್ಟುಕೊಂಡು ಉಳಿದ  ಹಣ್ಣುಗಳನ್ನ ವಾಪಾಸ್ ಕಳಿಸಿದರಂತೆ.
ಬೆಡ್ ತಲೆದಿಂಬು ಬೇಕಂತೆ:
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್ ಈಗ ತಮಗೆ  ಬೆಡ್, ತಲೆದಿಂಬು ಮತ್ತು ಚೇರ್ ನೀಡಬೇಕು ಎಂದು ಬೇಡಿಕೆ‌ ಇಟ್ಟಿದ್ದಾರಂತೆ. ಆರೋಪಿಯ ಬೇಡಿಕೆಯನ್ನು  ಜೈಲಿನ ಅಧಿಕಾರಿಗಳು  ನಿರಾಕರಿಸಿದ್ದಾರಂತೆ.
ಇದೇ ಕಾರಣಕ್ಕೆ ಬಳ್ಳಾರಿ ಜೈಲ್ ಅಧಿಕಾರಿಗಳ ಮೇಲೆಯೇ ದರ್ಶನ್ ಕುಟುಂಬ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ಸಿದ್ದರಾಗಿದ್ದಾರಂತೆ.
ಜೈಲ್  ಮ್ಯಾನುವಲ್ ನಲ್ಲಿರುವ ಸೌಲಭ್ಯ ಕೊಡುವ ವಿಚಾರದಲ್ಲೂ ಎಚ್ಚರಿಕೆಯ ಹೆಜ್ಜೆ ಇಡ್ತಿರೋ ಸಿಬ್ಬಂದಿ.
ಸೌಲಭ್ಯ ಕೊಟ್ಟರೆ ಇಲಾಖೆ ಮತ್ತು ಸರ್ಕಾರದಿಂದ ತಲೆದಂಡ‌ ಆಗೋ ಭೀತಿ ಎದುರಿಸುತ್ತಿದ್ದು. ಮತ್ತೊಂದಡೆ ದರ್ಶನ್ ಕುಟುಂಬದ ಕೆಂಗಣ್ಣಿಗೆ ಗುರಿಯಾಗುವ ಆತಂಕವೂ ಇದೆ ಎನ್ನುತ್ತಿದೆ.