ಪುಣ್ಯ ಪ್ರವಾದಿಗಳ ಮಾರ್ಗ ಶ್ರೇಷ್ಠ ಮಾರ್ಗ
ಕೊಲ್ಹಾರ:ಸೆ.19:ಪಟ್ಟಣದ ಖಾನ್ ಕಾಯೇ ಗಪ್ಫಾರೀಯಾದಲ್ಲಿ ಪುಣ್ಯ ಪ್ರವಾದಿಗಳಾದ ಮೊಹಮ್ಮದ ಪೈಗಂಬರರ ಜನ್ಮದಿನದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗಪ್ಫಾರೀಯಾ ಪೀಠಾಧಿಪತಿಗಳಾದ ಡಾ. ಬಕ್ತೀಯಾರ್ ಖಾನ್ ಪಠಾಣ ನೇತೃತ್ವದಲ್ಲಿ ಸತತ 12 ದಿನಗಳ ಕಾಲ ಪುಣ್ಯ ಪ್ರವಾದಿಗಳ ಗುಣಗಾನ ಹಾಗೂ ಅವರ ಜೀವನ ಚರಿತ್ರೆಯನ್ನು ಪ್ರಸ್ತುತ ಪಡಿಸಲಾಯಿತು.
12 ನೇಯ ದಿನದಂದು ಖಾನ್ ಕಾಯೇ ಗಪ್ಫಾರೀಯಾದಲ್ಲಿ ಸಿಹಿ ಹಂಚುವುದರ ಜೊತೆಗೆ ಪಟ್ಟಣದಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಬ್ಧ ಚಿತ್ರಗಳ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪೀಠಾಧಿಪತಿಗಳಾದ ಡಾ.ಬಕ್ತಿಯಾರ್ ಖಾನ್ ಪಠಾಣ ಮಾತನಾಡಿ ಪುಣ್ಯ ಪ್ರವಾದಿಗಳ ಸತ್ಯ, ಅಹಿಂಸೆ, ಪರಧರ್ಮ ಸಹಿಷ್ಣತೆ ಸಹಿತ ಅವರ ಪರೋಪಕಾರ ಜೀವನವೇ ನಮಗೆ ದಾರಿದೀಪ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.