ಕಾಮನಕೇರಿಯಲ್ಲಿ ನಡೆದ ಪ್ರಾಥಮಿಕ ವಿದ್ಯಾರ್ಥಿಗಳ ಕ್ರೀಡಾಕೂಟ
ಹೂವಿನಹಿಪ್ಪರಗಿ:ಸೆ.19: ಕ್ರೀಡೆಯಲ್ಲಿ ಸೋಲು-ಗೆಲವು ಸಹಜ ಘಟನೆ ಸೋತಾಗ ಮನಸ್ಸಿನಿಂದ ಕುಗ್ಗುವುದು, ಗೆದ್ದಾಗ ಹಿಗ್ಗುವುದು ಮಾಡದೇ ವಿಧ್ಯಾರ್ಥಿಗಳು ಕ್ರೀಡೆಯಲ್ಲಿ ಮುಕ್ತ ಮನಸ್ಸಿನಿಂದ ಭಾಗವಹಿಸುವ ಮೂಲಕ ಸದೃಡ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ಬಸವನ ಬಾಗೇವಾಡಿ ತಾಲೂಕಿನ ಕಾಮನಕೇರಿ ಗ್ರಾಮದ ಕಸ್ತೂರಿ ಗಾಂಧಿ ಬಾಲಿಕಾ ವಸತಿ ಶಾಲೆಯ ಆವರಣದಲ್ಲಿ ನಡೆದ ಯಾಳವಾರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ 2024-25ನೇ ಸಾಲಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಸಣ್ಣ ವಯೋಮಾನದಲ್ಲಿಯೇ ಆರೋಗ್ಯ ವೃದ್ದಿಗಾಗಿ ಕ್ರೀಡೆ, ವ್ಯಾಯಾಮ, ಯೋಗಾಸನ ಮಾಡುವುದು ಅತೀ ಮುಖ್ಯವಾಗಿದೆ.
ಆ ನಿಟ್ಟಿನಲ್ಲಿ ಯುವ ಜನತೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿದರೆ ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸನ್ನು ನಿರ್ಮಿಸಿಕೊಂಡು ಕ್ರಿಡೆಯ ಜೊತೆಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ ಮುಕ್ತ ಮನಸ್ಸಿನಿಂದ ಭಾಗವಹಿಸುವಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ವಿಧ್ಯಾರ್ಥಿಗಳು ಸ್ಫರ್ಧೆಯಲ್ಲಿ ಗೆಲುವಿನ ಕಡೆಗೆ ಗಮನ ಹರಿಸಬೇಕು. ಸ್ಪರ್ಧೆ ಏರ್ಪಡುವುದು ಸಹಜ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿ ಮರೆಯಬಾರದು ನಿರ್ಣಾಯಕರ ನಿರ್ಣಯಕ್ಕೆ ತಲೆ ಬಾಗಿ ಸಹಕರಿಸಬೇಕು ಎಂದು ಹೇಳಿದರು.
ಕ್ಷೇತ್ರ ದೈಹಿಕಶಿಕ್ಷಣಾಧಿಕಾರಿ ಎಸ್. ಎಸ್. ಅವಟಿ ಮಾತನಾಡಿ ವಿದ್ಯಾರ್ಥಿಗಳು ಸತತವಾದ ಕ್ರೀಡೆಯಲ್ಲಿ ಅಭ್ಯಾಸವನ್ನು ಮಾಡಿ ಉತ್ತಮವಾದ ಕ್ರೀಡಾಪಟುಗಳಾಗಿ ಹೊರ ಹೊಮ್ಮುವ ಮೂಲಕ ತಂದೆ-ತಾಯಿ ಹಾಗೂ ಸೇರಿ ಶಿಕ್ಷಕರಿಗೆ ಮತ್ತು ಜನ್ಮ ಕೊಟ್ಟ ಗ್ರಾಮಕ್ಕೆ ಹೆಸರು ತಂದು ಕೊಡಬೇಕು ಎಂದು ಹೇಳಿದರು.
ಶ್ರೀ ಪರಮಾನಂದ ಮಹಾರಾಜರು ಸಾನಿಧ್ಯವಹಿಸಿ ಕ್ರೀಡಾ ದ್ವಜ ಸ್ವೀಕರಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಮಡಿವಾಳಪ್ಪ ಯಲಗೋಡ ಅದ್ಯಕ್ಷೆತೆ ವಹಿಸಿದ್ದರು. ಸಿ.ಆರ್.ಪಿ ಡಿ. ಟಿ. ನಂದಿಹಾಳ, ಎಮ್. ಡಿ. ಕಾಳಗಿ, ಶ್ರೀಮತಿ ಎಸ್. ಕೆ. ತೋಟದ ಪ್ರಮಾಣಪತ್ರ ಭೋದಿಸಿದರು.
ಜೆಡಿಎಸ್ ಮುಖಂಡ ಶಿವಣ್ಣ ಬಾಗೇವಾಡಿ, ಶಿವಾನಂದ ಜೋಗಿ, ಶಿಕ್ಷಣ ಸಂಯೋಜಕ ಎಸ್. ಎಸ್. ಅಂಬಲಿ, ಎಮ್. ಜಿ. ಅಗ್ನಿ, ಜಿ. ಜಿ. ಮಸೂತಿ, ಸುರೇಶ ಕಡ್ಲೆವಾಡ, ಜಿ. ಎಲ್. ಐಹೋಳೆ ಕ್ಲಸ್ಟರ್ ಎಲ್ಲಾ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ 15 ಪ್ರಾಥಮಿಕ ಶಾಲೆಯ 100 ಕ್ಕೂ ಹೆಚ್ಚು ಮಕ್ಕಳು ಬಾಗವಹಿಸಿದ್ದರು.