ಸಮಾಜೋ ಧಾರ್ಮಿಕ ಐತಿಹಾಸಿಕ ಕಾರ್ಯಕ್ಕೆ ಜಿಡಗಾ ಶ್ರೀಮಠ ಸನ್ನದ್ಧ
ಆಳಂದ:ಸೆ.19: ಕೋಟ್ಯಂತರ ಭಕ್ತರ ಮನದಾಳದ ನಡೆದಾಡುವ ದೇವರಾಗಿದ್ದ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಗುರುಗಳು ಮತ್ತು ಅವರ ಭಕ್ತ ಸಮುದಾಯ ನೀಡುವ ಸ್ಫೂರ್ತಿಯೇ ನಮಗೇ ಇಂದಿಗೂ ದೊಡ್ಡ ಶಕ್ತಿಯಾಗಿ ಪ್ರೇರಣೆದಾಯಕ ಸಮಾಜೋ, ಧಾರ್ಮಿಕ ಕಾರ್ಯಗಳು ನೆರವೇರಿಸಲು ಸಾಧ್ಯವಾಗುತ್ತಿದೆ ಎಂದು ಜಿಡಗಾ, ಮುಗಳಖೋಡ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಬುಧವಾರ ಹಮ್ಮಿಕೊಂಡ ಶ್ರೀಮಠದ ಲಿಂ. ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳ 96ನೇ ಜಯಂತ್ಯೋತ್ಸವ ಮತ್ತು ಶಿವಯೋಗಿ ಜ್ಞಾನ ಮಂದಿರ ಸುಸರ್ಜಿತ ಉಚಿತ ವಸತಿ ನಿಲಯ ಉದ್ಘಾಟನೆ ಮತ್ತು ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರರು ನೂರಾರು ಮಠಗಳು ಸ್ಥಾಪಿಸುವ ಮೂಲಕ ಲಕ್ಷಾಂತರ ಭಕ್ತರ ಬಾಳಿಗೆ ಬೆಳಕನ್ನು ದಯಪಾಲಿಸಿ ಶ್ರೀರಕ್ಷೆಯಾಗಿದ್ದ ಅವರು ಮಾಡಿದ ಸಮಾಜೋ ಧಾರ್ಮಿಕ ಕಾರ್ಯಗಳು ಇಂದಿಗೂ ಯಶಸ್ವಿಯಾಗಿ ಮುನ್ನೆಡೆಸಲು ಗುರುಗಳು ದಿವ್ಯ ಶಕ್ತಿ ಮತ್ತು ಭಕ್ತರ ಸ್ಫೂರ್ತಿಯೇ ನಮಗೆ ದೊಡ್ಡ ಶಕ್ತಿಯಾಗಿದೆ ಹಲವು ಸಮಾಜಿಕ ಮತ್ತು ಧಾರ್ಮಿಕ ಕಾರ್ಯಗಳು ಮೂಲಕ ದಿವ್ಯ ಶಕ್ತಿ ಭವ್ಯ ಪರಂಪರೆಯನ್ನು ಮುನ್ನೆಡೆಯುತ್ತಿದೆ ಎಂದು ಹೇಳಿದರು.
ಬಡ ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ನಮ್ಮ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಒಂದು ಬಲವಾದ ಅಸ್ತ್ರವಾಗಿದೆ. ನಾವು ಬಡ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಬೇಕು, ಇದರಿಂದ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿ, ಬಡತನ ನಿವಾರಣೆ ಮಾಡಲು ತಮ್ಮ ಪಾತ್ರವನ್ನು ನಿಭಾಯಿಸಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ಸಿಎಂ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಇಂಡಿ ಶಾಸಕ ಯಶ್ವಂತರಾಯಗೌಡ ಪಾಟೀಲ, ಸೇಡಂ ಕೋತ್ತಲಬಸವೇಶ್ವರ ಸಂಸ್ಥಾನ ಮಠದ ಶಾಸಕ ದೊಡ್ಡಣಗೌಡ ಪಾಟೀಲ ಅವರು ಮಾತನಾಡಿ, ಶ್ರೀಗಳ ಸಮಾಜೋ ಧಾರ್ಮಿಕ ಕಾರ್ಯವನ್ನು ಅತ್ಯುತ್ತಮವಾಗಿ ಸಾಗಿಸುತ್ತಿರುವ ಕಾರ್ಯಕ್ಕೆ ಎಲ್ಲ ರೀತಿಯಿಂದಲೂ ಸಹಕರಿಸಲಾಗುವುದು. ಭಕ್ತರಿಗೆ ಶ್ರೀಮಠದ ಕಾರ್ಯದ ಲಾಭವನ್ನು ತಟ್ಟಲಿ ಎಂದು ಹೇಳಿದರು.
ಕಡಗಂಚಿ ಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಮಾದನಹಿಪ್ಪರಗಾ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಸೇಡಂ ಕೊತ್ತಲಬಸವೇಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ವಿಜಾಪೂರದ ವಿಜುಗೌಡ ಪಟೀಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಶಿವಯೋಗಿ ಜ್ಞಾನ ಪತ್ರಿಕೆಯನ್ನು ಬಿಡೆಯಗಡೆ ನಡೆಯಿತು. ಸಂಪಾದಕ ಜಾನ್ಸನ್ ಗೋಡೆ, ಬಬಲಾದ, ಯಳಸಂಗಿ ಮಠದ ಶ್ರೀಗುರುಪಾದಲಿಂಗ ಶಿವಯೋಗಿಗಳು, ಡಾ ವಿಶ್ವನಾಥರೆಡ್ಡಿ, ಡಾ. ವಿಕ್ರಂ ಸಿದ್ದರಾಮ ರೆಡ್ಡಿ, ಡಾ ಸಂಗ್ರಾಮ ಬಿರಾದಾರ, ಜಿಪಂ ಮಾಜಿ ಉಪಾಧ್ಯಕ್ಷ ಹμರ್Áನಂದ ಗುತ್ತೆದಾರ, ಬಿಜೆಪಿ ಮುಖಂಡ ಆನಂದ ಪಾಟೀಲ, ಗೀತಾ.ಪಿ.ಚಿದ್ರಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಪತ್ರಕರ್ತ ಧ್ವನಿ ಸಂಘದ ರಾಜಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಸೇರಿದಂತೆ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ಧರಾಮ ಯಾದವಾಡ, ಬಸವೇಶ್ವರ ಕೃಷಿ ಕೇಂದ್ರದ ರಾಜಶೇಖರ ಪಾಟೀಲ, ಸೋಲ್ಲಾಪೂರದ ಸಂಗಮೇಶ ಕಾಡಾದಿ ಸೇರಿ ಹಲವು ಜನಪ್ರತಿನಿಧಿಗಳು, ಅಪಾರ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಸವರಾಜ ಚೋಪಾಟೆ ಮತ್ತು ಚಿನ್ನಮಗಿರಿ ವೀರಮಹಾಂತ ಶಿವಾಚಾರ್ಯರು ನಿರೂಪಿಸಿದರು. ಆಸ್ಥಾನ ಕಲಾಬಳಗದಿಂದ ಭಕ್ತಿಗೀತೆಗಳು ಸಾಗಿಬಂದವರು.
ಕಾರ್ಯಕ್ರಮದಲ್ಲಿ ನಡೆದಿದ್ದು:
ಜಿಡಗಾ ನವಕಲ್ಯಾಣ ಮಠದಲ್ಲಿ ವಿದ್ಯುಕ್ತವಾಗಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ 96ನೇ ಜಯಂತಿ,
ಶಿವಯೋಗ ಜ್ಞಾನಮಂದಿರದ 100 ಬಡ ಮಕ್ಕಳ ಉಚಿತ ವಸತಿ ನಿಲಯ ಮಠಾಧೀಶರು, ಗಣ್ಯರಿಂದ ಲೋಕಾರ್ಪಣೆ.
ಉಚಿತ ಶಿಕ್ಷಣಕ್ಕೆ ಧಾನಿಗಳಿಗಾಗಿ ಆ್ಯಪ್ ಲೋಕಾರ್ಪಣೆ.
ಬೀದರನಿಂದ ಆರಂಭಿಸಿದ ಶಿವಯೋಗಿ ಜ್ಞಾನ ಪತ್ರಿಕೆ ಬಿಡುಗಡೆ,
ಉಚಿತ ಶಿಕ್ಷಣಕ್ಕೆ ನಾಡಗೌಡ ಕುಟುಂಬದಿಂದ ಲಕ್ಷರೂಪಾಯಿ ದೇಣಿಗೆ. ವೇದಿಕೆಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಿಸಿ ತೋಟಿಲೋತ್ಸವ ಕೈಗೊಂಡು ಸಂಭ್ರಮಿಸಿದ ಭಕ್ತರು.
ವಿದ್ಯಾರ್ಥಿಗಳಿಗೆ ವಸತಿ ಕಿಟ್ಟ ವಿತರಿಸಲಾಯಿತು.
ಆಗಮಿಸಿದ್ದ ಸಾವಿರಾರು ಭಕ್ತರಿಗೆ ದಾಸೋಹ ಮಹಾಮನೆಯಲ್ಲಿ ಮೃಸ್ಟಾನ್ನ ಸಂತಾರ್ಪಣೆ ನಡೆಯಿತು.