ಹುಪ್ಪಳಾ: ರಾಜಕುಮಾರ ದಾಮೋದರರಾವ ಕಬ್ಬಿಗೆ ಬೆಂಕಿ ಅಪಾರ ಹಾನಿ
ಭಾಲ್ಕಿ: ಏ.3:ತಾಲೂಕಿನ ಹುಪ್ಪಳಾ ಗ್ರಾಮದ ರಾಜಕುಮಾರ ದಾಮೋದರರಾವ ಆಳಂದೆಯವರ 12 ಎಕರೆ ಕಬ್ಬಿಗೆ ಬೆಂಕಿ ಹತ್ತಿ, ಅಪಾರ ಹಾನಿಯಾಗಿದೆ.
ಸದರಿಯವರ ಹುಪ್ಪಳಾ ಗ್ರಾಮದ ಸವೇ ನಂ. 81/3ಯ 12 ಎಕರೆ ಕ್ವಾಡಿ ಕಬ್ಬಿಗೆ ಮಾರ್ಚ 28 ರಂದು ಬೆಳಗಿನಜಾವ 10 ಗಂಟೆ ಸುಮಾರಿಗೆ ಬೆಂಕಿ ತಗುಲಿ ಸಂಪೂರ್ಣ ಬೆಳೆದ ಕಬ್ಬು ಸುಟ್ಟು ಕರಕಲಾಗಿದೆ.
ಕೃಷಿಯನ್ನೇ ನಂಬಿಕೊಂಡಿರುವ ನನ್ನ ಹೊಲದಲ್ಲಿ ಬೆಂಕಿ ತಗುಲಿ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿರುವ ನೋವು ನನಗೆ ತಡೆದುಕೊಳ್ಳದಾಗಿದೆ. ಸರ್ಕಾರ ನನ್ನ ನೋವು ಪರಿಹರಿಸುವ ಕಾರ್ಯಮಾಡಬೇಕು ಎಂದು ತಹಸೀಲ್ದಾರಿಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.