ಹಲಸಿ(ಎಲ್)- ಮೇಕೆಗಳ (ಕುರಿ) ಆಕಸ್ಮಿಕ ಸಾವು
ಭಾಲ್ಕಿ; ಏ.3:ತಾಲೂಕಿನ ಹಲಸಿ(ಎಲ್) ಗ್ರಾಮದಲ್ಲಿ ಎರಡು ಮೇಕೆಗಳು (ಕುರಿಗಳು) ಆಕಸ್ಮಿಕವಾಗಿ ಸಾವನ್ನಪ್ಪಿವೆ.
ಹಲಸಿ(ಎಲ್) ಗ್ರಾಮದ ನಾಗೇಶ ತುಳಸಿರಾಮ ಜಮಾದಾರ ಎನ್ನುವವರಿಗೆ ಸೇರಿದ ಕುರಿಗಳು ಸೋಮವಾರ ರಾತ್ರಿ ಸಾವನ್ನಪ್ಪಿವೆ. ಕುರಿಗಳಿಗೆ ಯಾವ ವಿಷಜಂತುಗಳ ಸ್ಪರ್ಷವಾಗಿದೆಯೋ ತಿಳಿದುಬಂದಿಲ್ಲ. ಲಾಧಾ ಗ್ರಾಮದ ಪಶುವೈದ್ಯಕೀಯ ಅಧಿಕಾರಿ ಖುಬಾ ಪವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಸಂತೋಷ ಪಾಟೀಲ, ಗ್ರಾಮದ ಪ್ರಮುಖರಾದ ಬಾಬುರಾವ ಜಮಾದಾರ, ಬಾಲಾಜಿ ಮೇತ್ರೆ, ಅರ್ಜುನ ಜಮಾದಾರ ಮತ್ತಿತರರು ಇದ್ದರು.