ಅಂಬೇಡ್ಕರ್ ರವರ133ನೇ ಜಯಂತೋತ್ಸವ ನಿಮಿತ್ತ ಪ್ರಬಂಧ ಸ್ಪರ್ಧೆ
ಕಾಳಗಿ.ಎ.3: ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿದ ನಿಮಿತ್ತ ಕಾಳಗಿ ಪಟ್ಟಣದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಪ್ರಬಂಧ ಸ್ಪರ್ಧೆಯು.1)ಮಹಿಳೆಯರ ಏಳಿಗೆಯಲ್ಲಿ ಡಾ// ಬಿ.ಆರ್.ಅಂಬೇಡ್ಕರ್ ರವರ ಪಾತ್ರ ಅಥವ 2) ಡಾ// ಬಿ ಆರ್.ಅಂಬೇಡ್ಕರರ ಸಾಧನೆಯಲ್ಲಿ ರಮಾಬಾಯಿ ಪಾತ್ರ.ಎಂಬ ವಿಷಗಳಿಗೆ ಸ್ಪರ್ಧೆ ಆಯೋಜಿಸಲಾಗಿದ್ದು ಆಸಕ್ತ ಬರಹಗಾರರು ನೊಂದಾಯಿಸಲು ಎಪ್ರಿಲ್ 4 ರಂದು ಕೊನೆಯ ದಿನಾಂಕವಾಗಿದೆ. ಭಾಗವಹಿಸುವ ಸ್ಪರ್ಧಿಗಳಿಗೆ ಎಪ್ರಿಲ್ 7 ರಂದು ಪರೀಕ್ಷೆ ಏರ್ಪಡಿಸಿ ಎಪ್ರಿಲ್ 14 ರಂದು ಸ್ಪರ್ಧಿಗಳಿಗೆ ಬಹುಮಾನ ನೀಡಲಾಗುತ್ತದೆ. ಪ್ರಥಮ ವಿಜೇತರಿಗೆ ರೂ 5000 , ದ್ವೀತಿಯ ಬಹುಮಾನ ರೂ 3000 , ತೃತೀಯ ಬಹುಮಾನ ರೂ 2000 ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದಕಾರಣ ಆಸಕ್ತರು ಭಾಗವಹಿಸಲು ತಿಳಿಸಲಾಗಿದೆ.ನೊಂದಣಿಗಾಗಿ ಶುಲ್ಕ 50 ರೂ ಇದ್ದು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ನಂ ಸಂರ್ಪಕಿಸಲು 9741391600 ಹಾಗೂ 8970692354 ಮತ್ತು 9741514842ಗೆ ಕರೆ ಮಾಡಿ ಭಾಗವಹಿಸಿ ಯಶಸ್ವಿಯಾಗಿಸಲು ಆಯೋಜಕರು ಪತ್ರಕೆ ಮೂಲಕ ವಿನಂತಿ ಕೋರಿದರು.