ಗಾನ ಸಿಂಚನ ಸುಗಮ ಸಂಗೀತ ತರಬೇತಿ ಶಿಬಿರದ ಸಮಾರೋಪ
ಕಲಬುರಗಿ:ಏ.02: ಸಂಗಮೇಶ್ವರ ಮಹಿಳಾ ಮಂಡಳದಲ್ಲಿ ಸುಮನ ಸಂಗೀತ, ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆ ಹಾಗೂ ಸಂಗಮೇಶ್ವರ ಮಹಿಳಾ ಮಂಡಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾನ ಸಿಂಚನ” ಸುಗಮ ಸಂಗೀತ ತರಬೇತಿ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಗಮೇಶ್ವರ ಮಹಿಳಾ ಮಂಡಳಿಯ ಕಾರ್ಯದರ್ಶಿ ಸಂಧ್ಯ ಹೊನಗುಂಟಿಕರ, ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಹಿರಿಯ ತಬಲಾದಕ ಪಂ.ಜಯರಾವ ಕುಲಕರ್ಣಿ ಸಗರ, ನೂ.ವಿ.ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಜಿ.ಎಸ್.ಕುಲಕರ್ಣಿ, ಗುಲಬರ್ಗಾ ವಿಶ್ವವಿದ್ಯಾಲಯದ ಸಂಗೀತ ಉಪನ್ಯಾಸಕಿ ಡಾ.ಲಕ್ಷ್ಮೀ ಶಂಕರ ಜೋಶಿ, ಶಹಾಪೂರಿನ ಹಿರಿಯ ಪರ್ತಕರ್ತ ನಾರಾಯಣಾಚಾರ್ಯ ಸಗರ, ಸುಮನ ಸಂಗೀತ, ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ವಿಜಯೇಂದ್ರ ಸಗರ, ಡಾ.ರಾಘವೇಂದ್ರ ಕುಲಕರ್ಣಿ, ಶೃತಿ ಸಗರ, ಡಾ.ನಿಖಿಲ ಕೊಲ್ಹಾರಕರ, ಡಾ.ರವೀಂದ್ರ ಕುಲಕರ್ಣಿ, ಜಯತೀರ್ಥ ಆದ್ಯ, ಬದರಿನಾಥ ಮುಡಬಿ, ಕುಮಾರ ವೆಂಕಟೇಶ ಕುಲಕರ್ಣಿ ಸೇರಿದಂತೆ ಸಂಗೀತ ಕಲಾವಿದರು, ಮಕ್ಕಳು ಇದ್ದರು.