ಪಿಎಚ್‍ಡಿಗೆ ನೆಟ್ ಕಡ್ಡಾಯ: ಖಂಡನೆ
ಕಲಬುರಗಿ,ಏ.2:ಪಿ ಹೆಚ್ ಡಿ ಪ್ರವೇಶಕ್ಕೆ ನೆಟ್ ಅರ್ಹತೆಯನ್ನು ಕಡ್ಡಾಯಗೊಳಿಸಿರುವ ಯುಜಿಸಿಯ ನಿಲುವನ್ನು ಎಐಡಿಎಸ್ ಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ.
ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೋಚಿಂಗ್ ಅನಿವಾರ್ಯವಾಗಿದೆ. ದುಬಾರಿ ಕೋಚಿಂಗ್ ಪಡೆಯಲು ಸಾಧ್ಯವಿರದ ಅಭ್ಯರ್ಥಿಗಳನ್ನು ಪಿಎಚ್‍ಡಿಯಿಂದ ವಂಚಿತರನ್ನಾಗಿಸುವ ಈ ನಿಲುವು ಅನ್ಯಾಯದಿಂದ ಕೂಡಿದೆ. ಕೋಚಿಂಗ್ ಮಾಫಿಯಾಗೆ ಮಣೆ ಹಾಕಲು ಇದನ್ನು ಜಾರಿಗೊಳಿಸಲಾಗಿದೆ. ನೆಟ್ ಪರೀಕ್ಷೆ ಮೂಲಕ ಮೂರು ಹಂತಗಳ ಮಾನದಂಡವನ್ನು ನಿಗದಿಪಡಿಸಿರುವ ಯುಜಿಸಿಯ ಈ ನಿಯಮವು ಶಿಕ್ಷಣದಲ್ಲಿ ತಾರತಮ್ಯವನ್ನು ಶಾಸನಬದ್ಧಗೊಳಿಸುತ್ತದೆ.
ಕೂಡಲೇ ಈ ನಿಯಮವನ್ನು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.