ಉಚಿತ ಬೇಸಿಗೆ ಶಿಬಿರ
ವಿಜಯಪುರ,ಏ.2:ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲಾ ಪಂಚಾಯತಿ ಕಚೇರಿ ಬಳಿ ಇರುವ ವಿಜ್ಞಾನ ಕೇಂದ್ರದ ವತಿಯಿಂದ ಉಚಿತ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಶಿಬಿರದಲ್ಲಿ ಐದರಿಂದ 10ನೇ ತರಗತಿಯ ಮಕ್ಕಳು ಭಾಗವಹಿಸಬಹುದಾಗಿದೆ.
ಶಿಬಿರದ ವಿಶೇಷತೆಗಳೇನೆಂದರೆ ಇಂಜಿನಿಯರಿಂಗ್ ಬೇಸ್ಡ್ ಲನಿರ್ಂಗ್ ಚಟುವಟಿಕೆಗಳು, ಕಲೆಯ ಕುರಿತಾದ ಚಟುವಟಿಕೆಗಳು ಹಾಗೂ ಆಟಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಈ ವರ್ಷದ ಉಚಿತ ಬೇಸಿಗೆ ಶಿಬಿರದ ಮುಖ್ಯ ಆಯಾಮಗಳಾಗಿರುತ್ತವೆ, ಜೊತೆಗೆ ವಿಜ್ಞಾನದ ಚಟುವಟಿಕೆಗಳು, ಕಂಪ್ಯೂಟರ್ ತರಗತಿಗಳು, ಎಲೆಕ್ಟ್ರಾನಿಕ್ಸ್, ರೋಬೋಟಿಕ್, ಮೆಕ್ಯಾನಿಕ್ಸ್ ಮತ್ತು ಸ್ಲೋಕನ್ ಇಂಗ್ಲೀಷ್ ತರಗತಿಗಳು ಕೂಡ ಈ ಒಂದು ಬೇಸಿಗೆ ಶಿಬಿರದಲ್ಲಿ ನಡೆಸಲು ನಿರ್ಧರಿಸಿರುತ್ತಾರೆ. ಆಸಕ್ತ ವಿದ್ಯಾರ್ಥಿಗಳು ಈ ಒಂದು ಶಿಬಿರವನ್ನು ಸೇರಿಕೊಳ್ಳಬಹುದು ನಿರಂತರವಾಗಿ 30 ದಿನಗಳ ಕಾಲ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಲಾಗುವುದು ಮತ್ತು ಇಲ್ಲಿ ನಡೆಯುವ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಕೂಡ ಬಹುಮಾನವನ್ನು ನೀಡಲಾಗುವುದು.
ಪ್ರಸ್ತುತವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಚಟುವಟಿಕೆಗಳನ್ನು ಕೂಡ ಈ ವರ್ಷದಲ್ಲಿ ಪರಿಚಯಿಸುತಿದ್ದೇವೆ ನಮಗೆ ಸಹಕಾರ ನೀಡುತ್ತಿರುವರು ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಲೆಯ ಅಟಲ್ ಟಿಂಕರಿಂಗ ಲ್ಯಾಬ್ ಇವರ ಸಹಯೋಗದೊಂದಿಗೆ ಈ ಬೇಸಿಗೆ ಶಿಬಿರವನ್ನು ಕೂಡ ಮಾಡಲಾಗುತ್ತಿದೆ. ಅದೇ ರೀತಿಯಾಗಿ ವಿಜಯಪುರ ಗ್ರಾಮೀಣ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬುರ್ನಾಪುರದಲ್ಲಿ ಕೂಡ ಬೇಸಿಗೆ ಶಿಬಿರವನ್ನು ಮಾಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ ಅಣಮಿ, ವಿಜ್ಞಾನ ಕೇಂದ್ರದ ಮುಖ್ಯಸ್ಥರು-ಮೊ.7892322129, ಮಾರ್ಗದರ್ಶಕರು ಮೊ.8123401156-ಆಕಾಶ, ಮೊ.8951311236-ಕೃಷ್ಣಾ, ಮೊ.9730457216ಸಂತೋಷ ಅವರನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.