ಆರೋಗ್ಯ ಇಲಾಖೆಯಿಂದ ಮತದಾನ ಜಾಗೃತಿ ಜಾಥಾ
ಸಂಜೆವಾಣಿ ವಾರ್ತೆ
ಸಿರುಗುಪ್ಪ: ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಬಳ್ಳಾರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣಾ 2024ರ  ಕುರಿತು ನಗರದ ವಿವಿಧ ವಾರ್ಡಗಳಲ್ಲಿ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಅಂಗವಾಗಿ ಮತದಾನ ಜಾಗೃತಿ ಜಾಥಾ ಅಭಿಯಾನವು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಹಮ್ಮಿಕೊಳ್ಳಲಾಗಿತ್ತು.
ಮತದಾನ-ನಮ್ಮ ಹಕ್ಕು, ನಮ್ಮ ಮತ-  ನಮ್ಮ ಆಯ್ಕೆ
ಯಾವ ಭಯವಿಲ್ಲದೆ-ಮತದಾನ ಮಾಡೋಣ
18ವರ್ಷ ಮೇಲ್ಪಟ್ಟವರು- ಕಡ್ಡಾಯವಾಗಿ ಮತದಾನ ಮಾಡಿ ಎಂಬ ಘೋಷಣೆಗಳೊಂದಿಗೆ ಆರೋಗ್ಯ ಇಲಾಖೆಯಿಂದ ಜನರಿಗೆ ಜಾಗೃತಿ ಮೂಡಿಸಲಾಯಿತು.
ಅಮೂಲ್ಯವಾದ ಮತದಾನ ದೇಶಕ್ಕೆ ಹಿತ ಇದು ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಆದ್ದರಿಂದ 18 ವರ್ಷ ಮೇಲ್ಪಟ್ಟವರೆಲ್ಲರು ಮತ ಚಲಾಯಿಸುವುದು ಆದ್ಯ ಕರ್ತವ್ಯವಾಗಿದೆ, ಯಾವುದೇ ಕಾರಣಕ್ಕೂ ಮತ ಹಾಕದೆ ಇರುವಂತಿಲ್ಲ ಎಂದು ಡಾ.ಈರಣ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ ರೆಡ್ಡಿ, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ನಾಗಪ್ರಿಯ ರಾಣಿ ಮತ್ತು ಬಿಪಿಎಂ,  ತಾಲೂಕು ಸೀನಿಯರ್, ಬಿ ಹೆಚ್ ಈ ಓ,  ಎಸ್ ಟಿ ಎಲ್ ಎಸ್, ಎಸ್ ಟಿ ಎಸ್,  ಫಾರ್ಮಸಿ ಆಫೀಸರ್, ಲ್ಯಾಬ್ ಟೆಕ್ನಿಷಿಯನ್ಸ್, ಸ್ಟ್ಯಾಫ್ ನರ್ಸ್ , ಹಾಗೂ ಗ್ರೂಪ್ ಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.