ಗಣಿ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಲು ಮನವಿ
ಸಂಜೆವಾಣಿ ವಾರ್ತೆ
ಸಂಡೂರು :ಏ:2  ಕೆ.ಐ.ಸಿ.ಓ.ಎಲ್. ಲಕ್ಷ್ಮೀಪುರ ಸಂಡೂರಿನಲ್ಲಿ ಗಣಿ ಚಟುವಟಿಕೆ ಕಾರ್ಯ ಪ್ರಾರಂಭಿಸುತ್ತಿರುವುದು ಸ್ಥಳಿಯರಾದ ನಾವು ತಾವು ಗಣಿ ಕಂಪನಿಯನ್ನ ಸ್ಥಾಪಿಸುತ್ತಿರುವುದು ಸ್ವಾಗತ ಅಂತೆಯೇ ಸಂಡೂರಿನ ಪ್ರಕೃತಿ ಬಳಸಿಕೊಳ್ಳುವ ತಾವುಗಳು ಸ್ಥಳೀಯರಿಗೆ, ಕನ್ನಡಿಗರಿಗೆ ತಮ್ಮ ಗಣಿ ಕಂಪನಿಯಲ್ಲಿ ಎಲ್ಲಾ ತರಹದ ಉದ್ಯೋಗಗಳಿಗೆ ಹೆಚ್ಚಿನ ಆದ್ಯತೆಯನ್ನ ನೀಡುವುದರ ಮೂಲಕ ಸ್ಥಳೀಯ ನಿರುದ್ಯೋಗಿ ಯವಕ ಯುವತಿಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲು ಕರ್ನಾಟಕ ರಕ್ಷಣಾವೇದಿಕೆ ಸಂಡೂರು ತಾಲ್ಲೂಕು ಘಟಕವು ಸಂಡೂರಿನ ಸಮಸ್ತರ ನಾಗರೀಕರ ಪರವಾಗಿ ತಾಲ್ಲೂಕು ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರ್ನಾಕಟ ರಕ್ಷಣವೇದಿಕೆ ರಾಜ್ಯಧ್ಯಕ್ಷ ಟಿ.ಎಂ. ನಾರಾಯಣಗೌಡ ಅದೇಶದಂತೆ ತಾಲ್ಲೂಕು ಅಧ್ಯಕ್ಷ ಸತ್ಯನಾರಾಯಣಮಾಸ್ತಿಯವರು ಸಂಡೂರು ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಕೆ.ಐ.ಓ. ಸಿ.ಎಲ್. ಮುಖ್ಯ ವ್ಯವಸ್ಥಾಪಕರಿಗೆ ಮನವಿಯನ್ನ ಸಲಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕರ್ನಾಕಟ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪಧ್ಯಕ್ಷರಾದ ಪ್ರಕಾಶ್ ಗೋಪಾಲ ಶಿಂಧೆ ಹಿರಿಯರಾದ ಸಿ.ಡಿ. ಬಾಸ್ಕರ ಕುಮಾರಸ್ವಾಮಿ ಭರ್ಮ ರೆಡ್ಡಿ ವಕೀಲರು ವಿನೋದ ಮುಂತಾದವರ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.