ಮೋದಿ ಪ್ರಧಾನಿಯಾಗಲು ಶ್ರೀರಾಮುಲುಗೆ ಮತ ಹಾಕಿ- ಅನಿಲ್ ಲಾಡ್
ಸಂಜೆವಾಣಿ ವಾರ್ತೆ
ಸಂಡೂರು, ಏ.01  ಸಂಡೂರು: ತುಕರಾಂ ಅವರು ಗೆದ್ದರೆ ಮಂತ್ರಿಯಾಗುವುದಿಲ್ಲ, ಸೋತರೆ ಮಂತ್ರಿಯಾಗುತ್ತಾರೆ, ಅದ್ದರಿಂದ ಶ್ರೀ ರಾಮುಲು ಗೆದ್ದರೆ ಮಂತ್ರಿಯಾಗಿ, ಮೋದಿ ಪ್ರಧಾನಿಯಾಗುತ್ತಾರೆ, ಅದ್ದರಿಂದ ಈ ಬಾರಿ ಶ್ರೀರಾಮುಲು ಅವರನ್ನು ಗೆಲ್ಲಿಸುವ ಮೂಲಕ ಮತ್ತೋಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಮಾಜಿ ಶಾಸಕ ಅನಿಲ್ ಹೆಚ್.ಲಾಡ್ ಕರೆನೀಡಿದರು.
ಅವರು ಪಟ್ಟಣದ ವಾಲ್ಮೀಕಿ ಭವನದ ಹತ್ತಿರ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರವಾಗಿ ಬಹಿರಂಗ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ  ಈ ಹಿಂದೆ ನಾನು ಮತ್ತ ನಮ್ಮ ಸಹೋದರರು ತುಕರಾಂ ಅವರ ಗೆಲುವಿಗೆ ಶ್ರಮಿಸಿ ಅವರನ್ನು ರಾಜಕೀಯಕ್ಕೆ ತಂದವರೇ ನಾವು, ಅದರೆ ಅವರು ಸೋತರೂ ಸಹ ಮಂತ್ರಿಯಾಗುತ್ತಾರೆ, ಅದ್ದರಿಂದ ಸಂಸತ್ತಿನಲ್ಲಿ ನಮ್ಮ ಸಮಸ್ಯೆಗಳನ್ನು ಪ್ರಸ್ತುತ ಪಡಿಸಲು ಶ್ರೀ ರಾಮುಲು ಅವರನ್ನು ಗೆಲ್ಲಿಸಬೇಕು, ಜನಾರ್ಧನ ರಡ್ಡಿಯವರು ಹಾಗೂ ಶ್ರೀ ರಾಮುಲು ಅವರು ಪೂರ್ಣಪ್ರಮಾಣದಲ್ಲಿ ನಮ್ಮನ್ನು ಕರೆದು ಚರ್ಚಿಸಿ ಪ್ರಚಾರವನ್ನು ಮಾಡುವ ಮೂಲಕ ಮೋದಿಯವರನ್ನು ಪ್ರಧಾನಿಯಾಗಿಸಬೇಕು, ಅದಕ್ಕಾಗಿ ಶ್ರೀರಾಮುಲು ಅವರಿಗೆ ಮತ ನೀಡುವ ಮೂಲಕ ವಿಜಯಶಾಲಿಗಳನ್ನಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ ಅಭ್ಯರ್ಥಿ ಯಾದ ಶ್ರೀ ರಾಮುಲು ಅವರು ಮಾತನಾಡಿ ಈ ದೇಶವನ್ನು ಅಳಿದ ನೆಹರೂ ಕುಟುಂಬದವರು 75 ವರ್ಷಗಳ ಕಾಲ ಅಡಳಿತ ನಡೆಸಿದರೂ ಇಂದಿಗೂ ನಮಗೆ ಸರಿಯಾದ ಕುಡಿಯುವ ನೀರಾಗಲಿ, ರಸ್ತೆಗಳಾಗಲಿ, ಯಾವುದೇ ಅಭಿವೃದ್ದಿ ಕಾರ್ಯಗಳು ಅಗಲಿಲ್ಲ, ಬರೀ ವಂಶ ಪಾರಂಪರ್ಯವಾಗಿ ಆಡಳಿತ ನಡೆಸಿದರು, ನೆಹರು, ಮಗಳು ಇಂದಿರಾಗಾಂಧಿ, ಮಗ ರಾಜೀವ್ ಗಾಂಧಿ, ಈಗ ರಾಹೂಲ್ ಗಾಂಧಿ ಎನ್ನುತ್ತಿದ್ದಾರೆ, ಇದು ಹೋಗಬೇಕಾದರೆ ಮತ್ತೋಮ್ಮೆ ಮೋದಿಯವರಿಗೆ ಮತವನ್ನು ನೀಡುವ ಮೂಲಕ ಈ ದೇಶದ ಪ್ರಗತಿಗೆ ನಾಂದಿಯಾಗಬೇಕು, ಯಾವುದೇ ರೀತಿಯ ಕುಟುಂಬದ ಸದಸ್ಯರಿಗೆ ಯಾವುದೇ ಅಧಿಕಾರ ನೀಡದೇ, ಕೇವಲ ಪಕ್ಕೀರನ ರೀತಿಯಲ್ಲಿ ದೇಶಕ್ಕಾಗಿ ದಿನದ 24 ಗಂಟೆ ದುಡಿಯುತ್ತಿರುವ, ಯಾವುದೇ ವಂಶಪಾರಂಪರ್ಯ ಆಡಳಿತ ನಡೆಸುತ್ತಿರುವ ಮೋದಿಜಿಯವರು ಈ ದೇಶದ ಪ್ರಧಾನಿಯಾಗಬೇಕು, ಜಗತ್ತಿನಲ್ಲಿ ದೇಶ ನಂ. 1 ಸ್ಥಾನಕ್ಕೆ ಏರಬೇಕು, ದೇಶದ ಭದ್ರತೆ ಹೆಚ್ಚಾಗಬೇಕು, ಜಗತ್ತು ನಮ್ಮ ಕಡೆ ನೋಡಬೇಕು ಎನ್ನುವ ಮಹತ್ತರ ಗುರಿಯನ್ನು ಹೊಂದಿದ್ದು ಅದಕ್ಕೆ ಈ ಬಾರಿ ಬಿಜೆಪಿ ಪಕ್ಷದ ಶ್ರೀರಾಮುಲು ಅವರಿಗೆ ಮತ ನೀಡುವ ಮೂಲಕ ಮತ್ತೋಮ್ಮೆ ಮೋದಿ ಅಡಳಿತ ನಡೆಸಬೇಕು, ದೇಶದ ಪ್ರಗತಿಯನ್ನು ನೋಡಿದರೆ ಕರೋನ ಸಂದರ್ಭದಲ್ಲಿ ಜಗತ್ತೇ ನಮ್ಮ ಕಡೆ ನೋಡಿತು ನಾವೇ ಸ್ವಂತಹ ವ್ಯಾಕ್ಸಿನ್ ಕಂಡು ಹಿಡಿಯುವಂತೆ ಮಾಡಿ ಜಗತ್ತಿಗೆ 150 ರಾಷ್ಟ್ರಗಳಿಗೆ ಕಳುಹಿಸಿದ್ದು ಮೋದಿಯವರ ಸಾಧನೆ, ರಷ್ಯಾದಂತಹ ರಾಷ್ಟ್ರ ಯುದ್ದ ನಿಲ್ಲಿಸಿ ಭಾರತೀಯರನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದು ಮೋದಿಯವರ ಶಕ್ತಿ, ಎಲ್ಲಿಯೂ ಸಹ ಉಗ್ರರು ಇಣುಕಿ ನೋಡಂತೆ ಮಾಡಿದ್ದು, ನಮ್ಮ ಸೈನಿಕರಿಗೆ ಶಕ್ತಿ ತುಂಬಿದ್ದು, ವಿಜ್ಞಾನಿಗಳನ್ನು ಹೊಸತನಕ್ಕೆ, ಸಂಶೋಧನೆಗೆ ಹಚ್ಚಿದ್ದು, ಒಂದೇ ಎರಡೇ ಇಡೀ ಜಗತ್ತು ಭಾರತದಂತಹ ಪ್ರಧಾನಿ ಬೇಕು ಎನ್ನುವಂತಾಗಿದೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಮೋದಿಯವರಿಗೆ ಮತ ಹಾಕುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ತಾಲೂಕು ಅಧ್ಯಕ್ಷ ನಾನಾನಿಕ್ಕಂ, ಉಡೇದ ಸುರೇಶ್, ಆಶೋಕ ಶೆಟ್ಟಿ, ದರೋಜಿ ರಮೇಶ್, ರಘು, ತಾಲೂಕು ಬಿ.ಜೆ.ಪಿ ಘಟಕದ ಮಹಿಳಾ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಅದ್ದೂರಿ ಭಾಷಣದ ನಂತರ ವಾಲ್ಮೀಕಿ ಮಂದಿರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ಶ್ರೀ ರಾಮುಲು  ಪಟ್ಟಣದ ಬೀದಿಗಳಲ್ಲಿ ಮತಯಾಚನೆ ಮಾಡಿದರು.
ವಿಶೇಷತೆ: ಪುರಸಭೆಯ ಚುನಾವಣೆಯಲ್ಲಿ, ಎಂ.ಎಲ್.ಎ ಚುನಾವಣೆಯಲ್ಲಿ ಇದೇ ಶ್ರೀ ರಾಮುಲು ವಿರುದ್ದ ಹೋರಾಡಿದ ಅನಿಲ್ ಲಾಡ್ ಅವರು ಒಂದೇ ವೇದಿಕೆಯಲ್ಲಿ ಒಂದೇ ಮಾಲೆಯನ್ನು ಹಾಕಿಕೊಳ್ಳುವ ಮೂಲಕ ತಮ್ಮ ಹಿಂದಿನ ಬಿಜೆಪಿ ರಾಜಕೀಯವನ್ನು ಅನಿಲ್ ಲಾಡ್ ಅವರು ನೆನಸಿಕೊಂಡಂತೆ ಇತ್ತು, ಅಲ್ಲದೆ ಜನಾರ್ಧನ ರಡ್ಡಿಯ ವಿರುದ್ದ ತೊಡೆ ತಟ್ಟಿದ್ದ ಲಾಡ್ ಅವರು ಇಂದು ಅವರ ವಿಷಯವನ್ನು ತಮ್ಮ ಭಾಷಣದಲ್ಲಿ ಚರ್ಚಿಸಿದ್ದು ಸಹ ಬಹು ವಿಶೇಷವಾಗಿತ್ತು.