ವಿಜೃಂಭಣೆಯಿಂದ ಜರುಗಿದ ಭಜನೆ ಕಾರ್ಯಕ್ರಮ
ಚಿಟಗುಪ್ಪ:ಏ.2: ಪಟ್ಟಣದ ಜನತಾ ನಗರ ಕಾಲೋನಿಯಲ್ಲಿರುವ ಎ. ಆರ್. ಹಡಪದ ನಿಲಯದ ನೂತನ ಗೃಹ ಪ್ರವೇಶ ಹಾಗೂ ವಾಸ್ತು ಶಾಂತಿ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮವನ್ನು ಶ್ರೀ ಸೋಮಲಿಂಗೇಶ್ವರ ಭಜನಾ ಮಂಡಳಿ ಸಿಂಧನಕೇರಾ ಹಾಗೂ ಕಲ್ಯಾಣ ಕರ್ನಾಟಕ ಆಕಾಶವಾಣಿ ಕಲಾವಿದರಾದ ಮಂಜುನಾಥ್ ಜಲಸಿಂಗಿ ಅವರ ಜಂಟಿಯಲ್ಲಿ ರಾಜಕುಮಾರ ಆರ್. ಹಡಪದ ಅವರ ನೂತನ ಗೃಹ ಪ್ರವೇಶ ಹಾಗೂ ವಾಸ್ತು ಶಾಂತಿ ಕಾರ್ಯಕ್ರಮದಲ್ಲಿ ಭಜನೆ, ಕಾರ್ಯಕ್ರಮ ಮಾರ್ಚ್ 30ರಂದು ಶನಿವಾರ ರಾತ್ರಿ ಅದ್ದೂರಿಯಾಗಿ ಜರುಗಿತ್ತು. ತಬಲಾ ಸೇವೆಗೆ ಛತ್ರಪ್ಪಾ ಕೆ.ಹಡಪದ ಸಾಥ್ ನೀಡಿದರು. ಸಂಗೀತ ಗಾಯನ ಸೇವೆಗೆ ಮಂಜುನಾಥ ಉಡಮನಳ್ಳಿ ಸಾಥ್ ನೀಡಿದರು. ಭಜನೆ ಕಾರ್ಯಕ್ರಮಕ್ಕೆ ಮನೋಹರ ಕಾಡವಾದಿ , ಭೀಮಶಾ ಹಣಗಾರ್, ಮಡೇಪ್ಪಾ ಹಡಪದ, ಕರೇಪ್ಪ ಹಡಪದ, ಸೂರ್ಯಕಾಂತ ಹಡಪದ, ವೆಂಕಟ ಪೂಜಾರಿ ಫಾತ್ಮಪುರ್, ನಿತಿನ್ ಮಾಶೆಟ್ಟಿ ಗಾಯನಕ್ಕೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಹಣಮಂತ ಹಡಪದ, ರಾಜಕುಮಾರ ಆರ್. ಹಡಪದ, ಶಿವಕುಮಾರ್ ಹಡಪದ, ದತ್ತು ಹಡಪದ, ಅಭಿಷೇಕ ಹಡಪದ, ಆಯುಷ್ ಎ. ಹಡಪದ, ಆದಿತ್ಯ ಎ. ಹಡಪದ, ನಾಗೇಶ್ ಸಿಂಧನಕೇರಾ, ಪ್ರವೀಣ ಕುಲಕರ್ಣಿ, ಸೈಯದ್ ಮೌಲಾ, ಸೇರಿದಂತೆ ಮಹಿಳಾ ತಾಯಿಯಂದಿಯರು ಮಕ್ಕಳು ಉಪಸ್ಥಿತರಿದ್ದರು.