ಕನ್ನಡ ಶಾಲೆ ಮುಚ್ಚದಂತೆ ಕರವೇ ಮನವಿ
ಔರಾದ್ :ಏ.2: ತಾಲೂಕಿನ ಕಿರಗುಣವಾಡಿ ಗ್ರಾಮದ ಮಾತೋಶ್ರೀ ಜೀಜಾಬಾಯಿ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚಲು ಹೊರಟಿರುವ ಕ್ರಮ ಖಂಡಿಸಿ ಕರವೇ(ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಗಡಿಭಾಗದ ಕನ್ನಡ ಶಾಲೆ ಮುಚ್ಚದಂತೆ ಮನವಿ ಮಾಡಿದರು.
ತಾಲೂಕಿನ ಗಡಿ ಭಾಗದಲ್ಲಿ ಬಡವರ ಕೂಲಿ ಕಾರ್ಮಿಕರ ಮಕ್ಕಳು ಕಿರಗುಣವಾಡಿ ಗ್ರಾಮದ ಮಾತೋಶ್ರೀ ಕನ್ನಡ ಮಾಧ್ಯಮ ಶಾಲೆಯಲ್ಲಿ ಅದೆಷ್ಟೋ ಮಕ್ಕಳ ಭವಿಷ್ಯ ಉಜ್ವಲವಾಗಿದೆ. ಸರ್ಕಾರ ಗಡಿ ಭಾಗದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಬೇಕು ಇದ್ದ ಕನ್ನಡ ಶಾಲೆಯನ್ನು ದಾಖಲಾತಿ ಇಲ್ಲ ಎಂಬ ನೆಪವೊಡ್ಡಿ ಶಾಲೆ ಮುಚ್ಚಲು ಹೊರಟಿರುವ ಕ್ರಮ ಕೈ ಬಿಡಬೇಕು. ಸುಳ್ಳು ದಾಖಲೆ ಸೃಷ್ಟಿಸಿದವರ ವಿರುದ್ಧ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಅನಿಲ ದೇವಕತ್ತೆ, ರಾಜು ಮುದಾಳೆ, ಮುನ್ನಾ ಹಕ್ಕೆ, ಸಂಜು ಮೇತ್ರೆ, ಆಕಾಶ ದೇವಕತೆ, ಶ್ರೀಕಾಂತ ಮೇತ್ರೆ, ಆಕಾಶ ಮೇತ್ರೆ, ದತ್ತಾತ್ರಿ ಮುದಾಳೆ ಸೇರಿದಂತೆ ಇನ್ನಿತರರಿದ್ದರು.