ಎ.14 ರಂದು ಡಾ. ಅಂಬೇಡ್ಕರರ 133ನೇ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ ಸಮಾಜದ ಹಿರಿಯರು ಯುವಕರಿಗೂ ಒಂದು ಅವಕಾಶ ನೀಡಲಿ:ಉಮೇಶ ಸ್ವಾರಳ್ಳಿಕರ್
ಬೀದರ:ಏ.2: ಸುಮಾರು 35 ವರ್ಷಗಳ ಕಾಲ ಸಮಾಜದ ಹಿರಿಯರು ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಯುವಕರಾದ ನಾವು ತನು ಮನ ಧನದಿಂದ ಸಹಕಾರ ನೀಡಿದ್ದೇವೆ. ಆದರೆ ಈಗ ಯುವಕರು ಕೂಡಿ ಜಯಂತಿ ಆಚರಣೆ ಮಾಡುತ್ತಿದ್ದರೆ ಹಿರಿಯರು ಮತ್ತೊಂದು ಸಭೆ ಕರೆದಿರುವುದು ವಿಷಾದನೀಯ ಎಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಉಮೇಶ ಸ್ವಾರಳ್ಳಿಕರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ 35 ವರ್ಷಗಳಿಂದ ಜಯಂತಿ ಸಂದರ್ಭದಲ್ಲಿ ಸಣ್ಣ ಸೇವೆಯಿಂದ ಹಿಡಿದು ದೊಡ್ಡ ಸೇವೆವರೆಗೆ ಜವಾಬ್ದಾರಿಗಳನ್ನು ಹೊತ್ತು ಕಾರ್ಯ ಮಾಡಿದ್ದೇವೆ. ಯುವಕರಿಗೂ ಜವಾಬ್ದಾರಿ ನೀಡಿ ಎಂದರೆ ಇಂದಿಗೂ ನೀಡುತ್ತಿಲ್ಲ. ಸಭೆಗೆ ಕರೆದರೆ ಅಲ್ಲಿದ್ದೇವೆ ಇಲ್ಲಿದ್ದೇವೆ ಎಂದು ಸುಳ್ಳು ಹೇಳಿ ಸಭೆಗೂ ಹಾಜರಾಗಿಲ್ಲ. ನೀವು ಹೀಗೆ ಮಾಡಿದರೆ ಸಮಾಜ ನಿಮಗೆ ಛೀಮಾರಿ ಹಾಕುತ್ತದೆ ಎಂದು ಉಮೇಶ ತಮ್ಮ ಅಸಮಾಧಾನ ಹೊರಹಾಕಿದರು.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿ ಗೌರವಾಧ್ಯಕ್ಷ ವಿಷ್ಣುವರ್ಧನ ವಾಲದೊಡ್ಡಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉತ್ಸವವನ್ನು ಏಪ್ರಿಲ್ 14 ರಂದು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಪ್ರಯುಕ್ತ ಐದು ದಿವಸಗಳ ಕಾಲ ನಗರದಲ್ಲಿ ರಂಗೋಲಿ, ಪ್ರಬಂಧ, ರಸಪ್ರಶ್ನೆ ಮುಂತಾದ ಸಾಂಸ್ಕøತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ ಎಂದರು. ಅಲ್ಲದೇ ಜಯಂತಿ ಹೆಸರಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬ ಅಪಪ್ರಚಾರ ಕೂಡ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಾರಿ ಯಾರಿಗೂ ಕೈಚಾಚದೇ ಸಮಾಜದ ಉನ್ನತ ಸ್ಥಾನದಲ್ಲಿರುವ ಗಣ್ಯರ ಹತ್ತಿರ ಧನಸಹಾಯ ಪಡೆದು ಡಾ. ಬಾಬಾ ಸಾಹೇಬರ ಜಯಂತಿ ಯಶಸ್ವಿಯಾಗಿ ಮಾಡಿತೋರಿಸುತ್ತೇವೆ. ದಯವಿಟ್ಟು ಯುವಕರಿಗೆ ಅಡ್ಡಗಾಲು ಹಾಕಬೇಡಿ. ಅನೀಲಕುಮಾರ ಬೆಲ್ದಾರ ಅವರು ದಯವಿಟ್ಟು ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು.
ಮೆರವಣಿಗೆ ಸಮಿತಿ ಅಧ್ಯಕ್ಷ ರಾಹುಲ್ ಡಾಂಗೆ ಮಾತನಾಡಿ ನಾನು ಸುಮಾರು 200 ಯುವಕರನ್ನೊಳಗೊಂಡಂತೆ ಜನವಾಡಾ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಭೆ ಕರೆದಿದ್ದೆ. ಇಲ್ಲಿ ಸರ್ವಾನುಮತದಿಂದ ಉಮೇಶ ಸ್ವಾರಳ್ಳಿಕರ್ ಅವರನ್ನು ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಸಮಾಜದ ಹಿರಿಯರಿಗೆ ಕರೆದರೂ ಮುಂದೆ ಬರುತ್ತಿಲ್ಲ. ಯುವಕರಿಗೆ ಸಹಕಾರ ನೀಡುತ್ತಿಲ್ಲ. ದಯವಿಟ್ಟು ಸಹಕಾರ ನೀಡಬೇಕೆಂದು ಕೋರಿದರು.
ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ ಗೋರನಾಳಕರ್, ಖಜಾಂಚಿ ವಿನೋದ ಬಂದಗೆ, ಮಹಿಳಾ ಸಮಿತಿ ಅಧ್ಯಕ್ಷೆ ಸುಧಾಮಣಿ ಗುಪ್ತಾ, ಮೆರವಣಿಗೆ ಸಮಿತಿ ಉಪಾಧ್ಯಕ್ಷ ರವಿ ಭೂಸಂಡೆ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಡೊಂಗರೆ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಪ್ರಕಾಶ ರಾವಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.