ಜಾಗೃತಿ ಪಬ್ಲಿಕ್ ಶಾಲೆಯ 2ನೇ ವಾರ್ಷಿಕೋತ್ಸವ ಆಚರಣೆ
ಬೀದರ :ಏ.2:ನಗರದ ಚಿದ್ರಿ ಬಡಾವಣೆಯಲ್ಲಿರುವ ಜಾಗೃತಿ ಪಬ್ಲಿಕ್ ಸ್ಕೂಲ್‍ನ 2ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಕು. ವಿಜಯಲಕ್ಷ್ಮೀ ಬೆಹೆನಜಿ ಬ್ರಹ್ಮಕುಮಾರಿ ಸೆಂಟರ್ ರಾಮನಗರ ರವರು ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ಮಕ್ಕಳು ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಪಾಲಕರೂ ಕೂಡ ಮಕ್ಕಳ ಶಿಕ್ಷಣದ ಕಡೆ ಗಮನಹರಿಸುವುದು ಹಾಗೂ ಮಕ್ಕಳನ್ನು ಚಿಕ್ಕನಿಂದಾಗಲೇ ಉತ್ತಮ ಸಂಸ್ಕಾರ ನೀಡುವುದು ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಬೀದರ ಉತ್ತರ ಶಾಸಕರಾದ ಶ್ರೀ ರಹೀಂ ಖಾನ್ ಆಗಮಿಸಿದರು, ಮುಖ್ಯ ಅತಿಥಿಗಳಾಗಿ ಅಮೃತರಾವ ಚಿಮಕೋಡ ಅಧ್ಯಕ್ಷರು, ಮಹಾತ್ಮಾ ಬೊಮಗೊಂಡೇಶ್ವರ ಶಿಕ್ಷಣ ಸಂಸ್ಥೆ ಬೀದರ, ಅತಿಥಿಗಳಾಗಿ ಶ್ರೀಮತಿ ಇಂದುಮತಿ ಚಿದ್ರಿ ನಗರಸಭೆ ಸದಸ್ಯರು, ಶ್ರೀ ದೇವೆಂದ್ರ ಸೋನೆ ಸೋನಿ ನ್ಯೂಸ್ ಸಂಪಾದಕರು, ಪ್ರದೀಪ ದಲಿತ ಮಹಾಸಭಾ ಅಧ್ಯಕ್ಷರು, ಪಂಡಿತ ಕಂಗಟೆ ಪ್ರೀತಂ ಎಂಟರ್‍ಪ್ರೈಜೆಸ್ ಮಾಲೀಕರು, ಖಮರೊದ್ದೀನ್, ಸಂಗಪ್ಪಾ ಚಿದ್ರಿ, ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಶಿಲ್ಪಾ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಸಂಸ್ಥೆಯ ಅಧ್ಯಕ್ಷರಾದ ತುಕಾರಾಮ ಚಿಮಕೋಡೆ, ಸಂಚಾಲನೆ ಅಪರ್ಣಾ ಪ್ರತಾಪ ಮಾಡಿದರು, ವಂದನಾರ್ಪಣೆ ಶಿಲ್ಪಾ ತುಕಾರಾಮ ಅವರು ಮಾಡಿದರು.