ಕಾನೂನು ಸುವ್ಯವಸ್ಥೆ ಪೊಲೀಸರ ಕರ್ತವ್ಯ
(ಸಂಜೆವಾಣಿ ವಾರ್ತೆ)
ರಾಯಚೂರು, ಏ.೨-
ಅತ್ಯಂತ ಘನತೆ ಹೊಂದಿರುವುದು ಪೊಲೀಸ್ ಇಲಾಖೆ. ಈ ಇಲಾಖೆಯ ಗೌರವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ನಿಖಿಲ್ ಬಿ ಅವರು ಹೇಳಿದರು.
ಅವರಿಂದು ನಗರದ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ರಾಷ್ಟ್ರದ್ವಜ ಮತ್ತು ಪೋಲಿಸ್ ಧ್ವಜ ವನ್ನು ನಿವ್ರತ್ತ ಅರಕ್ಷಕ ಚಂದ್ರಶೇಖರ್ ಅವರು ನೆರವೇರಿಸಿದರು. ಧ್ವಜಾರೋಹಣದಲ್ಲಿ ಮಾತನಾಡಿದ ಅವರು, ಪ್ರಜಾ ರಕ್ಷಣೆಯಲ್ಲಿ ಪೊಲೀಸ್ ಇಲಾಖೆ ಬಹುದೊಡ್ಡ ಜವಾಬ್ದಾರಿ ವಹಿಸಿದೇ.ಪೊಲೀಸರು ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲಿ ಧ್ವಜ ಇರುತ್ತದೆ. ಪೊಲೀಸ್ ಧ್ವಜದ ಗೌರವ ಎತ್ತಿ ಹಿಡಿಯುವುದು ಪೊಲೀಸರ ಆದ್ಯ ಕರ್ತವ್ಯ ಎಂದರು. ಸಮಾಜದಲ್ಲಿ ಶಾಂತಿ ಕಾಪಾಡುವುದರಲ್ಲಿ ಪೊಲೀಸರ ಪಾತ್ರ ಬಹಳ ಮಹತ್ವದ್ದು. ಬೇರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆ ಬಹಳ ಉತ್ತಮ ಇಲಾಖೆಯಾಗಿದೆ. ಪೊಲೀಸರು ಇಲ್ಲದಿದ್ದರೆ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ. ಪೊಲೀಸರು ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಗೌರವ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾ ಸೇವೆಯಲ್ಲಿ ಪೊಲೀಸ್ ಇಲಾಖೆ ಬಹುದೊಡ್ಡ ಜವಾಬ್ದಾರಿವಹಿಸಿದೆ. ಈ ಹಿನ್ನಲೆ ಪೊಲೀಸರು ಕರ್ತವ್ಯದಲ್ಲಿ ಪ್ರಾಮಾಣಿಕತೆ, ನಿಷ್ಠೆ ಪಾಲಿಸಬೇಕು. ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆಯಲ್ಲಿ ಹಗಲು, ರಾತ್ರಿಯ ಪರಿವಿಲ್ಲದೆ ಜನರ ಪ್ರಾಣ, ಸಾರ್ವಜನಿಕ ಆಸ್ತಿಪಾಸ್ತಿ ರಕ್ಷ ಣೆಗೆ ಪಣತೊಡುವ ಕರ್ತವ್ಯವಾಗಿದೆ. ಪ್ರಶಿಕ್ಷ ಣಾರ್ಥಿಗಳು ಶಿಸ್ತು, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದರು.ಸಮಾಜದಲ್ಲಿ ಪೊಲೀಸ್ ಸಮವಸ್ತ್ರಕ್ಕೆ ತನ್ನದೇ ಆದ ಗೌರವ ಇದೆ. ಕರ್ತವ್ಯನಿರತ ಪೊಲೀಸರು ಈ ಗೌರವ ಕಾಪಾಡಬೇಕು ಎಂದರು.ದಿನ ನಿತ್ಯ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಪೋಲಿಸ್ ಕಳ್ಯಾಣ ನಿದಿಯಿಂದ ೨೦೨೩-೨೪ ಸಾಲಿನಲ್ಲಿ ನಿವ್ರತ್ತ ಪೋಲಿಸ್ ಅಧಿಕಾರಿಗಳಿಗೆ ಆರೋಗ್ಯದ ಸೌಲಭ್ಯಕ್ಕಾಗಿ ಆರೋಗ್ಯ ಭಾಗ್ಯದ ಯೋಜನೆಯಡಿ ೮ ಲಕ್ಷ ವೆಚ್ಚ ಮತ್ತು ಪೊಲೀಸರ ಮಕ್ಕಳ ಶೈಕ್ಷಣಿಕ ಅಭ್ಯಾಸಕ್ಕಾಗಿ ೮ ಲಕ್ಷ ಅನುದಾನ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಪಥ ಸಂಚಲನ ನಡೆಸಿದರು.
ದ್ವಜಾರೋಹಣ ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್ಪಿ ಶಿವಕುಮಾರ,ಹರೀಷ್, ಡಿ ಎಸ್ಪಿ ಸತ್ಯನಾರಾಯಣ, ದತ್ತಾತ್ರೆಯ ಕಾರ್ನಡ್, ಸುನೀಲ್,ಸಿಪಿಐ ಉಮೇಶ್ ಕಾಂಬ್ಲೇ. ಹಿರೆಮಠ್,,ವೀರನ್ನ,ಸಿದ್ದರಾಮ,ಅನಿತಾ,ಪ್ರಕಾಶ, ನಾಗರಾಜ್,ಮಹೇಷ್,ಬಸವರಾಜ ಮತ್ತು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.