ಕುಮಾರ್‌ನಾಯಕ್‌ಗೆ ಅದ್ಧೂರಿ ಸ್ವಾಗತ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಏ.೨- ಲೋಕಸಭಾ ಚುನಾವಣೆ ಪ್ರಚಾರ ಬಿರುಸುಗೊಳ್ಳುತ್ತಿರುವ ಬೆನ್ನಲ್ಲೆ ಮತಯಾಚನೆಗಾಗಿ ಮಾನವಿ ಪಟ್ಟಣಕ್ಕೆ ತೆರಳಿದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಕುಮಾರ್‌ನಾಯಕ್ ಅವರನ್ನು ಪಕ್ಷದ ನೂರಾರು ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ನಂತರ ಅಭ್ಯರ್ಥಿ ಕುಮಾರ್ ನಾಯಕ್ ಅವರನ್ನು ಹೂವಿನಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ಪಟ್ಟಣದ ಸೂರ್ಯ ಫಂಕ್ಷನ್ ಹಾಲ್‌ನಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿಮೆರವಣಿಗೆ ಮಾಡಲಾಯಿತು.
ಈ ವೇಳೆ ಕಾರ್ಯಕರ್ತರು ನೂರಾರು ಬೈಕ್‌ಗಳಲ್ಲಿ ಜಾಥಾ ನಡೆಸುವ ಮೂಲಕ ಕುಮಾರ್‌ನಾಂiiಕ್ ಅವರಿಗೆ ಮತ ನೀಡುವಂತೆ ಮತದಾರರಿಗೆ ಸಂದೇಶ ರವಾನಿಸಿದರು.
ಮತಯಾಚನೆಗೆ ಆಗಮಿಸಿದ ಕುಮಾರ್‌ನಾಯಕ್ ಅವರೊಂದಿಗೆ ತಂತ್ರಜ್ಞಾನ ವಿಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವ ಬೋಸರಾಜ್, ಸ್ಥಳೀಯ ಶಾಸಕ ಹಂಪಯ್ಯ ನಾಯಕ್ ಅವರು ತೆರೆದ ವಾಹನದಲ್ಲಿ ತೆರಳುವ ಮೂಲಕ ಮತಯಾಚನೆ ಮಾಡಿದರು.
ಪ್ರಮುಖ ಬೀದಿಗಳಲ್ಲಿರುವ ಮಹಾತ್ಮರಾದ ಬಸವೇಶ್ವರ,ಅಂಬೇಡ್ಕರ್, ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿ ಬೆಂಬಲಿಸಿದರು.
ಮೆರವಣಿಗೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ. ಶಾಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಫೂರ್‌ಸಾಬ್, ಶರಣಯ್ಯ ನಾಯಕ್, ವಸಂತ್ ನಾಯಕ್, ಬಿ.ಕೆ. ಅಮರೇಶಪ್ಪ, ಖಾಲಿದ್ ಗುರು,ಬಾಲಸ್ವಾಮಿ ಕೊಡ್ಲಿ, ಕಿರ್‍ಲಿಂಗಪ್ಪ, ಸಣ್ಣ ಬಸವಗೌಡ ಬ್ಯಾಗವಾಟ,ಜಯಂತ್‌ರಾವ್ ಪತಂಗಿ, ರುದ್ರಪ್ಪ ಅಂಗಡಿ, ರೌಡೂರು, ಮಹಂತೇಶ್ ಸ್ವಾಮಿ, ಎಂ.ಎಸ್ ಪಾಟೀಲ್ ಸೇರಿದಂತೆ ಅನೇಕರಿದ್ದರು.