ಏ. 3 ರಿಂದ 5ರ ವರೆಗೆ ಕ್ರಾಂತಿ ಗಣೇಶ ಮಂದಿರ ಲೋಕಾರ್ಪಣೆ ಸಮಾರಂಭಸಾರ್ವಜನಿಕರು ಪಾಲ್ಗೊಳ್ಳುವಂತೆ ನಂದಕಿಶೋರ ವರ್ಮಾ ಕರೆ
ಬೀದರ್:ಏ.2: ಈ ತಿಂಗಳ 3ರಿಂದ 5ನೇ ತಾರಿಖಿನ ವರೆಗೆ ನೂತನವಾಗಿ ನಿಮಾರ್ಣಗೊಂಡ ಕ್ರಾಂತಿ ಗಣೇಶ ಮಂದಿರದ ಲೋಕಾರ್ಪಣೇಗಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಂದಿರದ ಉದ್ಘಾಟನಾ ಸಮಿತಿ ಅಧ್ಯಕ್ಷರಾದ ನಂದಕಿಶೋರ ವರ್ಮಾ ತಿಳಿಸಿದರು.
ಏಪ್ರಿಲ್ 3 ರಂದು ಶೋಭಾಯಾತ್ರೆ, 4 ರಂದು ಕುಂಭ ಕಳಶ ಮೆರವಣಿಗೆ ಮತ್ತು 5 ರಂದು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ. ಮಂದಿರ ನಿರ್ಮಾಣದ ಕನಸು ಬಹುದಿನಗಳದ್ದಾಗಿತ್ತು. ಕೇವಲ ಟೀನ್ ಶೆಡ್‍ನಲ್ಲಿ ಮಂದಿರ ಇತ್ತು. ಇಂತಹ ಸಂದರ್ಭದಲ್ಲಿ ಹಲವಾರು ಮುಖಂಡರ ಸಹಕಾರದೊಂದಿಗೆ ಮಂದಿರ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಹಿಂದೂಗಳ ಬಹುದಿನಗಳ ಕನಸು ನನಸಾಗಿದೆ: ಈಶ್ವರಸಿಂಗ್ ಠಾಕೂರ್
ಬೀದರ: ಚುನಾವಣೆ ಸಂದರ್ಭದಲ್ಲಿ ನಮಗೆ ಹಣ ಬೇಡ. ಕ್ರಾಂತಿ ಗಣೇಶ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿ ಎಂದು ಯುವಕರು ಹೇಳಿದ್ದರು. ಅದಕ್ಕಾಗಿ ಅವರಿಗೆ ಮಂದಿರ ನಿರ್ಮಾಣದಲ್ಲಿ ನಿರಂತರವಾಗಿ ಸಹಕಾರ ನೀಡಿದ್ದೆ. ಭರವಸೆ ನೀಡಿದ ಒಂದೇ ವರ್ಷದೊಳಗೆ ಮಂದಿರ ನಿರ್ಮಾಣ ಮಾಡಲಾಗಿದೆ. ಸಮಸ್ತ ಹಿಂದೂ ಸಮಾಜ, ಕ್ರಾಂತಿ ಗಣೇಶ ಮಂದಿರ ಸಮಿತಿ ಹಾಗೂ ಇತರೆ ಸಂಘ-ಸಂಸ್ಥೆಗಳವರು ತನು ಮನ ಧನದಿಂದ ಸಹಕಾರ ನೀಡಿರುವ ಪ್ರಯುಕ್ತ ಒಂದು ಐತಿಹಾಸಿಕ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಯಿತು. ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಾರ್ವಜನಿಕರು ಈ ಮೂರು ದಿವಸಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮಂದಿರ ನಿರ್ಮಾಣದ ನೇತೃತ್ವ ವಹಿಸಿಕೊಂಡ ಈಶ್ವರಸಿಂಗ್ ಠಾಕೂರ್ ಕೋರಿದರು.