ಟೆಕ್ನೊ ಪೋಲಿಸ್ ವ್ಯವಸ್ಥೆಗೆ ಬದಲಾಗಬೇಕು: ಡಿ.ಸಿ ಗೋವಿಂದರೆಡ್ಡಿ
ಬೀದರ್:ಏ.2: ಇಂದು ದಿನೆ ದಿನೆ ತಂತ್ರಜ್ಞಾನವುಳ್ಳ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪೋಲಿಸ್ ವ್ಯವರ್ಸತೆ ಸಹ ಟೆಕ್ನಾಲಜಿ ಪೋಲಿಸ್ ವ್ಯವಸ್ಥೆಗೆ ಬದಲಾಗಬೇಕಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
ಮಂಗಳವಾರ ನಗರದ ಜಿಲ್ಲಾ ಪೋಲಿಸ್ ಪೆಋಡ್ ಮೈದಾನದಲ್ಲಿ ಪೋಲಿಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಮಾತನಾಡಿರುವ ಅವರು, ಇಂದು ಹ್ಯಾಕರ್‍ಗಳು ಬ್ಯಾಂಕ್ ಅಕೌಂಟ್‍ಗಳ ಮೇಲೆ ಕನ್ನ ಹಾಕಿ ಹಣ ದೊಚುವ ಸಲಿಸು ಅಪರಾಧ ಹುಡುಕಿಕೊಂಡಿರುವರು. ಅದಕ್ಕಾಗಿ ಕ್ರೈಮ್ ವಿಭಾಗ ಇನ್ನಷ್ಟು ಬಲಿಷ್ಟಪಡಿಸಬೇಕೆಂದು ಕರೆ ನೀಡಿದರು.
ಒಂದು ದೇಶ ಆರ್ಥಿಕ ಹಾಗೂ ಸಾಮಾಜಿಕ ಅಲ್ಲದೇ ಭದ್ರತೆ ಹಿತದೃಷ್ಟಿಯಿಂದ ಬಲಿಷ್ಟವಾಗಿರಬೇಕಾದರೆ ಅಲ್ಲಿಯೆ ಪೋಲಿಸ್ ವ್ಯವಸ್ಥೆ ಸ್ಟ್ರಾಂಗ್ ಆಗಿರಬೇಕು. ಭಾರದಲ್ಲಿ ಕರ್ನಾಟಕ ಪೋಲಿಸ್ ಎರಡನೇ ಸ್ಥಾನದಲ್ಲಿದ್ದು, ಅವರಿಗೆ ಗೌರವ ಕೊಡುವುದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಇಂದು ಹಲವು ದೇಶಗಳು ನೇರವಾಗಿ ತನ್ನ ಶಸ್ರು ದೇಶಗಳನ್ನು ಸದೆ ಬಡಿಯಲು ಬಾಹ್ಯ ಹೋರಾಟಕ್ಕಿಂತ ಅಂತರಿಕ ಕಲಹಕ್ಕೆ ಮಹತ್ವ ನೀಡಿ ಆ ದೇಶವನ್ನು ದುರ್ಬಲಗೊಳಿಸುತ್ತಿವೆ. ಅಲ್ಲಿ ಪೋಲಿಸ್ ವ್ಯವಸ್ಥೆ ಸಕ್ಷಮವಾಗಿದ್ದರೆ ಆ ದೇಶವನ್ನು ಯಾರು ಅಲುಗಾಡಿಸಲು ಸಾದ್ಯವಿಲ್ಲ. ಭಾರತ ಇಷ್ಟು ವಿಶಾಲವಾಗಿದ್ದರೂ ಇತರೆ ದೇಶಗಳು ನಮ್ಮ ಅಂತರಿಕ ಕಲಹಕ್ಕೆ ಕೈಹಾಕದಿರಲು ನಮ್ಮಲ್ಲಿನ ಬಲಶಾಲಿ ಪೋಲಿಸ್ ವ್ಯವರ್ಸತೆ ಮುಖ್ಯ ಕಾರಣವಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿವೃತ್ತ ಪಿ.ಎಸ್.ಐ ದಯಾನಂದ ಮಾತನಾಡಿ, ಪೋಲಿಸ್ ಧ್ವಜ ದಿನದಂದು ಎಲ್ಲರು ಸೇರುವುದರಿಂದ ಪರಸ್ಪರ ಭೇಟಿ ಸಾಧ್ಯವಾಗಲಿದೆ. ನೀವೃತ್ತರಾದರೂ ಪದೆ ಪದೆ ನಾವುಗಳು ಸೇರಲು ಹಾಲಿ ಎಸ್.ಪಿ ಚನ್ನಬಸವಣ್ಣನವರು ಭೀಷ್ಮ ಎಂಬ ಕಾರ್ಯಾಲಯ ಸ್ಥಾಪಿಸಿ ನಿವೃತ್ತ ಅಧಿಕಾರಿಗಳು ಸೇರಲು ವ್ಯವಸ್ಥೆ ಮಾಡಿರುವುದಕ್ಕೆ ಎಲ್ಲ ನಿವೃತ್ತ ಅಧಿಕಾರಿಗಳ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿರುವ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು, ಪೋಲಿಸ್ ಧ್ವಜ ದಿನ ಆರಂಭವಾಗಿದ್ದು, 1965ರ ಏಪ್ರಿಲ್ 2ರಂದು ಅಂದು ಪೋಲಿಸ್ ಸಮವಸ್ತ್ರಗಳ ಕಾಯ್ದೆ ಜಾರಿಗೆ ಬಂದಿದೆ. ಅಂದಿನಿಂದ ಈ ದಿನದಂದು ವಿಭಿನ್ನ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬರಲಾಗುತ್ತದೆ. ಬೀದರ್ ಜಿಲ್ಲೆಯಲ್ಲಿ ವಿಶೇಷವಾಗಿ ಹೊರಗಿನ ಪೋಲಿಸ್ ಅತಿಥಿಗಳಿಗೆ ತಂಗಲು ಪೋಲಿಸ್ ಗೆಸ್ಟ್ ಹೌಸ್, ಪೋಲಿಸ್‍ರಿಗೆ ಹಾಗೂ ಅವರ ಮಕ್ಕಳ ದೈಹಿಕ ಸಾಮಥ್ರ್ಯ ವೃದ್ಧಿಗಾಗಿ ಇಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಕ್ರೀಡಾಂಗಣ, ಜಿಮ್ ಕೇಂದ್ರ ಅಳವಡಿಕೆ, ಕ್ರೀಕೇಟ್ ಮೈದಾನ ಅಭಿವೃದ್ಧಿಪಡಿಸಲಾಗುತ್ತಿದೆ. ಸುಸಜ್ಜಿತ ಗ್ರಂಥಾಲಯ. ಇನ್ನೂರು ವಿದ್ಯಾರ್ಥಿಗಳು ಇಲ್ಲಿನ ಸ್ಪರ್ಧಾತ್ಮಕ ಪುಸ್ತಕಗಳನ್ನು ಅಧ್ಯಯನ ಮಾಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿರುವರು. ರಿಯಾಯತಿ ದರದಲ್ಲಿ ಕ್ಯಾಂಟಿನ್ ವ್ಯವಸ್ಥೆ, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಉತ್ತಮ ಅಂಕ ಗಳಿಸಿದ ಪೋಲಿಸ್ ಮಕ್ಕಳಿಗೆ ಸನ್ಮಾನ ಹಾಗೂ ಪದವಿ ಓದುತ್ತಿರುವ ಪೋಲಿಸ್ ಮಕ್ಕಳಿಗೆ ಪ್ರೋತ್ಸಾಹ ಇತ್ಯಾದಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ಬಡೋಲೆ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಮ್.ಎಮ್ ಹಾಗೂ ಏರ್‍ಫೋರ್ಸ್ ಸ್ಟೇಷನ್ ಗ್ರೂಪ್ ಕ್ಯಾಪ್ಟನ್ ರಿತೇಶ ಶರ್ಮಾ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಪೋಲಿಸ್ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು. ಪೋಲಿಸ್ ವಿವಿಧ ಆರು ತುಕಡಿಗಳು ಪರೆಡ್ ವಂದನೆ ನಡೆಸಿಕೊಟ್ಟರು. ಅನೇಕರನ್ನು ಸನ್ಮಾನಿಸಲಾಯಿತು. ಹೆಚ್ಚುವರಿ ಎಸ್.ಪಿ ಮಹೇಶ ಮೆಘಣ್ಣನವರ್ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಎ.ಎಸ್.ಪಿ ಚಂದ್ರಕಾಂತ ಪುಜಾರಿ, ಡಿ.ವಾಯ್.ಎಸ್.ಪಿ ಸೇರಿದಂತೆ ಎಲ್ಲ ಹಿರಿಯ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ನಿವೃತ್ತ ಪೋಲಿಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.