ನನಗೆ ಗೆಲುವಿನ ಮಡಿಲಕ್ಕಿ ತುಂಬಲು ಜನ ಕಾಯುತ್ತಿದ್ದಾರೆ “ಎಸ್.ವಿ .ಆರ್, ಎಚ್.ಪಿ.ಆರ್ ” ನಮಗೆ ಜೋಡಿ ಶಕ್ತಿ

ಸಂಜೆವಾಣಿ ವಾರ್ತೆ
ಜಗಳೂರು.ಏ.೨ :-ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ದೇಶದಲ್ಲಿನ ಮಹಿಳೆಯರ ಸಾಧನೆ ಅರಿತು ಕೊಳ್ಳದೆ,ನನ್ನ ಬಗ್ಗೆ ಸಣ್ಣತನದ ಹೇಳಿಕೆ ನೀಡಿರುವುದು ಸರಿ ಯಲ್ಲ, ನನ್ನನ್ನು ಗೆಲ್ಲಿಸಿದರೆ ಕ್ಷೇತ್ರದ ಸಮಗ್ರ ಅಭಿವೃದ್ದಿಯ ಮೂಲ ಕ ಉತ್ತರಿಸುವೆ’.ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ತಿರುಗೇಟು ನೀಡಿದರು.ಜಗಳೂರು ತಾಲೂಕಿನ ಮಾದಮುತ್ತೇನಹಳ್ಳಿ ಗ್ರಾಮದಲ್ಲಿ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಚುನಾವಣಾ ಪ್ರಚಾರದ ಚಾಲ ನಾ ಸಭೆಯಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಸಾಕಷ್ಟು ಮಹಿಳೆಯರು ಕೇವಲ ಅಡುಗೆಮನೆಯಿಂದ ಬಾಹ್ಯಕಾಶದವರೆಗೆ ಹಾಗೂ ರಾಜಕೀಯ,ಸಾಮಾಜಿಕ,ಔದ್ಯೋಗಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದಿದ್ದಾರೆ.ಅಂತೆಯೇ ನಾನೂ ಅಡುಗೆ ಮಾಡಿ ಕಾರ್ಯಕರ್ತರಿಗೆ ಊಟ ಬಡಿಸಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಪ್ರಚಾರಕ್ಕೆ ಆಗಮಿಸಿರುವೆ.30ವರ್ಷ ರಾಜಕೀಯ ಅನುಭವ ಹೊಂದಿದ ನಾನು ಸಿಕ್ಕ ಅವಕಾಶವನ್ನು ಚುನಾವಣೆಯಲ್ಲಿ ಸಮರ್ಥವಾಗಿ ನಿಭಾಯಿಸುವೆ.ಉಜ್ವಲ ಯೋಜ ನೆಯ ಮೂಲಕ ಅಡುಗೆಮನೆಯನ್ನು ಕಟ್ಟಿಗೆಯ ಹೊಗೆ ಮುಕ್ತಗೊ ಳಿಸಿರುವುದು ಮಹಿಳೆಯರ ಬಗ್ಗೆ ಹೊಂದಿರುವ ಅವರ ಕಾಳಜಿಗೆ ಸಾಕ್ಷಿಯಾಗಿದೆ.ಮೋದಿಜಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಸೋಣ.ಬಿಜೆಪಿ ಪಕ್ಷಕ್ಕೆ ಮತನೀಡಬೇಕು.ಎಂದು ಮನವಿ ಮಾಡಿದರು.ಪ್ರಧಾನಿ ಮೋದಿಜಿ ಅವರ ಆಡಳಿತದಿಂದ ದೇಶ ಅಭಿವೃದ್ದಿಪಥ ದತ್ತ ಸಾಗಿದೆ.ಆದರೆ ಕಿಸಾನ್ ಸಮ್ಮಾನ್ ಯೋಜನೆಯಡಿ ಸಿಗುತ್ತಿದ್ದ 6000ದಿಂದ 4000 ಕ್ಕೆ ಇಳಿಕೆಮಾಡಿ ರೈತರ ಹಣಕ್ಕೆ ರಾಜ್ಯ ಸರ ಕಾರ ಕತ್ತರಿಹಾಕಿದೆ’ಎಂದು ಆರೋಪಿಸಿದರು.ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಪ್ರಧಾನಿ ಮೋದಿ ಜಿ ಅವರ ಸಂಕಲ್ಪದಂತೆ ಈ ಬಾರಿ ದೇಶವ್ಯಾಪಿ ಲೋಕ ಸಭಾ ಚುನಾವಣೆಯಲ್ಲಿ 400 ಕ್ಕೂ ಅಧಿಕ ಸೀಟುಗಳ ಗೆಲುವು ನಿಶ್ಚಿತ ಅದರಲ್ಲಿ ಗಾಯಿತ್ರಿಸಿದ್ದೇಶ್ವರ ಅವರ ಗೆಲುವು ಖಚಿತ.ನನ್ನ ಆಡಳಿತಾವಧಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಸಹಾಯ ಸ್ತದಿಂದ ಸಾಕಾರಗೊಂಡಿರುವ ಭದ್ರಾಮೇಲ್ದಂಡೆ ಮತ್ತು 57ಕೆರೆ ತುಂಬಿಸುವ ಯೋಜನೆಗಳ ಕಾಮಗಾರಿಗಳು ಪೂರ್ಣಗೊಂಡು ಬರದನಾಡು ಹಸಿರುನಾಡಾಗುವುದು’ಎಂದು ವಿಶ್ವಾಸ ವ್ಯಕ್ತಪಡಿಸಿ ದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,’ಕ್ಷೇತ್ರದಲ್ಲಿ ಮಾಜಿ ಶಾಸಕರಾಗಿ ಎಸ್.ವಿ.ರಾಮಚಂದ್ರ ಮತ್ತು ನಾನು ರಸ್ತೆ,ಕುಡಿಯುವ ನೀರು,ಸೇರಿದಂತೆ ಸಾಕಷ್ಟು ಮೂಲಸೌಕರ್ಯ ಒದಗಿಸಿದ್ದೇವೆ. ಇದೀಗ ಜೋಡೆತ್ತಿನಂತೆ ಒಂದಾ ಗಿರುವುದು.ಸಂಸದ ಜಿ.ಎಂ‌ ಸಿದ್ದೇಶ್ವರ್ ಕುಟುಂಬದ ಕೈ ಬಲಪಡಿಸಿದಂತಾಗಿದೆ.ಸದಾ‌ ಸಂಪರ್ಕ ಕ್ಕೆ‌ ಸಿಗುವ ನೇರ ನುಡಿಯ ಸ್ವಭಾವದ ಸಿದ್ದೇಶ್ವರ್ ಅವರ ಪತ್ನಿ ಬಿಜೆಪಿ ರಥದಲ್ಲಿ ಗಾಯಿತ್ರಿ ಸಿದ್ದೇಶ್ವರ್ ಉತ್ಸವಮೂರ್ತಿಯಂತೆ ಮತದಾರರೆಲ್ಲರೂ ಸೇರಿ ಗೆಲುವಿನ‌ ರಥ ಎಳೆಯೋಣ.ಕಾಂಗ್ರೆಸ್ ಪಕ್ಷದ ಈಗಿನ ಅಭ್ಯರ್ಥಿಯ ಕುಟುಂಬದವರು ನೇರವಾಗಿ ಆಗಲಿ ಅಥವಾ ಫೋನ್ ಸಂಪರ್ಕಕ್ಕೂ ಸಿಗೊಲ್ಲ ನಮ್ಮ ದುರ್ದೈವ’ ಎಂದು ಪರೋಕ್ಷವಾಗಿ ಶಾಮನೂರು ಕುಟುಂಬವನ್ನು ಕುಟುಕಿದರು.ಇದೇ ವೇಳೆ ಈಶಾನ್ಯ ದಿಕ್ಕಿನ ಮಾದಮುತ್ತೇನಹಳ್ಳಿಯ ಪವಾಡ ಪುರುಷ ಚಿಕ್ಕಣ್ಣನ ದೇವಸ್ಥಾನದಲ್ಲಿ ದರ್ಶನಪಡೆದು ನಂತರ ಅಣ ಬೂರು,ಹನುಮಂತಾಪುರ,ದೊಣೆಹಳ್ಳಿ,ಹಿರೇಮಲ್ಲನಹೊಳೆ,ಮುಷ್ಟೂರು,ಕಲ್ಲದೇವರಪುರ,ತೋರಣಗಟ್ಟೆ,ಬಿದರಕೆರೆ,ಗ್ರಾಮಪಂಚಾಯಿತಿ ಕೇಂದ್ರಸ್ಥಾನಗಳಲ್ಲಿ ಚುನಾವಣೆ ಪ್ರಚಾರ ನಡೆಸಲಾಯಿತು.ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ ಕಲ್ಲೇ ರುದ್ರೇಶ್ ಮತ್ತು ಕಾರ್ಯಕರ್ತರು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದರು.ಜಗಳೂರು ವಿಧಾನಸಭಾ ಕ್ಷೇತ್ರದ ಹನುಮಂತಾಪುರ ಗ್ರಾಮದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಗಾಯಿತ್ರಿ ಸಿದ್ದೇಶ್ವರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಗೊಂಡರು. ದಾವಣಗೆರೆಗೆ ಗಾಯಿತ್ರಿ ಸಿದ್ದೇಶ್ವರ್, ಕೇಂದ್ರಕ್ಕೆ ಮೋದಿ ಎಂಬ ಆಶಯದೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಯಾಗುತ್ತಿದ್ದೇವೆ ಎಂದರು. ವಿವಿಧ ಗ್ರಾಮಗಳಲ್ಲಿ ಎಚ್.ಪಿ. ರಾಜೇಶ್ ಅಭಿಮಾನಿಗಳು, ಆಪ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಮೂಲಕ ಗಾಯಿತ್ರಿ ಸಿದ್ದೇಶ್ವರ್ ಅವರ ಕೈ ಬಲಪಡಿಸಿದರು.