ಪ್ರಯಾಣಿಕರಿಗೆ ಕಿರಿಕಿರಿಯಾದ ರಸ್ತೆ ಉಬ್ಬುಗಳು
ಲಕ್ಷ್ಮೇಶ್ವರ,ಏ2: ಹುಬ್ಬಳ್ಳಿ ಮಧ್ಯ ಇರುವ 57 ಕಿಲೋಮೀಟರ್ ರಸ್ತೆ ಸಂಪೂರ್ಣ ಅಭಿವೃದ್ಧಿಪಡಿಸಿದ ನಂತರ ಈ ರಸ್ತೆಯ ಮೇಲೆ ಈಗ ವಿಪರೀತವಾದ ವಾಹನ ಸಂಚಾರದ ದಟ್ಟಣೆ ಎದ್ದು ಕಾಣುತ್ತಿದೆ.
ಲಕ್ಷ್ಮೇಶ್ವರ ಮಂಗಸೂಳಿ ರಾಜ್ಯ ಹೆದ್ದಾರಿಯ ಲಕ್ಷ್ಮೇಶ್ವರ ಹುಬ್ಬಳ್ಳಿ ಮಧ್ಯದ ಈ ರಸ್ತೆಯ 57 ಕಿಮೀ. ಉದ್ದದಲ್ಲಿ 62 ಹಂಪ್ಸ್‍ಗಳು ಅಂದರೆ ಉಬ್ಬುಗಳು ಇದ್ದು ನಿತ್ಯ ಅಡ್ಡಾಡುವ ನೂರಾರು ವಾಹನಗಳ ಚಾಲಕರಿಗೆ ತಲೆ ನೋವಾಗಿದ್ದರೆ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ.
ಪ್ರತಿನಿತ್ಯ ಲಕ್ಷ್ಮೇಶ್ವರ ಹುಬ್ಬಳ್ಳಿ ಮಧ್ಯ ಬಸುಗಳು ಸಾಕಷ್ಟು ಅಡ್ಡಾಡುತ್ತಿದ್ದು ಮಾರ್ಗ ಮಧ್ಯದಲ್ಲಿನ ಉಬ್ಬುಗಳು ಚಾಲಕರಿಗೆ ಒಂದು ರೀತಿಯ ತಲೆ ನೋವಾಗಿದ್ದರೆ ಬಸ್ಸಿನ ಪ್ರಯಾಣಿಕರಿಗೆ ಯಾತನೆಯನ್ನು ಅನುಭವಿಸಬೇಕಾಗಿದೆ.
ಬಸ್ಸಿನ ಹಿಂಬದಿಯಲ್ಲಿ ಕುಳಿತ ಪ್ರಯಾಣಿಕರು ಪದೇಪದೇ ಬರುವ ಉಬ್ಬುಗಳಿಂದ ಕೂಗಿರುವದು ಸಾಮಾನ್ಯವಾಗಿದೆ.
ಲಕ್ಷ್ಮೇಶ್ವರದ ಸವಣೂರು ಕ್ರಾಸಿನಿಂದ ಲಿಟಲ್ ಹಾರ್ಟ್ ಶಾಲೆಯವರೆಗೆ ಸುಮಾರು 14ಕ್ಕೂ ಹೆಚ್ಚು ಹಂಪ್ಗಳಿವೆ ಅದೇ ರೀತಿ ರಾಮಗಿರಿ ಪಶುಪತಿಹಾಳ ಸಂಶಿ ಕುಂದಗೋಳ ಟೋಲ್ ನಾಕಾ ಶೆರೇವಾಡ ನೂಲವಿ ಅದರ ಗುಂಚಿ ಬಂಕಾಪುರ ಕ್ರಾಸು ಎಲ್ಲಡಿಯು ಉಬ್ಬುಗಳು ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ.
ಆದ್ದರಿಂದ ಲೋಕೋಪಯೋಗಿ ಇಲಾಖೆಯ ವರು ಅವೈಜ್ಞಾನಿಕವಾಗಿ ಹಾಕಿರುವ ಉಬ್ಬುಗಳನ್ನು ತೆಗೆಯಬೇಕು ಎಂಬುದು ಸಾರ್ವಜನಿಕರ ಪ್ರಯಾಣಿಕರ ಅಭಿಪ್ರಾಯವಾಗಿದೆ.
ಜಿಲ್ಲಾ ರಸ್ತೆ ಸಾರಿಗೆ ಅಕ್ಷತಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳು ಬಂಕಾಪುರ ಕ್ರಾಸಿನಿಂದ ಅನವಶ್ಯಕವಾಗಿ ಅವೈಜ್ಞಾನಿಕವಾಗಿ ಹಾಕಿರುವ ಎಲ್ಲ ಉಬ್ಬುಗಳನ್ನು ತೆಗೆಯಬೇಕು ಎಂಬುದು ಅಂಬೋಣವಾಗಿದೆ.