ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿ
ಬಾಗಲಕೋಟೆ,ಏ2 : ಬೇಸಿಗೆ ಇರುವದರಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರರೋಗ ಬರುವ ಸಂಭವವಿದ್ದು, ಜಿಲ್ಲೆಯರೈತರುತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದುಜಿಲ್ಲಾಧಿಕಾರಿಜಾನಕಿ ಕೆ.ಎಂ ಹೇಳಿದರು.
ನವನಗರದಜಿಲ್ಲಾ ಪಾಲಿಕ್ಲಿನಿಕ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದಅವರು ಆಪ್ತೋ ಎಂಬ ವೈರಾಣುವಿನಿಂದ ಬರುವ ಈ ರೋಗರೈತರಿಂದಆರ್ಥಿಕ ಸಂಕಷ್ಟ ಉಂಟು ಮಾಡುತ್ತದೆ. ಈ ರೋಗದಿಂದ ಜಾನುವಾರುಗಳನ್ನು ಮುಕ್ತಗೊಳಿಸಲು ಲಸಿಕೆ ಅವಶ್ಯವಾಗಿ ಹಾಕಿಸಬೇಕು ಎಂದರು.
ಈ ರೋಗದ ಲಕ್ಷಣ ಬಾಯಿಯಲ್ಲಿ ಹುಣ್ಣು, ಮೇವು ತಿನ್ನದೇಇರುವುದು, ಬಾಯಿಯಿಂದರಕ್ತ ಸ್ರಾವವಾಗುವುದು. ಇದು ಬಾಯಿ ಬೇಕೆ ಲಕ್ಷಣವಾದರೆ, ಕಾಲಿನ ಗೊರಸುಗಳಲ್ಲಿ ಹುಣ್ಣಾಗಿ ಕಾಲು ನೆಲಕ್ಕೆ ಉರಲಾಗದಂತಹ ಪರಿಸ್ಥಿತಿ ಬರುತ್ತದೆ. ಅದರಲ್ಲಿ ಮಿಶ್ರತಳಿ ರಾಸುಗಳಿಗೆ ಯಾವಾಗ ಬೇಕಾದರೂ ಬರಬಹುದಾಗಿದೆ. ಆದರೆ ಸ್ವದೇಶಿ ತಳಿಯ ರಾಸುಗಳಿಗೆ ಬೇಸಿಗೆಯಲ್ಲಿ ಮಾತ್ರಕಂಡು ಬರುತ್ತದೆ. ಈ ರೋಗದಿಂದ ಬಳಲುತ್ತಿರುವ ರಾಸುಗಳಿಂದ ರಾಸುಗಳಿಗೆ ಗಾಳಿ ನೀರಿನಿಂದ ಸೊಂಕು ಹರಡುತ್ತದೆ. ಇದರಿಂದ ಮುಕ್ತಿ ಹೊಂದಲು ಪ್ರತಿ 6 ತಿಂಗಳಿಗೊಮ್ಮೆ ಲಸಿಕೆಯನ್ನು ಹಾಕಿಸಬೇಕು ಎಂದರು.
ಈ ಸಂದರ್ಭದಲ್ಲಿಜಾಗೃತಿಯ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿಜಿ.ಪಂ ಸಿಇಓ ಶಶಿಧರ ಕುರೇರ, ಪಶುಸಂಗೋಪನಾ ಇಲಾಖೆಯಉಪನಿರ್ದೇಶಕಡಾ.ಎಸ್.ಎಚ್.ಕರಡಿಗುಡ್ಡ, ಪಾಲಿಕ್ಲಿನಿಕ್‍ಉಪನಿರ್ದೇಶಕ ಡಾ.ಜಿ.ಬಿ.ಗುರವ, ಬಾಗಲಕೋಟೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಆರ್.ಎಸ್.ಪದರಾ, ನಿವೃತ್ತ ಉಪ ನಿರ್ದೇಶಕ ಡಾ.ವಿ.ಕೆ.ಕೋವಳ್ಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.