ಪುಟ್ಟು ಆಂಜಿನಪ್ಪ ಕಾಂಗ್ರೆಸ್ ಸೇರ್ಪಡೆ, ಭುಗಿಲೆದ್ದ ಆಕ್ರೋಶ
ಶಿಡ್ಲಘಟ್ಟ, ಏ. ೨:ಲೋಕಸಭೆ ಚುನಾವಣೆ ಕಾಂಗ್ರೇಸ್ ಪಕ್ಷದ ಅಂತರಿಕ ಜಗಳದಿಂದ ಕೋಲಾರ ಮೀಸಲು ಲೋಕಸಭಾ ಅಭ್ಯರ್ಥಿಗೆ ನುಂಗಲಾರದ ತುತ್ತಾಗಿದೆ. ಒಂದು ಕಡೆ ಕೆ ಎಚ್ ಮುನಿಯಪ್ಪ. ಬಣ ಮತ್ತೊಂದು ಕಡೆ ರಮೇಶ್ ಕುಮಾರ್ ಬಣದ ಕಿತ್ತಾಟದಿಂದ ಕೊನೆ ಕ್ಷಣದಲ್ಲಿ ಟಿಕೇಟ್ ಪಡೆದ ಕೆ ವಿ ಗೌತಮ್ ಚುನಾವಣೆಯನ್ನು ಯಾವ ರೀತಿ ಎದರಿಸುತ್ತಾರೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.
ಮುಳಬಾಗಿಲು ಶ್ರೀ ಕ್ಷೇತ್ರ ಕುರುಡುಮಲೆ ವಿನಾಯಕನಿಗೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಪೂಜೆ ಸಲ್ಲಿಸಿ ಪ್ರಚಾರದಲ್ಲಿ ತೊಡಗುವುದು ಈ ಭಾಗದ ಅಭ್ಯರ್ಥಿಗಳ ವಾಡಿಕೆಯಾಗಿದೆ. ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಪ್ರಬಲ ನಾಯಕ, ಸಮಾಜ ಸೇವಕ ರಾಜೀವ್ ಗೌಡರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆ ಯಲ್ಲಿ ಭಾಗವಹಿಸಿ ಕೋಲಾರ ಲೋಕಸಭೆ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು.
ಸಚಿವ ಕೃಷ್ಣ ಬೈರೇಗೌಡ ಅನುಯಾಯಿಯಾಗಿ ಅವರ ಮಾರ್ಗದರ್ಶನದಲ್ಲಿ ಶಿಡ್ಲಘಟ್ಟ ಕ್ಷೇತ್ರಕ್ಕೆ
ಸಮಾಜ ಸೇವಕರಾಗಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಂದು ಬಂದ ಪುಟ್ಟು ಆಂಜಿನಪ್ಪ ನವರು ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಸೊಲಿಲ್ಲದ ಸರದಾರ ಹಿರಿಯ ಮುಸ್ಥಜಿಗಳಾದ ವಿ.ಮುನಿಯಪ್ಪ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು, ಅದೇ ಕಾಂಗ್ರೆಸ್ ಪಕ್ಷಕ್ಕೆ ಟಿಕೇಟ್ ಆಕಾಂಕ್ಷಿ ಎಂದು ಹೇಳಿಕೊಂಡು ಕೊನೆ ಕ್ಷಣದಲ್ಲಿ ಟಿಕೇಟ್ ಕೈತಪ್ಪಿದ ಹಿನ್ನಲೆ ಮತ್ತೆ ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ಬಂಡಾಯದ ಅಲೆ ಬೀಸಿ ಕಾಂಗ್ರೆಸ್ ಪಕ್ಷಕ್ಕೆ ಸಿಗುವಂತಹ ಮತಗಳನ್ನು ಸೆಳೆದು ಕಾಂಗ್ರೆಸ್ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಮೂಲಕ ರಾಜೀವ್ ಗೌಡರ ಸೋಲಿಗೆ ಕಾರಣವಾಯಿತು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ರಾಜೀವ್ ಗೌಡರು ಈಗಾಗಲೇ ರಾಜ್ಯದ ಹಲಾವಾರು ಹೋರಾಟಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಪಕ್ಷದ ಬಲವರ್ಧನೆಗಾಗಿ ಕೈ ಜೋಡಿಸಿದವರು ಅವರ ನೇತೃತ್ವದಲ್ಲಿ ಚುನಾವಣೆ ನೆಡೆಸುತ್ತೇವೆ. ರಾಜೀವ್ ಗೌಡರೇ ಶಿಡ್ಲಘಟ್ಟ ಕ್ಷೇತ್ರದ ನಾಯಕ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ ಪಾರಂ ಪಡೆದು ಸ್ಪರ್ದಿಸಿ ಕಾಂಗ್ರೇಸ್ ಪಕ್ಷವನ್ನು ಶಿಡ್ಲಘಟ್ಟ ಕ್ಷೇತ್ರದಲ್ಲಿ ಉಳಿಸಿದ್ದಾರೆ. ಅವರ ಬೆಂಬಲ ಪಕ್ಷಕ್ಕೆ ಅಗತ್ಯ ಎಂದು ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳುವುದರ ಮೂಲಕ ಕಾರ್ಯಕರ್ತರನ್ನು ಶಾಂತಗೊಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ ಸಿ ಸುಧಾಕರ್ ಸಭೆಯಲ್ಲಿ ರಾಜೀವ್ ಗೌಡ ಬೆಂಬಲಿಗರ ಮೇಲೆ ಎರಗಿ ಬಿದ್ದು ಮಾತಿನ ಚಕಮಕಿಯಾಗಿ ಕೆಲವು ಸಮಯ ಗದ್ದಲ ಉಂಟಾಗಿ ಮಾತಿನ ಚಕಮಕಿಯಾಯಿತು. ರಾಜೀವ್ ಗೌಡ ಬೆಂಬಲಿಗರು ಎಂ ಸಿ ಸುಧಾಕರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.