ಯಧುವೀರ್ ಒಡೆಯರ್ ಸಾಂಕೇತಿಕ ನಾಮಪತ್ರ ಸಲ್ಲಿಕೆ
ಸಂಜೆವಾಣಿ ನ್ಯೂಸ್
ಮೈಸೂರು: ಏ.02:- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಾಯಿ ಪ್ರಮೋದದೇವಿ ಒಡೆಯರ್ ಜತೆಗೂಡಿ ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿದರು.
ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸುವ ಮೂರನೇ ದಿನದಂದು 4 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಯಿತು. ಪಕ್ಷೇತರ ಅಭ್ಯರ್ಥಿಯಾಗಿ ಪಿ.ಎಸ್.ಯಡೂರಪ್ಪ, ದೊರೆಸ್ವಾಮಿ ಹಾಗೂ ಕರುನಾಡ ಪಕ್ಷದಿಂದ ಹೆಚ್.ಕೆ.ಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಬಿಜೆಪಿ ಮುಖಂಡರಿಂದ ಅರಮನೆಯಲ್ಲಿ ಭಿ ಫಾರಂ ಸ್ವೀಕರಿಸಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಆದರೆ, ಪ್ರಮೋದದೇವಿ ಒಡೆಯರ್, ಶಾಸಕ ಶ್ರೀವತ್ಸ ಉಪಸ್ಥಿತರಿದ್ದರು. ಆ ಮೂಲಕ ಇಲ್ಲಿಯವರೆಗೆ ಒಟ್ಟು 7 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆಯಾಗಿದೆ.
4ಕೋಟಿ ಒಡೆಯ ಯಧುವೀರ
ಯದುವೀರ್ ಹೆಸರಿನಲ್ಲಿ 4ಕೋಟಿ 99ಲಕ್ಷದ 59 ಸಾವಿರದ 303ರೂ., ಮಡದಿ ತ್ರಿಷಿಕಾ ಹೆಸರಿನಲ್ಲಿ 1ಕೋಟಿ 4ಲಕ್ಷದ 25ಸಾವಿರ ರೂ. ಹಾಗೂ ಪುತ್ರನ ಹೆಸರಿನಲ್ಲಿ 3ಕೋಟಿ 63 ಲಕ್ಷದ 55ಸಾವಿರದ 343ರೂ. ಹೊಂದಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೋಟ್ಯಾಧೀಶ್ವರ ಯದುವೀರ್, ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್ ತಾಯಿಗಿಂತಲೂ ಸಿರಿವಂತ. ಯದುವೀರ್ ಹೆಸರಿನಲ್ಲಿ ಸ್ವಂತ ವಾಹನ ಅಥವಾ ಸ್ಥಿರಾಸ್ತಿ ಇಲ್ಲ. ಯದುವೀರ್ ಬಳಿ ಯಾವುದೇ ಕೃಷಿಭೂಮಿ, ಸ್ವಂತಮನೆ ಹೊಂದಿಲ್ಲ, ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್‍ಗಳಲ್ಲಿ ಸಾಲ ಪಡೆದಿಲ್ಲ. ಯದುವೀರ್ ವಿರುದ್ದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಚಿನ್ನ ಬೆಳ್ಳಿ ವಿವರ: ಯದುವೀರ್ ಹೆಸರಿನಲ್ಲಿ 3ಕೋಟಿ 25ಲಕ್ಷ ರೂ. ಮೌಲ್ಯದ 4ಕೆ.ಜಿ ಚಿನ್ನವಿದೆ. ಮಡದಿ ತ್ರಿಷಿಕಾ ಹೆಸರಿನಲ್ಲಿ 90ಲಕ್ಷದ ಮೌಲ್ಯದ ಚಿನ್ನ ಹಾಗೂ 5.5 ಲಕ್ಷ ಮೌಲ್ಯದ ಚಿನ್ನದ ಗಟ್ಟಿ, ಪುತ್ರನ ಹೆಸರಿನಲ್ಲಿ 12ಲಕ್ಷದ ಚಿನ್ನ ಹಾಗೂ 5.5ಲಕ್ಷದ ಚಿನ್ನದ ಗಟ್ಟಿ ಇದೆ. ಯದುವೀರ್ ಹೆಸರಿನಲ್ಲಿ 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿ ಇದ್ದರೇ ಮಡದಿ ಹೆಸರಿನಲ್ಲಿ 7ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ, ಹಾಗೂ ಮಗನ ಹೆಸರಿನಲ್ಲಿ 7 ಲಕ್ಷ ರೂ. ಮೌಲ್ಯದ 10 ಕೆ.ಜಿ ಬೆಳ್ಳಿ ಇವೆ. ಒಟ್ಟಾರೆ ಯದುವೀರ್ ಹೆಸರಿನಲ್ಲಿ 3ಕೋಟಿ 33ಲಕ್ಷ ರೂ., ಮಡದಿ ಹೆಸರಿನಲ್ಲಿ 1ಕೋಟಿ ಹಾಗೂ ಮಗನ ಹೆಸರಿನಲ್ಲಿ 20ಲಕ್ಷ ರೂ ಮೌಲ್ಯದ ಚಿನ್ನಾಭರಣಗಳಿವೆ.