ಬಸ್ಟಾಂಡ್ ನಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧನೆ
ಸಂಜೆವಾಣಿ ವಾರ್ತೆ
ಸೇಡಂ,ಎ,02: ಪಟ್ಟಣದ ಬಸ್ಟಾಂಡ್ ನಲ್ಲಿ ಸಾರ್ವಜನಿಕರಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ತಾಲೂಕಾ ಚುನಾವಣಾಧಿಕಾರಿ ಆಶಪ್ಪ ಕೆಎಎಸ್ ಅವರು ಬೋಧನೆಯನ್ನು ಮಾಡಿ ಮಾತನಾಡಿದರು. ಈ ವೇಳೆಯಲ್ಲಿ ತಹಸಿಲ್ದಾರ್ ಶಿವಾನಂದ್ ಮೇತ್ರೆ, ಇಓ ಚನ್ನಪ್ಪ ರಾಯನನವರ, ಟಿಎಚ್ ಓ ಡಾ.ಸಂಜೀವಕುಮಾರ ಪಾಟೀಲ್, ಸರಕಾರಿ ನೌಕರರ ಅಧ್ಯಕ್ಷ ಶಿವಶಂಕರಯ್ಯ ಸ್ವಾಮಿ, ಶ್ರೀನಿವಾಸ ರಾವ್ ಕುಲಕರ್ಣಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಮ್ಮ ಮತ ನಮ್ಮ ಹಕ್ಕು ನಮ್ಮ ದೇಶದ ಅಭಿವೃದ್ಧಿ ಪಥದತ್ತ ಹೊಂದಬೇಕಾದರೆ ಪ್ರತಿ ಒಬ್ಬರು ಮೇ 7 ರಂದು ಮತದಾನ ಮಾಡಿ, ಆಸೆ ಅಮಿಷಗಳಿಗೆ ಬಲಿಯಾಗದೆ ಅಭಿವೃದ್ಧಿ ಕೈಗೊಳ್ಳುವಂತಹ ಅಭ್ಯರ್ಥಿಗೆ ಮತ ನೀಡಿ ಬಲಿಷ್ಠ ಭಾರತವಾಗಲು ಮುನ್ನಡೆ ಬರೆಯಿರಿ.
ಆಶಪ್ಪ ಕೆಎಎಸ್ ತಾಲೂಕಾ ಚುನಾವಣಾಧಿಕಾರಿ ಸೇಡಂ