ಡೇರ್ ಡೆವಿಲ್ ಮುಸ್ತಫಾ ಸಿನೆಮಾ ಬದುಕಿನ ವಾಸ್ತವತೆ ಚಿತ್ರಣ: ಶಶಾಂಕ ಸೋಗಲ್
ಸಂಜೆವಾಣಿ ವಾರ್ತೆ,
ವಿಜಯಪುರ,ಏ.2:ವೈವಿಧ್ಯತೆಯ ಮಧ್ಯ ಸಾಮರಸ್ಯದ ಬದುಕಿನ ಮುನ್ನೋಟವನ್ನು ಪ್ರತಿನಿಧಿಸುವ ಪೂರ್ಣಚಂದ್ರ ತೇಜಸ್ವಿಯವರ ಡೇರ್ ಡೆವಿಲ್ ಮುಸ್ತಾಫಾ ಸಿನೆಮಾ ನಮ್ಮ ದೈನಂದಿನ ಬದುಕಿನ ನಿಜ ವಾಸ್ತವವನ್ನು ತೋರಿಸುತ್ತದೆ ಎಂದು ಸಿನೆಮಾ ನಿರ್ದೇಶಕ ಶಶಾಂಕ ಸೋಗಲ್ ಅÀವರು ಅಭಿಪ್ರಾಯಪಟ್ಟರು.
ಆವಿಷ್ಕಾರ, ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಮ್‍ಎಸ್‍ಎಸ್ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ’13ನೇ ವಿಜಯಪುರ ಸಾಂಸ್ಕøತಿಕ ಜನೋತ್ಸವ’ದ ಎರಡನೇ ದಿನ ಡೇರ್ ಡೆವಿಲ್ ಮುಸ್ತಾಫಾ ಸಿನೆಮಾ ಪ್ರದರ್ಶನದ ನಂತರದ ಸಂವಾದದಲ್ಲಿ ಅವರು ಮಾತನಾಡಿದರು.
ಪೂರ್ಣಚಂದ್ರ ತೇಜಸ್ವಿಯವರ ಆಶಯ ಈಗಲೂ ಪ್ರಸ್ತುತವಾಗಿದೆ. ನಮ್ಮ ಸಿನೆಮಾ ಕೇವಲ ಮನರಂಜನೆಗಲ್ಲದೆ ಜನರಿಗೆ ಒಂದು ಸಂದೇಶ ತಲುಪಿಸುವ ಉದ್ದೇಶ ಹೊಂದಿದೆ. ಡೇರ್‍ಡೆವಿಲ್ ಮುಸ್ತಫಾ ಕಥೆ ನನ್ನಲ್ಲಿರುವ ಪೂರ್ವಾಗ್ರಹ ಪೀಡಿತವನ್ನು ಹೊಡೆದು ಹಾಕಿತು. ಹಾಗೆಯೇ ಜನರಲ್ಲಿರುವ ಪೂವಾಗ್ರಹ ಪೀಡಿತವನ್ನು ಹೊಡೆದೋಡಿಸಿ ಜನರು ಪರಸ್ಪರ ಸಾಮರಸ್ಯದಿಂದ ಬದುಕುವ ಸಂದೇಶ ಕೊಡಲು ಈ ಸಿನೆಮಾ ತೆಗೆಲಾಯಿತು. ನನ್ನ ಸಿನೆಮಾಗಳಲ್ಲಿ ಹೀರೋ, ವಿಲನ್‍ಗಳು ಇರುವುದಿಲ್ಲ ಜನರಿಗೆ ವಿಚಾರಗಳು ತಲುಪಿಸುವ ನಿಟ್ಟಿನಲ್ಲಿ ನನ್ನ ಸಿನಿಮಾಗಳು ಇರುತ್ತವೆ ಎಂದರು.
ಸಿನೆಮಾಗಳು ಜನತೆಯ ನೈಜ ಸಮಸ್ಯೆಗಳನ್ನು ಚಿತ್ರಿಸುವುದರ ಜೊತೆಗೆ ಸಮಾಜದಲ್ಲಿ ಹೊಸ ಬದಲಾವಣೆಯನ್ನು ನಿರೀಕ್ಷಿಸುವಂತಿರಬೇಕು. ಈ ಸಿನೆಮಾ ಅಂತಹ ಸೌಹಾರ್ದತೆಯನ್ನು ಜಾಗೃತಗೊಳಿಸುವ ಕೆಲಸ ಮಾಡಿದೆ ಎಂದೂ ನುಡಿದರು.
ಡೇರ್ ಡೆವಿಲ್ ಮುಸ್ತಾಫಾ ಸಿನೆಮಾದ ಕೇಂದ್ರ ಬಿಂದುವಾದ ನಾಯಕ ನಟ ಶಿಶಿರ ಬೈಕಾಡಿ ಮಾತನಾಡಿ, ನಮ್ಮೆಲ್ಲ ಪೂರ್ವಗ್ರಹಗಳನ್ನು ಒಂದೆಡೆ ಇಟ್ಟು ಮುಕ್ತ ಮನಸ್ಸಿನಿಂದ ಸಿನೆಮಾವನ್ನು ವೀಕ್ಷಿಸಬೇಕು. ಸಿನೆಮಾಗಳು ಕೇವಲ ಮನರಂಜನೆಯ ಸಾಧನಗಳಾಗದೇ ನಮ್ಮನ್ನು ಚಿಂತನೆಗೆ ಹಚ್ಚುವಂತಿರಬೇಕು. ಜೊತೆಗೆ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುವಂತಿರಬೇಕು ಎಂದರು.
ಪ್ರಾಸ್ತಾವಿಕವಾಗಿ ಎ.ಐ.ಡಿ.ಎಸ್.ಒ ನ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಅವರು ಮಾತನಾಡಿದರು. ಎ.ಐ.ಎಮ್.ಎಸ್.ಎಸ್ ನ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.