ಕ್ರೀಡೆಯಿಂದ ದೈಹಿಕ, ಬೌದ್ಧಿಕ ವಿಕಾಸ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.19: ಕ್ರೀಡೆ ಮಕ್ಳಳಲ್ಲಿ  ದೈಹಿಕ ಹಾಗೂ ಬುದ್ಧಿಬಲದ ಜೊತೆಗೆ ಮನರಂಜನೆ ನೀಡುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ನಿನ್ನೆ ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬಳ್ಳಾರಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ಮೇರಿ ಚದುರಂಗ ಆಟದಲ್ಲಿ, ಎಂಟನೇ ತರಗತಿ ಟಿ.ವಿಜಯಲಕ್ಷ್ಮಿ100ಮೀಟರ್ ಓಟ ಹಾಗೂ ಎತ್ತರ ಜಿಗಿತದಲ್ಲಿ ಭಾಗವಹಿಸಿದ್ದರು.
ಭಾಗವಹಿದವರಲ್ಲಿ   ಮೇರಿ ಚದುರಂಗ ಆಟದಲ್ಲಿ 25 ಅಂಕ ಪಡೆದು ರೋಚಕ ಪಂದ್ಯದಲ್ಲಿ ಎದುರಾಳಿ ವಿರುದ್ಧ ಒಂದೇ ಒಂದು ಅಂಕ ಅಂತರದಿಂದ ಸೋಲು ಕಂಡು ದ್ವಿತೀಯ ಸ್ಥಾನ ಪಡೆದರು. ಟಿ. ವಿಜಯಲಕ್ಷ್ಮಿ ಓಟದಲ್ಲಿ ತೃತೀಯ ಸ್ಥಾನ ಪಡೆದರು.ಆ  ನಿಮಿತ್ತ ಇಂದು ಅವರನ್ನು ಶಾಲೆಯ ಪ್ರಾರ್ಥನೆ ಸಮಯದಲ್ಲಿ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಮಾತನಾಡಿದ ಅವರು ಸೋತವರು ಹೆದೆಗುಂದದೆ ಪ್ರಯತ್ನ ಮುಂದುವರಿಸಬೇಕು. ಶಾಲೆಯ ಇತರೇ ಮಕ್ಕಳು ಕೂಡ ಶ್ರಮ ಪಟ್ಟು ಕಲಿಯಬೇಕೆಂದು ಹೇಳಿದರು.
ಶಿಕ್ಷಕರಾದ ಚನ್ನಮ್ಮ, ಸುಮತಿ, ವೈಶಾಲಿ, ಶ್ವೇತಾ, ಉಮ್ಮೆಹಾನಿ,ವ್ಯವಸ್ಥಾಪಕ ಶಿಕ್ಷಕರಾದ ಶಶಮ್ಮ, ರಾಮಾಂಜನೇಯ,ವಿಜಯ ಮುಂಡ್ರಿಗಿ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕೆ.ಎಸ್. ಅನುಷ ಮುಂತಾದವರು ಉಪಸ್ಥಿತರಿದ್ದರು.