ಇಂದಿನಿಂದ ಕೊಟ್ಟೂರುಸ್ವಾಮಿ ಮಠದಲ್ಲಿಕುಮಾರೇಶ್ವರ ಜೀವನ ದರ್ಶನ ಪುರಾಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.19; ನಗರದ  ಕೊಟ್ಟೂರು ಸ್ವಾಮಿ ಮಠದಲ್ಲಿ, ಮಠದ ಶ್ರೀಗಳಾದ ಬಸವಲಿಂಗ ಶ್ರೀಗಳು, ಸಿದ್ದೇಶ್ವರ ಸ್ವಾಮಿಗಳು ಬೂದುಗುಂಪ,  ನಿರಂಜನ ಪ್ರಭು ಸ್ವಾಮಿಗಳು ಕುರುಗೋಡು ಇವರುಗಳ ಸಾನಿಧ್ಯದಲ್ಲಿ ಇಂದಿನಿಂದ  ಹತ್ತು ದಿನಗಳ ಕಾಲ  ಪ್ರತಿದಿನ ಸಂಜೆ 7 ರಿಂದ 8.30 ರವರೆಗೆ  ಹಾನಗಲ್  ಕುಮಾರ ಶಿವಯೋಗಿಗಳ 157 ಜಯಂತ್ಯೋತ್ಸವ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ 86ನೇ ಜಯಂತೋತ್ಸವದ ಅಂಗವಾಗಿ .  ಹಾನಗಲ್ಲ ಮಹಾಶಿವಯೋಗಿಗಳ ಜೀವನ ದರ್ಶನ ಪ್ರವಚನ(ಪುರಾಣ) ನಡೆಯಲಿದೆ.
ಇಂದು ಬೆಳಿಗ್ಗೆ ಪುರಾಣ  ಪ್ರಾರಂಭದ ಹಿನ್ಬಲೆಯಲ್ಲಿ  ಶ್ರೀಧರಗಡ್ಡೆಯ ಮರಿ  ಕೊಟ್ಟೂರು ದೇಸಿಕರು  ಧ್ವಜಾರೋಹಣ ನೆರವೇರಿಸಿ ವೀರಶೈವ ಗೀತೆಯನ್ನು ಹಾಡುವುದರ  ಮೂಲಕ ಚಾಲನೆ ನೀಡಿದರು.
ಮಾಜಿ ಸಚಿವ, ವೀರಶೈವ ಧುರೀಣ ಅಲ್ಲಂ ವೀರಭದ್ರಪ್ಪ,  ಹಂಪನಗೌಡ  ಹಚ್ಚೊಳ್ಳಿ ಶರಣಬಸವನಗೌಡ ಕಣ್ಣಿ ರಾಜಶೇಖರ,  ಹೊನ್ನನಗೌಡ ಮಲ್ಲನಗೌಡ, ಅಂಗಡಿ ಶಂಕರ್ ಡಿ.ದಾಸಾಪುರ ಅರುಣ್ ಕುಮಾರ್, ಪಂಚಾಕ್ಷರಪ್ಪ, ಜಮಾಪುರದ ಪಂಪನಗೌಡ, ಯಾಳ್ಪಿ ದಿವಾಕರ್ ಗೌಡ,  ಪತಂಜಲಿ ಯೋಗ ಶಿಕ್ಷಕ ಸಿ .ಕೆ. ಪ್ರಕಾಶ್, ಹಲಕುಂದಿ ವೀರನಗೌಡ, ಶಾಸ್ತ್ರಿನಗರ ದೇವೇಂದ್ರ, ಬಿಎಂ ಹನುಮಂತರೆಡ್ಡಿ, ಉಮೇಶ್ ಎಸ್ ಗೌಡ ಮೊದಲಾದವರು ಇದ್ದರು.