ಬಳ್ಳಾರಿಯಲ್ಲಿ ಧ್ರುವ ಸರ್ಜಾ ಅಭಿಮಾನಿಗಳಿಂದಹಯಗ್ರೀವ ಸರ್ಜಾ ಹುಟ್ಟು ಹಬ್ಬ
( ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ.19: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪುತ್ರ ಹಯಗ್ರೀವ ಸರ್ಜಾ ಅವರ ಪ್ರಥಮ ಹುಟ್ಟು ಹಬ್ಬದ ಅಂಗವಾಗಿ ನಿನ್ನೆ ಜೈ ಹನುಮಾನ್‌ ಸರ್ಜಾ ಅಭಿಮಾನಿಗಳ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಜಿ ಕನಕ ಅವರು ಸಂಘದ ಪದಾಧಿಕಾರಿಗಳೊಂದಿಗೆ
ನಿರ್ಗತಿಕರಿಗೆ ಆಹಾರದ ಪೊಟ್ಟಣ ಹಾಗೂ ನೀರಿನ ಬಾಟಲ್ ವಿತರಣೆ ಮಾಡಿದರು.
ನಗರದ ಮೀನಾಕ್ಷಿ ಸರ್ಕಲ್, ರಾಯಲ್ ಸರ್ಕಲ್, ಕನಕ ದುರ್ಗಮ್ಮ ದೇವಸ್ಥಾನ ಹತ್ತಿರ, ಮೋತಿ ಸರ್ಕಲ್ ಸೇರಿದಂತೆ ವಿವಿಧ ಕಡೆ ಇದ್ದ ನಿರ್ಗತಿಕರಿಗೆ ವಿತರಿಸಿ ಸಂತಸ ಪಟ್ಟರು.
ಈ ವೇಳೆ  ಕನಕ ಮಾತನಾಡಿ, ಹಯಗ್ರೀವ ಸರ್ಜಾ ಹಾಗೂ ಸರ್ಜಾ ಕುಟುಂಬದವರಿಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಸಮೃದ್ಧಿ ನೀಡಲೆಂದು ಬಳ್ಳಾರಿ ನಗರದ ಆದಿ ದೇವತೆ ಶ್ರೀ ಕನಕ ದುರ್ಗಮ್ಮ ದೇವಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ನಗರಾಧ್ಯಕ್ಷ ಉಮಾರ್ ಫಾರೂಕ್, ಪದಾಧಿಕಾರಿಗಳಾದ ವೈ.ಅರುಣ್ ಕುಮಾರ್, ಸಿ.ತಿಪ್ಪೆರುದ್ರ, ನಾಗರಾಜ್ ಹುಬ್ಬಳ್ಳಿ, ಮೋಕ ಷಾಷ, ಕೆ.ಗಣೇಶ್ ಬೆಳಗಲ್, ಡಿ.ಕೆ ಗಾದಿಲಿಂಗಪ್ಪ ಸೇರಿದಂತೆ ಧ್ರುವ ಸರ್ಜಾ ಅಭಿಮಾನಿಗಳು ಉಪಸ್ಥಿತರಿದ್ದರು.