ಮುನಿರತ್ನ ಅವರ ಶಾಸಕ ಸ್ಥಾನ ರದ್ದು ಮಾಡಲುಕಾಂಗ್ರೆಸ್ ಎಸ್ಸಿ ವಿಭಾಗ ಮನವಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.19: ಬೆಂಗಳೂರು ರಾಜೇಶ್ವರಿ ನಗರ ವಿಧಾನಸಭಾ ಸದಸ್ಯ ಮುನಿರತ್ನ ನಾಯ್ಡು ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಮಹಿಳೆಯರನ್ನು ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಂಚಕ್ಕೆ ಬೇಡಿಕೆ ಇಟ್ಟು ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪದ ಅಡಿಯಲ್ಲಿ, ಇವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಿದ್ದುಪಡಿ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗ ಸಭಾಪತಿ ಮನವಿ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಸ್ಸಿ ವಿಭಾಗದ ಜಿಲ್ಲಾ ಅಧ್ಯಕ್ಷ ಎಂ.ವಿ.ಎರುಕಲಸ್ವಾಮಿ ಅವರು. ಶಾಸಕ ಮುನಿರತ್ನ ನಾಯ್ಡು ಅವರು, ಬಿ.ಬಿ.ಎಂ.ಪಿ. ಗುತ್ತಿಗೆದಾರ ಚೆಲುವರಾಜ್ ರೊಂದಿಗೆ ಹಣಕಾಸಿನ ವಿಚಾರವಾಗಿ ಮಾತುಕತೆ ವೇಳೆಯಲ್ಲಿ ಮಾತನಾಡಿದ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಿಮ್ಮ ಮನೆಯ ಮಹಿಳೆಯರನ್ನು ನನ್ನ ಪಕ್ಕ ಮಲಗಿಸು, ಹೋಗಿ ಹೋಗಿ ಹೊಲೆಯ ಜಾತಿಗೆ ಸುಳೆ ಮಕ್ಕಳ ಸಹವಾಸ ಮಾಡ್ತಿಯಾ, ಎಂದು ಹಣಕ್ಕೆ ಬೇಡಿಕೆ ಇಟ್ಟು ಪರಿಶಿಷ್ಟ ಜಾತಿ ಹಾಗೂ ಒಕ್ಕಲಿಗ ಸಮುದಾಯದ ಮಹಿಳೆಯರನ್ನು ಮಂಚಕ್ಕೆ ಕರೆದಿದ್ದಾನೆ.
ಪರಿಶಿಷ್ಟ ಜಾತಿ ಹಾಗೂ ಒಕ್ಕಲಿಗ ಸಮುದಾಯದ ಜನರಿಗೆ ನ್ಯಾಯ ಒದಗಿಸಬೇಕೆಂದು ಈ ಮೂಲಕ ತಿಳಿಸುತ್ತೇವೆ. ಸಂವಿಧಾನದ ಆಶ್ರಯದಂತೆ ಒಬ್ಬ ಜನಪ್ರತಿನಿಧಿ ಆದವನು ತಮ್ಮ ಕ್ಷೇತ್ರದ ಸರ್ವ ಜನಾಂಗದ ಒಬ್ಬ ಸೇವಕನಾಗಿ ಸೇವೆ ಮಾಡುವುದು ಒಬ್ಬ ಜನಪ್ರತಿನಿಧಿಯ ಕರ್ತವ್ಯ ಅದನ್ನು ಬಿಟ್ಟು, ಕ್ಷೇತ್ರದ ಹಲವು ಸಮುದಾಯದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾನೆ ಎಂದರೆ ಪ್ರತಿಯೊಬ್ಬರೂ ಯೋಚಿಸಬೇಕು.
ಸಭಾಪತಿಯವರು ಶಾಸಕ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ,
ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
ಮನವಿ ಗಾಂಧಿನಗರ ಠಾಣೆಯ ಅಧಿಕಾರಿ ಸಿದ್ರಾಮೇಶ್ವರ ಗಡೇದ ಅವರಿಗೆ ಸಲ್ಲಿಸಲಾಯ್ತು. ಈ ವೇಳೆ ಕೌಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ, ಬ್ರೂಸ್‌ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಕಂಟೋನ್ಸೆಂಟ್ ಬ್ಲಾಕ್ ಕಾಂಗ್ರೆಸ್ ಅಧಕ್ಷ ಟಿ.ಆನಂದ್, ಬಳ್ಳಾರಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ರಾಜು ತೊಲಮಾಮಿಡಿ ಜಿಲ್ಲಾ ಸಂಘದ ಉಪಾಧ್ಯಕ್ಷರುಗಳಾ ಕಂದುಕೂರು ರಾಮುಡು, ಹೆಚ್.ಗೋವಿಂದರಾಜುಲು, ವಿ.ರಾಮಣ್ಣ, ಜಲಾಲ್ ಬೆಣಕಲ್ಲು, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಕುರುವಳ್ಳಿ, ಹೆಚ್.ಮಲ್ಲಿಕಾರ್ಜುನ, ಪ್ರವೀಣ್ ಕುಮಾರ್ ಉಪ ಸ್ಥಿತರಿದ್ದರು.