ಆರ್.ಬಿ.ವೈ.ಎಂ. ಕಾಲೇಜ್ ನಲ್ಲಿ ಇಂಜಿನಿಯಱ್ಸ್ ದಿನಾಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.19: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರ್ಸ್ ಡೇ ದಿನಾಚರಣೆ , ಅದ್ದೂರಿಯಾಗಿ ನಡೆಯಿತು ,
ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಎಂ.ಮಲ್ಲಿಕಾರ್ಜುನ, ಎಲ್ಲರನ್ನು ಸ್ವಾಗತಿಸಿದರು
ಮುಖ್ಯ ಅತಿಥಿ ಇಂಜಿನಿಯ ಈಶ್ವರಗೌಡ (ಪ್ರೆಸಿಡೆಂಟ್ ಆಫ್ ಎ.ಸಿ.ಸಿ.ಈ.ಎ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆರ್ಕಿಟೆಕ್ಟ್ ಬಳ್ಳಾರಿ) ಅವರು ಮಾತನಾಡುತ್ತಾ “ಸಿವಿಲ್ ಇಂಜಿನಿಯರ್ ವಿಭಾಗದ ಕುರಿತು ಗೌರವವನ್ನು ಹೊಂದಬೇಕು ಮತ್ತು ಈ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಇತರೆ ಎಲ್ಲಾ ವಿಭಾಗಗಳಿಗೆ ತಾಯಿ ಸ್ಥಾನ ಅಥವಾ ಮೂಲಸ್ಥಾನ ಆಗಿರುವುದು” ,  ಇದರ ಪ್ರಾಮುಖ್ಯತೆ ಬಗ್ಗೆ ಎಲ್ಲಾ ವಿಷಯಗಳನ್ನು ಸೇರಿರುವ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು
ತದ ನಂತರ ಉಪಪ್ರಾಂಶುಪಾಲರಾದ ಡಾ.ಸವಿತಾ ಸೋನೋಳಿ ಅವರು “ಗುಣಮಟ್ಟದ ಕಾಮಗಾರಿಗಳನ್ನು ಸಮಾಜಕ್ಕೆ ಒದಗಿಸುವುದರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಪ್ರಮುಖಪಾತ್ರ ವಹಿಸಿದೆ “ಎಂದು ತಿಳಿಸಿಕೊಟ್ಟರು. ಶ್ರಾವಣಿ ಬಿ ಅವರು ಮುಖ್ಯ ಅತಿಥಿ ಇಂಜಿನಿಯರ್ ಹೇಮರಾಜ (KES) ಅವರ ಕಿರುಪರಿಚಯ ಮಾಡಿದರು, ಎಕ್ಸಿಕ್ಯೂಟಿವ್ ಇಂಜಿನಿಯರ್ ಹೇಮರಾಜ್ (ಪಿಡಬ್ಲ್ಯೂಡಿ ಡಿವಿಜನ್ ಬಳ್ಳಾರಿ )ಅವರು ವಿಶ್ವೇಶ್ವರಯ್ಯ ಅವರ ಕುರಿತು ಅವರ ಸಮಾಜ ಸೇವೆಗಳ ಕುರಿತು ಮಾತನಾಡುತ್ತ “ನಾವು ನಮ್ಮ ಜೀವನದಲ್ಲಿ, ಮುಖ್ಯವಾಗಿ ಇಂಜಿನಿಯರಿಂಗ್ ಸ್ಥಾನದಲ್ಲಿ , ಸರ್ ಎಂ ವಿಶ್ವೇಶ್ವರಯ್ಯ ಅವರ ಹಾದಿಯಲ್ಲಿ ನಡೆದು ಅವರ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.”ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟರು
ನಂತರ ನಮ್ಮ ಮಹಾವಿದ್ಯಾಲಯದ ಅಧ್ಯಕ್ಷರು ಜಾನಕುಂಟೆ ಬಸವರಾಜ್ ಅವರು ಮಾತನಾಡುತ್ತಾ “ಮೊದಲನೆಯದಾಗಿ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಎಲ್ಲಾ ಇಂಜಿನಿಯರಿಂಗ್ ವಿಭಾಗಗಳಿಗೆ ಮೂಲವಾಗಿದೆ ,ಆದ್ದರಿಂದ ನಾವು ಈ ಸಿವಿಲ್ ಇಂಜಿನಿಯರಿಂಗ್ ಎನ್ನುವ ಅತ್ಯುತ್ತಮ ವೃತ್ತಿಯಲ್ಲಿ ಇದ್ದೇವೆ ಎನ್ನುತ್ತಾ ಗರ್ವಪಡಬೇಕು, ಎಲ್ಲಾ ವಿದ್ಯಾರ್ಥಿಗಳು ಇದನ್ನು ನೆನಪಿಸಿಕೊಳ್ಳಬೇಕು , ಐದು ಅಥವಾ ಆರು ವರ್ಷದ ಕಠಿಣ ಪರಿಶ್ರಮದ ನಂತರವೇ, ಉತ್ತಮವಾದ ಕೆಲಸ ಸಿಗುವುದು ಸಾಧ್ಯ ಮತ್ತು ನಮಗೆ ದೊರಕುತ್ತಿರುವ ಕೆಲಸದಲ್ಲಿ ಎಂದು ಸಂಬಳನೋಡಿ ಅಥವಾ ಸಂಬಳಕೊಸ್ಕರ ಕೆಲಸ ಮಾಡಬಾರದು ನಾವುಕಲಿಯುವ ಕೆಲಸ ಬಗ್ಗೆ ಗೌರವ ಹೊಂದಿದ್ದು ಮತ್ತು
ಆಸಕ್ತಿಯಿಂದ ಮಾತ್ರವೇ ಮಾಡಬೇಕು ಯಾವುದೇ ಕೆಲಸವಾಗಲಿ ನಿಷ್ಠೆಯಿಂದ ಮಾಡಬೇಕು” ಎಂದು ತಿಳಿಹೇಳಿದರು
ಅಧ್ಯಕ್ಷರು ಜಾನೆಕುಂಟೆ ಬಸವರಾಜ,  ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಎಂ.ಮಲ್ಲಿಕಾರ್ಜುನ, ಇಂಜಿನಿಯರ ಈಶ್ವರಗೌಡ , ಡಾ. ಸವಿತಾ ಸೋನೋಳಿ ಅವರಿಂದ ಮುಖ್ಯ ಅತಿಥಿಗಳಾದ ಹೇಮರಾಜ್ ಅವರಿಗೆ ಗೌರವ ಸನ್ಮಾನ ಮಾಡಿದರು
ನಂತರ ವಿಕಾಸ್ ಎಂಬ ವಿದ್ಯಾರ್ಥಿಯಿಂದ ಸರ್ ಎಂ ವಿಶ್ವೇಶ್ವರಯ್ಯ ಅವರ ಕುರಿತು ಕೆಲವು ಮಾತುಗಳನ್ನು ತಿಳಿದುಕೊಂಡರು, ವಿದ್ಯಾರ್ಥಿನಿ ಅಂಕಿತ ನಿರೂಪಿಸಿದರು, ಕಾವ್ಯಶ್ರೀಯಿಂದ ವಂದನಾರ್ಪಣೆ ಮಾಡಲಾಯಿತು, ಎಲ್ಲಾ ವಿಭಾಗದ ಅಧ್ಯಾಪಕರು , ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು