ಸಸಿ ನೆಡುವ ಕಾರ್ಯಕ್ರಮ

ಗದಗ,ಸೆ19: ಶಿರಹಟ್ಟಿ ತಾಲೂಕಿನ ಕಿತ್ತೂರು ಚನ್ನಮ್ಮ ಬಾಲಕಿಯರ ವಸತಿ ಶಾಲೆಯ ಆವರಣದಲ್ಲಿ ತಾಯಿಯ ಹೆಸರಿನಲ್ಲಿ ಒಂದು ಗಿಡ” (ಎಕ್ ಪೆಡ್ ಮಾ ಕೆ ನಾಮ್ ಪರ್) ಎಂಬ ಶೀರ್ಷಿಕೆಯಡಿ ಅರಣ್ಯ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ನಾಗರಾಜ. ಕಳಸಾಪುರ ರವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಶಾಲೆಯ ಶಿಕ್ಷಕರಾದ ಸುನೀಲ ಲಮಾಣಿ, ಶ್ರೀಮತಿ ಮಂಜುಶ್ರೀ ಬಡಿಗೇರ, ಪ್ರಕಾಶ ಮ್ಯಾಗೇರಿ, ಶ್ರೀಮತಿ ಶೈಲಾ ಕುರ್ತಕೋಟಿ, ಪಲ್ಲಪ್ಪ ಡೊಂಕಬಳ್ಳಿ, ಈರಣ್ಣ ಬಾಗೇವಾಡಿ, ಕೃಷಿ ಹಾಗೂ ಜಲಾನಯನ ಇಲಾಖೆಯ ಆಧಿಕಾರಿ ಬಿ.ಕೆ.ಡಬಾಲಿ, ಜೆ.ಡಿ.ಶಿರಹಟ್ಟಿ, ಆರ್.ಎ.ಮಾಳಗಾವಿ ಹಾಗೂ ರಾಧಾಕೃಷ್ಣ ಉಪಸ್ಥಿತರಿದ್ದರು.