ಪಾಠದ ಜೊತೆಗೆ ಕ್ರೀಡೆಯತ್ತ ಆಸಕ್ತಿ ವಹಿಸಿ
ಚನ್ನಮ್ಮನ ಕಿತ್ತೂರು,ಸೆ19: ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಾರಣ. ವ್ಯಕ್ತಿತ್ವದ ವಿಕಸನವಾಗಲು ಕ್ರೀಡೆ ಮೂಲ ಸಾಧನವಾಗಿಯೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಾಲೂಕಿನ ದೇವರಶೀಗಿಹಳ್ಳಿ ಬಯಲು ರಂಗಮಂದಿರ ವಿಶ್ವಭಾರತಿ ಪ್ರೌಢಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಪ್ರಾಥಮಿಕ-ಪ್ರೌಢಶಾಲೆಗಳ ಇಲಾಖೆ ಕ್ರೀಡಾ ಕೂಟದ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. ಆಟವಾಡುವುದರಿಂದ ದೈಹಿಕವಾಗಿ ಸದೃಢವಾಗಬಹುದು ಹಾಗೂ ಈ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗೆ ಅಗ್ರಸ್ಥಾನವಿದ್ದು. ಮಕ್ಕಳು ಪಾಠದ ಜೊತೆಗೆ ಕ್ರೀಡೆ ಬಗ್ಗೆ ಆಸಕ್ತಿ ಹೊಂದಬೇಕೆಂದು ಕರೆ ನೀಡಿದರು.
ನಂತರ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಕ್ರೀಡಾ ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಬಡಿಗೇರ, ಉಪಾಧ್ಯಕ್ಷ ವಿಜಯ ಹಂಚಿನಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ, ತಾಪಂ ಇಓ ಕಿರಣ ಗೋರ್ಪಡೆ, ಶ್ರೀ ವೀರಭದ್ರೇಶ್ವರ ಸ್ವಾಮಿಜೀ, ಎಸ್‍ಡಿಎಂಸಿ ಅಧ್ಯಕ್ಷ ಈರಣ್ಣಾ ತೋಟಗಿ, ಗ್ರಾಮಸ್ಥರು, ಪಿಡಿಓ, ಕಾರ್ಯದರ್ಶಿ, ಶಿಕ್ಷಕರು, ಮಕ್ಕಳು, ಇನ್ನಿತರರಿದ್ದರು.