ಪೋಷಣ ಮಾಸಾಚರಣೆ ಕಾರ್ಯಕ್ರಮ
ಗದಗ,ಸೆ19: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಶಿಶು ಅಭಿವೃದ್ಧಿ ಯೋಜನೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲೆಯ ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ಪೆÇೀಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪೆÇೀಷಣ ಮಾಸಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರೊಂದಿಗೆ ಉದ್ಘಾಟಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಪದ್ಮಾವತಿ ಜಿ ಮಾತನಾಡಿ ಸೆಪ್ಟೆಂಬರ ಮಾಹೆಯಲ್ಲಿ ಪೆÇೀಷಣ ಮಾಸಾಚರಣೆ ಕಾರ್ಯಕ್ರಮವನ್ನು ಏಕ್ ಪೇಡ್ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಒಂದು ಗಿಡ) ನೆಡುವುದರ ಮೂಲಕ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಉದ್ಘಾಟನೆ ಮಾಡಲಾಗಿದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಪೌಷ್ಠಿಕ ಕೈತೋಟಗಳನ್ನು ನಿರ್ಮಿಸಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಇದರಿಂದ ನಮ್ಮ ಆರೋಗ್ಯವನ್ನು ನಾವು ಉತ್ತಮವಾಗಿರಿಸಿಕೊಳ್ಳಬಹುದು ಎಂದು ಹೇಳಿದರು.
ಸೆಪ್ಟೆಂಬರ ತಿಂಗಳಾದ್ಯಂತ ವಾರಕ್ಕೆ 2 ಥೀಮ್ ಗಳನ್ನು ಇಟ್ಟುಕೊಂಡು ಇಡೀ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಗರ್ಭಿಣಿ ಬಾಣಂತಿಯರಲ್ಲಿನ ರಕ್ತಹೀನತೆ, ಅಪೌಷ್ಟಿಕತೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಹುಯಿಲಗೋಳ ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶಗೌಡ ಪಾಟೀಲ ಅವರು ಮಾತನಾಡಿ ಹಿಂದಿನ ಪೀಳಿಗೆಯು ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸುತ್ತಿದ್ದರು. ಆದರೆ ಇಂದಿನ ಪೀಳಿಗೆಯು ಪಾಶ್ಚಾತ್ಯ ಆಹಾರ ಪದ್ದತಿ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಇದರಿಂದ ಮಕ್ಕಳ ಮೇಲೆ ನೇರ ಪ್ರಭಾವ ಬೀರಿ ಮೇಲಿಂದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳ ಪೆÇೀಷಕರು ಇದರ ಸದುಪಯೋಗಪಡಿಸಿಕೊಂಡು ಸರಿಯಾದ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ರವೀಂದ್ರ ಕಳಸಣ್ಣವರÀ, ಡಾ. ಮಹೇಶ ಭಜಂತ್ರಿ ಸಮುದಾಯ ಆರೋಗ್ಯ ಅಧಿಕಾರಿಗಳು, ಶ್ರೀಮತಿ ನೀಲವ್ವ ಕಡೇಯವರ ಉಪಾಧ್ಯಕ್ಷರು, ಡಾ. ನಂದಾ ಆರೋಗ್ಯ ಸಂರಕ್ಷಣಾಧಿಕಾರಿಗಳು, ರಮೇಶ ಕಡೇಯವರ ಕಲ್ಮೇಶ ವಡ್ಡಿನ, ನೀಲನಗೌಡ ಪಾಟೀಲ ಉಪಸ್ಥಿತರಿದ್ದರು.
ಗರ್ಭೀಣಿಯರ ಸೀಮಂತ ಕಾರ್ಯಕ್ರಮ. ಪೌಷ್ಠಿಕ ಆಹಾರದ ಪ್ರಾತ್ಯಕ್ಷಿಕೆ.ಮಕ್ಕಳ ಹುಟ್ಟುಹಬ್ಬ ಕಾರ್ಯಕ್ರಮ. ಮಕ್ಕಳ ಸಂಸೃತಿಕ ಕಾರ್ಯಕ್ರಮ. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ವಿಶೇಷ ನೊಂದಣಿ ಅಭಿಯಾನ. ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶ್ರೀಮತಿ ರಾಜೇಶ್ವರಿ ಮೇಟಿ ಸಂರಕ್ಷಣಾಧಿಕಾರಿಗಳು, ಶ್ರೀಮತಿ ಮಂಜುಳಾ ಕಮತ್ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶ್ರೀಮತಿ ಭುವನೇಶ್ವರಿ ಕುಂಬಾರ ವಲಯ ಮೇಲ್ವೀಚಾರಕಿಯರು, ಕು. ಸಂಗೀತಾ ಹೂಗಾರ ಪೆÇೀಷಣ ಅಭಿಯಾನ ಜಿಲ್ಲಾ ಸಂಯೋಜಕರು ಹಾಗೂ ಕು. ಪವನ ಕಾಟೀಗರ ಜಿಲ್ಲಾ ಸಹಾಯಕರು, ಮಿಶನ್ ಶಕ್ತಿ ಯೋಜನೆಯ ರಾಜೇಶ್ವರಿ ಉಪ್ಪಿನ್, ಮಧುಶ್ರೀ ಉಪ್ಪಾರ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗರ್ಭಿಣಿಯರು, ತಾಯಂದಿರು, ಮಕ್ಕಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಜಿಲ್ಲಾ ಸಂಯೋಜಕರಾದ ಶ್ರೀಧರ ಪೂಜಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಭೋವಿ ಪ್ರಾರ್ಥಿಸಿದರು.