ಶಿವುಕುಮಾರ್ ಮಹಾಸ್ವಾಮೀಜಿಗೆ ಭಾರತರತ್ನ ಸಿಗಲಿ: ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ:ಏ.01: ನಡೆದಾಡುವ ದೇವರು, ಸಾಕ್ಷಾತ್ ಶಿವನ ಸ್ವರೂಪ, ಸಿದ್ಧಗಂಗಾ ಶ್ರೀಗಳಿಗೆ ಶಿವರತ್ನಕ್ಕೆ, ಭಾರತ ರತ್ನ ಸಿಗಲಿ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಹೇಳಿದರು.
ಸೋಮವಾರ ಶ್ರೀ ಸಿದ್ಧರಾಮೇಶ್ವರ್ ವೃತ್ತ ವಾಯು ವಿಹಾರ ಸಹೃದಯಿ ಬಳಗದವರಿಂದ 117ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶಿವುಕುಮಾರ್ ಮಹಾಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ತ್ರಿವೇದಿ ದಾಸೋಹ ಮೂರ್ತಿ , ಜ್ಞಾನ ದಾಸೋಹ ಸೇವೆ ಮಾಡಿದ ಮಹಾ ಶರಣ, ಇಡೀ ರಾಜ್ಯಕ್ಕೆ, ದೇಶಕ್ಕೇ ಆದರ್ಶವಾಗಿದೆ ಎಂದರು.
ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯ ಚನ್ನುಸ್ವಾಮಿ ಅವರು ಶ್ರೀಗಳ ಭಾವಚಿತ್ರವನ್ನು ಕಾಣಿಕೆಯಾಗಿ ವಾಯು ವಿಹಾರ ಬಳಗದ ಶ್ರೀ ಹಣಮಂತರಾಯಗೌಡ ಉದನೂರ್ ಅವರಿಗೆ ನೀಡಿದರು. ಸಹೃದಯಿ ವಾಯು ವಿಹಾರ ಬಳಗದವರಾದ ಹಣಮಂತರಾಯಗೌಡ ಉದನೂರ್, ಹುಲ್ಲಕಂಠರಾಯ್ ಎಸ್.ಎಂ. ಅರಳಗುಂಡಗಿ, ಶಾಂತಪ್ಪ ನಿಂಬಾಳ್, ದೇವಿಂದ್ರಪ್ಪ ಕೋಳಕೂರ್, ನಾಸಿ, ವೆಂಕಟೇಶ್ ನಿರಡಗಿ, ಶಿವುಕುಮಾರ್ ಬಿದರಿ, ಶರಣಕುಮಾರ್ ಬಿಲ್ಲಾಡ್ ಸಾಹು ನೆಲೋಗಿ, ಪ್ರಭು ಪಾಟೀಲ್ ಗವ್ಹಾರ್, ಪೂಜಾರಿ, ರಂಜಾಕ್ ಚೌದ್ರಿ, ಬಿ.ಎಂ. ಪಾಟೀಲ್ ಕಲ್ಲೂರ್ ಮುಂತಾದವರು ಉಪಸ್ಥಿತರಿದ್ದರು.