ದಿ ಬ್ಯಾಂಡ್ ಸ್ವರ್ ಸಂಗೀತವತಿಯಿಂದ ಶರಣಾರಾಧನೆ ಸಂಗೀತ ಕಾರ್ಯಕ್ರಮ
ಕಲಬುರಗಿ:ಏ.01: ಶ್ರೀ ಶರಣ ಬಸವೇಶ್ವರ 202ನೇ ಜಾತ್ರಾ ಉಚ್ಚಾಯಿ ರಥೋತ್ಸವದಂದು ಮಾ 29ರಂದು ಶುಕ್ರವಾರ ದಿ ಬ್ಯಾಂಡ್ ಸ್ವರ್ ಸಂಗೀತವತಿಯಿಂದ ಶರಣಾರಾಧನೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪೂಜ್ಯ ಡಾ ದಾಕ್ಷಾಯಣಿ ಮಾತೋಶ್ರೀ ಆರ್ಶಿವಾದದೊಂದಿಗೆ ಚಿರಂಜೀವಿ ದೊಡ್ಡ ಅಪ್ಪಾ ಅವರು ಗೀಟಾರ ನುಡಿಸುವ ಮೂಲಕ ಚಾಲನೆ ನೀಡಿದರು. ಬಸವರಾಜ ದೇಶಮುಖ, ಅಲ್ಲಮಪ್ರಭು ದೇಶಮುಖ, ದಿ ಬ್ಯಾಂಡ್ ಸ್ವರ್ ಸಂಗೀತ ಸಂಸ್ಥಾಪಕ ಸಚಿನ ಜಾದವ ಅವರು ವೇದಿಕೆ ಮೇಲೆ ಉಪಸಿತ್ಥರಿದ್ದರು.
ಶಿವರ್ನ ಗೀಟಾರವಾದಕ ಹಾಗೂ ಸಂಗೀತಗಾರರು ತೇಜಸ್ವೀನಿ ಕುಲಕರ್ಣಿ ಹಾಡುಗಾರ್ತಿ, ತು ಳಸಿ ಗೋಲ್ಡ ಸಿತ್ಮ್, ಪ್ರಶಾಂತ ಜಿ ಕೊಳಲುವಾದಕ, ಅಭಿಲಾಷ ಮಠಪತಿ ಡೋಲುವಾದಕ, ಪ್ರಶಾಂತ ದೇವಣಿ ಡ್ರಮರ್, ಮನೋಹರ ವಿಶ್ವಕರ್ಮ ತಬಲಾವಾದಕ ಕಲಾವಿದರು ಸುಮಾರು ಎರಡುಗಂಟೆ ಭಕ್ತಿ ಹಾಡುಗಳು ಶಿವನ, ಶರಣರ ದಾಸೋಹ ಸೂತ್ರಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನುರಂಜಿಸಿದರು.
ದಿ ಬ್ಯಾಂಡ್ ಸ್ವರ್ ಸಂಗೀತ ಸಂಸ್ಥಾಪಕ ಸಚಿನ ಜಾದವ ಅವರ ನೇತ್ರುತ್ವದಲ್ಲಿ ಜರೂಗಿತು. ಆರ್ .ಜೆ. ಮಂಜು ಕಾರ್ಯಕ್ರಮ ನಿರೂಪಿಸಿದರು.