ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ:ಮಹನೀಯರ ಜಯಂತಿಯನ್ನು ಸರಳವಾಗಿ ಆಚರಿಸಲು ಡಿ.ಸಿ. ಸೂಚನೆ
ಕಲಬುರಗಿ: ಏ.01:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಇದೇ ಏಪ್ರಿಲ್ 5 ರಂದು 117ನೇ ಡಾ. ಬಾಬು ಜಗಜೀವನರಾಮ್‍ರವರ ಜಯಂತಿ ಹಾಗೂ ಏಪ್ರಿಲ್ 14 ರಂದು 133ನೇ ಡಾ. ಬಿ.ಆರ್. ಅಂಬೇಡ್ಕರವರ ಜಯಂತಿಯನ್ನು ಮಹನೀಯರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಸರಳವಾಗಿ ಆಚರಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಮೇಲ್ಕಂಡ ದಿನಾಂಕಗಳಂದು ಮಹನೀಯರ ಜಯಂತಿಯನ್ನು ಸರಳವಾಗಿ ಆಚರಿಸಬೇಕು. ನಂತರ ಕಲಬುರಗಿ ನಗರದಲ್ಲಿನ ಸದರಿ ಮಹನೀಯರ ಪುತ್ಥಳಿ ಹತ್ತಿರಕ್ಕೆ ಆಗಮಿಸಿ ಪೂಜೆ ಮಾಡುವುದರೊಂದಿಗೆ ಜನ್ಮ ದಿನಾಚರಣೆಯನ್ನು ಆಚರಿಸಬೇಕೆಂದು ಅವರು ಕೋರಿದ್ದಾರೆ.