ಪಿಸ್ತೂಲ,ತಲ್ವಾರ ಪೋಟೋ ಹರಿಬಿಟ್ಟ:ಯುವಕನ ವಿರುದ್ಧ ಪ್ರಕರಣ
ಯಡ್ರಾಮಿ:ಏ.1:ಪಿಸ್ತೂಲ,ತಲ್ವಾರ ನಂತಹ ಪೋಟೋ ಪೋಸ್ಟ್ ಹಾಕಿದ್ದು ಅಲ್ಲದೆ ತನ್ನ ಕೈಗಳಿಗೆ ಪಂಚ ಹಾಕಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹಿರಿಬಿಡುವ ಮೂಲಕ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿರುವುದರಿಂದ ಯುವಕನ ಮೇಲೆ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.
ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮದ ವಿಕಾಸ ತಂದೆ ಬಸವರಾಜ ವಸ್ತಾರಿ ಎಂಬ 19 ವರ್ಷದ ಯುವಕ ತನ್ನ Instagram ಖಾತೆಯಲ್ಲಿ ಪಿಸ್ತೂಲ ತಲ್ವಾರ ಪೋಟೋ ಸೇರ್ ಮಾಡಿದ್ದು.
ಅಲ್ಲದೆ ತನ್ನ ಕೈಗಳಿಗೆ ಪಂಚಗಳನ್ನು ಹಾಕಿಕೊಂಡು ನನ್ನ MY NEW WEPAN ಎಂದು ಪೋಸ್ಟ್ ಹಾಕಿದ್ದನು. ಇದ್ದನು ಕಂಡು ಆರೋಪಿಯನ್ನು ಠಾಣೆಗೆ ಕರೆತಂದು.
ಯುವಕನ ಮೋಬೈಲ್ ವಶಪಡಿಸಿಕೊಂಡು ವಿಚಾರಣೆ ಮಾಡಿದಾಗ.
ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಕಂಡು ಬಂದಿದ್ದು.
ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರಗಳನ್ನೂ ಹರಿಬಿಡುವ ಮೂಲಕ ಅಶಾಂತಿ ಸೃಷ್ಟಿಸದಂತೆ ಎಚ್ಚರಿಕ್ಕೆ ನೀಡಿದ್ದಾರೆ.
ಇನ್ನು ಈ ರೀತಿಯಲ್ಲಿ ಪಿಸ್ತೂಲ ತಲ್ವಾರ ಅಂತಹ ಮಾರಕ್ತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ಕೆಲಸಾ ಮಾಡಬೇಡಿ ಎಂದು ಪಿ.ಎಸ್.ಐ.ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಒಂದು ವೇಳೆ ಈ ರೀತಿಯ ಘಟನೆಗಳು ಯಾರಾದರೂ ಮಾಡಿದ್ದು ಕಂಡು ಬಂದರೆ.ಅಂತವರ ವಿರುದ್ಧ ಪ್ರಕರಣ ದಾಖಲೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಯಡ್ರಾಮಿ ಠಾಣೆಯ ಪಿ.ಎಸ್.ಐ ವಿಶ್ವನಾಥ ಮುದರೆಡ್ಡಿ ಅವರು ಎಚ್ಚರಿಸಿದ್ದಾರೆ.