ಎಚ್‍ಕೆಇ ಅಧ್ಯಕ್ಷರಾಗಿ ನಮೋಶಿ ಅಧಿಕಾರ ಸ್ವೀಕಾರ
ಕಲಬುರಗಿ,ಏ.1-ಎಚ್‍ಕೆಇ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಶೀಲ ನಮೋಶಿ ಹೇಳಿದರು.
ನಗರದ ಎಚ್‍ಕೆಇ ಸೊಸೈಟಿ ಕಚೇರಿಯಲ್ಲಿ ಭಾನುವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸಂಸ್ಥೆಯ ಹಿತಕ್ಕಾಗಿ ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ. ಬೇರೆ ಬೇರೆ ಪೆನಲ್‍ನೊಂದಿಗೆ ಆಯ್ಕೆಯಾದ 15 ಜನರ ತಂಡದ ಸಹಕಾರದೊಂದಿಗೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಚಂದ್ರಶೇಖರ ಹಿರೇಮಠ, ಕಿರಣ್ ದೇಶಮುಖ ಸೇರಿ ಸಂಸ್ಥೆ ನೂತನ ಸದಸ್ಯರು ಉಪಸ್ಥಿತರಿದ್ದರು.