ಭಗತಸಿಂಗ್ ವಿಚಾರ ಅನುಷ್ಠಾನದಿಂದ ವಿವಿಧ ಸಮಸ್ಯೆ ಪರಿಹಾರ
ಕಲಬುರಗಿ,ಏ.1: ದೇಶವು ಸ್ವಾತಂತ್ರ್ಯಗೊಂಡು 76 ವರ್ಷಗಳು ಗತಿಸಿದರು ಸಹ ಇಲ್ಲಿ ಆಳ್ವಕೆ ಮಾಡಿರುವ ಎಲ್ಲಾ ಪಕ್ಷಗಳು ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ಪರಿಹಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೇ. ದೇಶವನ್ನು ಕಿತ್ತುತಿನ್ನುತ್ತಿರುವ ರಾಜಕೀಯ-ಆರ್ಥಿಕ-ಸಾಮಾಜಿಕ-ಸಾಂಸ್ಕøತಿಕ ಸಮಸ್ಯೆಗಳ ಪರಿಹಾರವನ್ನು ಭಗತಸಿಂಗ್ ರಂತಹ ಕ್ರಾಂತಿಕಾರಿಗಳ ವಿಚಾರಗಳ ಅನುಷ್ಠಾನದಿಂದ ಮಾತ್ರ ಸಾಧ್ಯ. ಆದ್ದರಿಂದ ಅವರ ಸಮಾಜವಾದಿ ಚಿಂತನೆಗಳನ್ನು ವಿದ್ಯಾರ್ಥಿ-ಯುವಜನರು ಮೈಗೂಡಿಸಿಕೊಂಡು ಹೋರಾಟಕ್ಕೆ ಧುಮಕಬೇಕೆಂದು ಎಐಡಿವೈಒ ಕಲಬುರಗಿ ಜಿಲ್ಲಾ ಅಧ್ಯಕ್ಷಜಗನ್ನಾಥ ಎಸ್ ಎಚ್ ಹೇಳಿದರು.
ಶಹೀದ್ ಭಗತಸಿಂಗರÀ 94ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ಎಐಡಿಎಸ್ ಒ,ಎಐಡಿವೈಒಹಾಗೂ ಎಐಎಂ ಎಸ್ ಎಸ್ ವತಿಯಿಂದ ಕನ್ನಡ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಪ್ರಭಾಕರ್ ಜೋಷಿಯವರು ಇಂದಿನ ವಿದ್ಯಾರ್ಥಿಗಳು ಸಿನಿಮಾ ಹಾಗೂ ಕ್ರಿಕೆಟ್ ತಾರೆಗಳನ್ನು ತಮ್ಮ ಆದರ್ಶವನ್ನಾಗಿ ಮಾಡಿಕೊಳ್ಳದೇ ಭಗತಸಿಂಗ್ ರಂತಹ ಕ್ರಾಂತಿಕಾರಿಗಳನ್ನು ಆದರ್ಶವನ್ನಾಗಿ ತೆಗೆದುಕೊಂಡು ಸಾಮಾಜಿಕ ಹೋರಾಟಕ್ಕೆ ಕಾಣಿಕೆಯನ್ನು ನೀಡಬೇಕೆಂದು ನುಡಿದರು.ಅತಿಥಿಗಳಾಗಿ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶಿವಗಂಗಾ ರುಮ್ಮಾ ಭಾಗವಹಿಸಿದರು.
ಎಐಡಿಎಸ್ ಒಕಲಬುರಗಿ ಜಿಲ್ಲಾ ಅಧ್ಯಕ್ಷ ತುಳಜಾರಾಮ ಎನ್. ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಎಐಎಂಎಸ್‍ಎಸ್‍ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಡಿವಾಳ ಅವರು ವಹಿಸಿದ್ದರು. ಇಂದು ಸಂಜೆ 5 ಗಂಟೆಗೆ ಇದೆ ವೇದಿಕೆಯ ಮೇಲೆ ದಿ ಲೆಜೆಂಡ್ ಆಫ್ ಭಗತ್‍ಸಿಂಗ್ ಚಲನಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.