ಶರಣಶ್ರೀಗಳಿಂದ ಭಕ್ತ ಮೌನೇಶ ಪತ್ತಾರಗೆ ಸನ್ಮಾನ
ತಾಳಿಕೋಟೆ:ಏ.1: ತಾಳಿಕೋಟೆ ಪಟ್ಟಣದ ನಡೆದಾಡುವ ದೇವರೆಂದೇ ಪ್ರಸಿದ್ದತೆ ಪಡೆದ ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ನಿಮಿತ್ಯ ಪ್ರಕಟಿಸಲ್ಪಡುವ ಜಾತ್ರೋತ್ಸವ ಸಂಬಂದಿತ ಆಮಂತ್ರಣ ಪತ್ರಿಕೆಗಳು ಇನ್ನಿತರ ಜಾತ್ರಾ ಉತ್ಸವಕ್ಕೆ ಸಂಬಂದಿಸಿದ ಪ್ರಕಟನೆಗಳ ಸಂಬಂದಿತ ಮುದ್ರಣ ಸೇವಾ ಕಾರ್ಯವನ್ನು ತಾಳಿಕೋಟೆ ಪಟ್ಟಣದ ವಿಕಾಸ ಜ್ಯೂವೇಲರಿ ವಕ್ರ್ಸ ಮಾಲಿಕರಾದ ಮೌನೇಶ ಕೆ ಪತ್ತಾರ ಈ ದಂಪತಿಗಳು ಮಾಡಿದಲ್ಲದೇ ಇದಕ್ಕೆ ಸಂಬಂದಿಸಿದ ಖರ್ಚುವೆಚ್ಚವನ್ನು ಸ್ವತಃ ತಾವೇ ಬರಿಸಿ ಭಕ್ತಿ ಸಮರ್ಪಿಸಿದ್ದರ ಪ್ರಯುಕ್ತ ರವಿವಾರರಂದು ಶ್ರೀ ಶರಣಮುತ್ಯಾರವರ ಮಠದಲ್ಲಿ ಮೌನೇಶ ಪತ್ತಾರ ಅವರನ್ನು ಆಮಂತ್ರಿಸಿ ಅವರಿಗೆ ಶಾಲುಹೊದಿಸಿ ಸನ್ಮಾನಿಸಿ ಮಲ್ಲಣ್ಣ ಶರಣರು ಗೌರವಿಸಿದರು.
ಮೌನೇಶ ಪತ್ತಾರ ಅವರ ಸೇವಾ ಕಾರ್ಯ ಕುರಿತು ಗುಣಗಾನ ಮಾಡಿದ ಮಹಿಳಾ ವಿಶ್ವ ವಿದ್ಯಾಲಯದ ವಿಜಯಕುಮಾರ ಹಿರೇಮಠ ಅವರು ಮಾತನಾಡಿ ಮೌನೇಶ ಪತ್ತಾರ ಅವರು ಈ ಹಿಂದಿನಿಂದಲೂ ಶರಣರ ಮಠದ ಮೇಲೆ ಪ್ರೀತಿ ಪ್ರೇಮ ಶ್ರದ್ದಾ ಭಕ್ತಿಯನ್ನು ಅವರ ಇಡೀ ಕುಟುಂಭದವರೇ ವಹಿಸುತ್ತಾ ಸಾಗಿರುವದು ಜನಮೆಚ್ಚುಗೆಗೆ ಪಾತ್ರವಾಗಿದೆ ಅವರ ಈ ಸೇವಾ ಕಾರ್ಯ ಮೆಚ್ಚಿ ಅವರ ದೈನಂದಿನ ಕೆಲಸ ಕಾರ್ಯಗಳಲ್ಲಿ ಶ್ರೀ ಶರಣಮುತ್ಯಾರವರು ಇನ್ನಷ್ಟು ಹೆಚ್ಚಿಗೆ ಏಳಿಗೆ ಮಾಡುವದರ ಜೊತೆಗೆ ಇಡೀ ಅವರ ಕುಟುಂಭ ವರ್ಗಕ್ಕೆ ಸುಃಖ ಶಾಂತಿ ನೀಡಲೆಂದು ಹಾರೈಸಿದರು.
ಇನ್ನೋರ್ವ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಮೌನೇಶ ಪತ್ತಾರ ಅವರು ಶರಣರ ಮಠದ ಮೇಲೆ ಇಟ್ಟ ಶ್ರದ್ದಾ ಭಕ್ತಿ ಅತೀವವಾಗಿದೆ ಈ ಸಲದಂತೆ ಮುಂದಿನ ಬರುವ ವರ್ಷ ಅಷ್ಟೇ ಅಲ್ಲಾ ಇವರ ಜೀವಮಾನ ಇರುವವರೆಗೂ ಪ್ರತಿ ವರ್ಷ ಜರುಗಲಿರುವ ಶ್ರೀ ಶರಣಮುತ್ಯಾರವರ ಜಾತ್ರೋತ್ಸವದಲ್ಲಿ ಮುದ್ರಿಸಲಾಗುತ್ತಿರುವ ಆಮಂತ್ರಣ ಪತ್ರಿಕೆಗಳಾಗಲಿ ಇನ್ನಿತರ ಪ್ರಕಟನೆಗೊಳ್ಳಲಿರುವ ಮುದ್ರಣಗಳನ್ನು ಈ ಹಿಂದಿನಂತೆ ಪ್ರಕಟಿಸಿ ತಮ್ಮ ಶ್ರದ್ದಾಭಕ್ತಿಯನ್ನು ಮುಂದುವರೆಸಿಕೊಂಡು ಸಾಗಬೇಕೆಂದು ಆಶಿಸಿದರು.
ಈ ಸಮಯದಲ್ಲಿ ಮಲ್ಲಣ್ಣ ಇಂಗಳಗಿ, ಶಿಕ್ಷಕರಾದ ಶೇಖಣ್ಣ ಹೂಗಾರ(ಕರಿಬಾವಿ), ಮಲ್ಲಣ್ಣ ಶರಣರ, ಎನ್.ಜಿ.ಶರಣರ, ಸಿದ್ದಣ್ಣ ಶರಣರ, ಶರಣಗೌಡ ಪೊಲೀಸ್‍ಪಾಟೀಲ, ಸಂಗಮೇಶ ಶರಣರ, ಮೊದಲಾದವರು ಉಪಸ್ಥಿತರಿದ್ದರು.