ಹಳೆಬೇರು ಹೊಸಚಿಗುರು; ಹಳೆ ವಿದ್ಯಾರ್ಥಿಗಳ ಸಮಾಗಮ
ಕಲಬುರಗಿ:ಏ.1: ಯಾದಗಿರಿ ಜಿಲ್ಲೆಯ ಸುರಪುರ ನಗರದ ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ (ದರಬಾರ್) ಶಾಲೆಯ 7ನೇ ತರಗತಿಯ 1982-83ನೇ ಬ್ಯಾಚ್ನ ವಿದ್ಯಾರ್ಥಿಗಳ ಹಳೆಬೇರು ಹೊಸಚಿಗುರು-ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ವೇಣುಗೋಪಾಲ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಪೂಜೆಯೊಂದಿಗೆ ಆಚರಿಸಲಾಯಿತು.
ನಂತರ ಸಾಮೂಹಿಕವಾಗಿ ದೇವರ ನಾಮಸ್ಮರಣೆದೊಂದಿಗೆ ಆರಂಭಗೊಂಡು, ತಾವು ಕಲಿತ ಶಾಲೆಗೆ ಭೇಟಿ ಕೊಟ್ಟು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಸುಮಾರು ಎರಡು ತಾಸುಗಳನ್ನು ಶಾಲಾ ಪರಿಸರದಲ್ಲಿ ಕಾಲ ಕಳೆದರು. ನಂತರ ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಸಾಂಸ್ಕøತಿಕ ಚಟುವಟಿಕೆಗಳಾದ ಗಾಯನ, ಶೀರ್ಷಿಕೆ ಸ್ಪರ್ಧೆ, ಆಟೋಟಗಳು ನಡೆದವು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಮಹಾರಾಷ್ಟ್ರ ರಾಜ್ಯದ ಪುಣೆ ಹಾಗೂ ರಾಜ್ಯದ ವಿವಿಧ ಮೂಲೆ ಮೂಲೆಗಳಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು ತಮಗೆ ಕಲಿಸಿದ ಗುರುಗಳ ನೆನಪು ಮಾಡಿಕೊಂಡು ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಶಾಲಾ ದಿನಗಳ ನೆನಪು, ಅವಿಸ್ಮರಣೀಯ ಗಳಿಗೆಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸುರಪುರದಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳಾದ ಉಮೇಶ ಸಪ್ಪಂಡಿ, ನೀಲಾಕ್ಷ ಪಂಚಾಂಗಮಠ, ಕೆ. ವಿಜಯಕುಮಾರ, ಪಂಪಣ್ಣ, ಕೃಷ್ಣಾ ದರಬಾರಿ, ಪ್ರಹ್ಲಾದ ದೀಕ್ಷಿತ, ಬೆಂಗಳೂರು ನಿವಾಸಿ ಸುರೇಶ ರೋಣಿಹಾಳ, ರಮೇಶ ಜೈನ್ ಮತ್ತು ವಿವಿಧ ಭಾಗಗಳಿಂದ ಸುರೇಶ ದೇಸಾಯಿ, ಶ್ರೀಧರ, ಗಂಗಾಧರ ಪಾಟೀಲ್, ಗಿರೀಶ ಜೋಶಿ, ಶಿವಕುಮಾರ, ಕುಸುಮಾ ದೇಸಾಯಿ, ಗಿರಿಜಾ ಅಯ್ಯರೆಡ್ಡಿ, ಕವಿತಾ ಶಾಸ್ತ್ರೀ, ಪುಷ್ಪಾ ಹೂಗಾರ, ಸುಧಾ ಕೋಸಗಿ, ಮಮತಾ ಜಹಾಂಗಡ್, ಲೀಲಾ ಕುಲಕರ್ಣಿ, ಶಾಕಾಂಬರಿ, ಸುರೇಖಾ, ಮಹಾಲಕ್ಷಿ??ೀ, ತಿಪ್ಪಮ್ಮ, ವಿಜಯಲಕ್ಷಿ??ೀ, ವೈಷ್ಣವಿ ದೀಕ್ಷಿತ್ ಸೇರಿದಂತೆ ಇತರೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರತ್ನಾ ಪಂಚಾಗಮಠ ಮತ್ತು ಗೌರಿ ಸಪ್ಪಂಡಿ ಹಳೆ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನೆನಪಿನ ಕಾಣಿಕೆ ನೀಡಿ ಗೌರವಸಿದರು.
ಮುರಳೀಧರ ಜಿ. ಕರಲಗೀಕರ್ ಕಾರ್ಯಕ್ರಮ ನಿರೂಪಿಸಿದರು.