ನಮ್ಮ ಅಭ್ಯರ್ಥಿ ಕಳಂಕ ರಹಿತ ವ್ಯಕ್ತಿ ದೇಶದಲ್ಲಿನ ಹಿಟ್ಲರ್ ಆಡಳಿತ ಕೊನೆಗೊಳ್ಳಲಿದೆ : ನಾಗೇಂದ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಎ.01: ನಮ್ಮ ಪಕ್ಷದ ಅಭ್ಯರ್ಥಿ ಇ.ತುಕರಾಂ ಅವರು ಕಳಂಕ ರಹಿತ ವ್ಯಕ್ತಿತ್ವ ಹೊಂದಿದ್ದಾರೆ. ಇವರನ್ನು  ಬಳ್ಳಾರಿ  ಕ್ಷೇತ್ರದಿಂದ ಗೆಲ್ಲಿಸುವುದು ಪಕ್ಷಕ್ಕೆ ನೀಡುವ ಕೊಡುಗೆಯಾಗಲಿದೆಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಅವರು ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಏನೇ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದಾದರೂ, ರಾಜ್ಯ ಸಭಾ ಸದಸ್ಯರಾದ ಡಾ. ಸೈಯದ್ ನಾಸೀರ್ ಹುಸೇನ್, ನಾನು, ವಿಜಯನಗರ ಜಿಲ್ಲೆಯ ಉಸ್ತುವಾರಿ ಜಮೀರ್ ಅಹಮ್ಮದ್,  ಪಕ್ಷದ ಎಲ್ಲಾ  ಶಾಸಕರು, ಮುಖಂಡರು ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಿ.
ದೆಹಲಿಗೆ ಲೋಕಸಭಾ ಸದಸ್ಯರಾಗಿ ತುಕರಾಂ ಕಾಲಿಡುವುದು ಸತ್ಯ. ರಾಜ್ಯದ 20 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಜಯ ಗ್ಯಾರೆಂಟಿ ಎಂದರು.
ದೇಶದಲ್ಲಿ ಈಡಿ, ಸಿಬಿಐ ಸಂಸ್ಥೆಗಳ ದುರ್ಬಳಕೆ ನಿಲ್ಲಬೇಕಿದೆ. ಪ್ರಜಾಪ್ರಭುತ್ವ ಕಾಪಾಡಬೇಕಿದೆ. ಭಾರತದಲ್ಲಿನ  ಹಿಟ್ಲರ್ ಮಾದರಿ ಸರ್ಕಾರವಿದೆ. ಇದರಿಂದ   ಜನತೆ ಬೇಸತ್ತಿದ್ದು. ಅವರಿಗೆ ಬುದ್ದಿ ಕಲಿಸಲು ಮತದಾರ ರೆಡಿಯಾಗಿದ್ದಾರೆಂದರು.
ಪಂಚ ಗ್ಯಾರೆಂಟಿಗಳು ನಮ್ಮ ಕೈ ಹಿಡಿಯಲಿವೆ. ರಾಜ್ಯದ ಬೊಕ್ಕಸಕ್ಕೆ ಭಾರವಾದರೂ ಅವನ್ನು ಅನುಷ್ಟಾನಕ್ಕೆ ತಂದಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಸೋಲಿಸುವುದು ಕಂಡಿತ, ತಂತ್ರ  ಕುತಂತ್ರ ಏನಿಲ್ಲ ಜನರೇ ಅವರನ್ನು ಸೋಲಿಸಲಿದ್ದಾರೆ. ಅವರನ್ನು ಸೋಲಿಸಲು ಏನೆಲ್ಲ ತಂತ್ರ ಮಾಡಬೇಕು ಅದನ್ನು ಮಾಡಲು ಹಿಂಜರಿಯಲ್ಲವೆಂದರು.
ತುಕರಾಂ ಅಭ್ಯರ್ಥಿಯಾದಾಗಲೇ ಶ್ರೀರಾಮುಲುಗೆ ನಡುಕ ಶುರುವಾಗಿದೆ. 2004 ರಿಂದ ಸತತ ಗೆಲುವು ಕಂಡ ಶ್ರೀರಾಮುಲುಗೆ ಈಗ ಸೋಲಿನ ಸರದಿ ಆರಂಭಗೊಂಡಿದೆಂದರು.
ನಮ್ಮ ಪಕ್ಷದ ಆಂತರಿಕ ವಿಚಾರಗಳನ್ನು ಬೇರೊಂದು ಪಕ್ಷದ ಮುಖಂಡರು ಮಾತನಾಡುವುದರಲ್ಲಿ ಅರ್ಥವಿಲ್ಲವೆಂದ ಅವರು ರಾಹುಲ್ ಗಾಂಧಿ ಅವರು ನೀಡಿದ ಜೀನ್ಸ್ ಪಾರ್ಕ್ ಮುಂದಿನ ದಿನಗಳಲ್ಲಿ  ಮಾಡಲಿದೆಂದರು.
ಕಂಪ್ಲಿ ಶಾಸಕ ಗಣೇಶ್ ಮಾತನಾಡಿ, ಬಿಜೆಪಿಯವರು ಸಂಸದರಾದ ಮೇಲೆ ಹಳ್ಳಿ ಕಡೆ ತಿರುಗಿ ನೋಡಿದ್ದೀರಾ, ಬರೀ ಮೋದಿ ಮೋದಿ ಹೆಸರೇಳಿಕೊಂಡು ತಿರುಗತ್ತಾರೆ. ಅಭಿವೃದ್ಧಿ ಎಂಬುದು ನಿಮ್ಮಿಂದ ಹೇಳಿ, ಚುನಾವಣೆಯ ನಟರಾಗಿ ನಟಿಸುತ್ತಾರೆ ಬಿಜೆಪಿಯವರು, ಆದರೆ ನಿಜವಾದ ವರ್ಕರ್ ತುಕರಾಂ ಅವರನ್ನು ಜನ ಗಮನಿಸಿದ್ದಾರೆ. ಅವರ ಗೆಲುವು ನಿಶ್ಚಿತ ಎಂದರು. 
ಸುದ್ದಿಗೋಷ್ಟಿಯಲ್ಲಿ  ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ,  ಅಭ್ಯರ್ಥಿ ತುಕರಾಂ ಡಾ.ಜಗಜೀವನ್ ರಾಂ ಚರ್ಮ ಕೈಗಾರಿಕೆ (ಲಿಡ್ಕರ್) ಅಧ್ಯಕ್ಷ ಮುಂಡ್ರಿಗಿ ನಾಗರಾಜ್,
ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು,
 ಜಿಲ್ಲಾ ಅಧ್ಯಕ್ಷರುಗಳಾದ. ಜಿ.ಎಸ್.ಮಹಮ್ಮದ್ ರಫೀಕ್, ಬಿ.ವಿ.ಶಿವಯೋಗಿ, ಮುಖಂಡರುಗಳಾದ ಅಲ್ಲಂ ಪ್ರಶಾಂತ್, ರಾಂ ಪ್ರಸಾದ್, ವೆಂಕಟೇಶ್ ಹೆಗಡೆ ಮೊದಲಾದವರು ಇದ್ದರು.
One attachment • Scanned by Gmail