ಬೀಳ್ಕೊಡುವ ಸಮಾರಂಭ
ಚನ್ನಮ್ಮನ ಕಿತ್ತೂರ,ಏ.1: ಹುಟ್ಟಿದವನಿಗೆ ಸಾವು ತಪ್ಪಿದ್ದಲ್ಲ. ವೃತ್ತಿಯಲ್ಲಿ ತೊಡಗಿದವನಿಗೆ ನಿವೃತ್ತಿ ತಪ್ಪಿದ್ದಲ್ಲ. ಎಂದು ಡಿಡಿಪಿಐ ಮನೋಜಕುಮಾರ ಹಂಛಾಟೆ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹಾಗೂ ನೌಕರರ, ಶಿಕ್ಷಕರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ರಾಜಗುರು ಗುರು ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ.ಜುಟ್ಟನವರ. ಇವರ ಸೇವಾ ನಿವೃತ್ತಿ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ದೀಪ ಬೆಳಗಿಸಿ ಮಾತನಾಡಿದರು. ತಮ್ಮೂರಲ್ಲಿಯೇ ಕೆಲಸ ಮಾಡುವುದ್ದಕಿಂತ ಬೇರೆ ಕಡೆ ಕೆಲಸ ಮಾಡಿದ್ದು ಅನುಭವ ಬರುತ್ತದೆ ರುದ್ರಗೌಡ ಜುಟ್ಟನವರ ಈಗಾಗಲೇ ಸೈನಿಕರಾಗಿ ಸೇವೆ ಸಲ್ಲಿಸಿದವರು, ಅಲ್ಲಿ ನಿವೃತ್ತಿ ಹೊಂದಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡು ನಂತರ ಶಿಕ್ಷಣ ಇಲಾಖೆಯಲ್ಲಿ ಸೇವೆಗೆ ಮುಂದಾದರು. ಶಿಕ್ಷಣಾಧಿಕಾರಿಯಾಗಿ. ಕಾರ್ಯನಿರ್ವಹಿಸಿದ್ದು ಸಂತಸ ತಂದಿದೆ. ನಾವುಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಅವು ಉಳಿದರೆಮಾತ್ರ ನಾವು ಮಾಡಿದ ಸೇವೆ ಸಾರ್ಥಕವಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ನಿವೃತ್ತ ಕ್ಷೇತ್ರ ಶಿಕ್ಷಾಧಿಕಾರಿ ರುದ್ರಗೌಡ ಜುಟ್ಟುನವರ, ಮಾತನಾಡಿ ಶಾಲೆ ಅಭಿವೃದ್ದಿ, ಶಿಕ್ಷಣಮಟ್ಟ ಹೆಚ್ಚಿಸಲು ಒಟ್ಟಾರೆಯಾಗಿ ಕ್ಷೇತ್ರದ ಶಾಲೆಗಳನ್ನು ಅಭಿವೃದ್ದಿಪಡಿಸಿದ್ದು ಸಂತಸ ತಂದಿದೆ. ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ, ಪ್ರೋತ್ಸಾಹಿಸುವ ಜೊತೆಗೆ ಕಾರ್ಯ ಕೆಲಸದಲ್ಲಿ ಭಾಗಿಯಾಗಿದ್ದಾರೆಂದು ಅಭಿನಂದನೆ ಜೊತೆಗೆ ಹರ್ಷವ್ಯಕ್ತಡಿಸಿದರು.
ಮುಖ್ಯ ಅಥಿತಿಗಳಾಗಿ ಕಾಂಗ್ರೇಸ್ ಮುಖಂಡ ನಾನಾಸಾಹೇಬ ಪಾಟೀಲ ಸೇರಿದಂತೆ ಹಲವು ಶಿಕ್ಷಕರು ಮಾತನಾಡಿದರು.
ಎಲ್ಲ ಶಿಕ್ಷಕರು ನಿವೃತ್ತ ಶಿಕ್ಷಣಾಧಿಕಾರಿ ಮತ್ತು ಗಣ್ಯರನ್ನು ಸತ್ಕರಿಸಿದರು. ಪ್ರಾರ್ಥನೆ ಶಿಕ್ಷಕಿ ಎಸ್ ಎ ಪಾಟೀಲ ಅವರಿಂದ ನೇರವೇರಿತು.
ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎನ್ ಪ್ಯಾಟಿ, ಕ್ಷೇತ್ರ ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜನ್ನವರ, ಅಕ್ಷರ ದಾಸೋಹ ಪಿ.ಡಿ. ಮೆಳವಂಕಿ, ಶಿಕ್ಷಕರುಗಳಾದ ರಾಮಣ್ಣಾ ಗೋಗವಾಡ, ಎನ್.ಆರ್. ಪಾಟೀಲ, ಮೀನಾಕ್ಷಿ ಸೂಡಿ, ಶ್ರೀಶೈಲ ಗಂಗನ್ನವರ, ಜಯಕುಮಾರ ಹೆಬ್ಬಳ್ಳಿ, ಸಿದ್ದಪ್ಪಾ ಹುಲಮನಿ, ಎಮ್.ಎಸ್.ಕಲ್ಮಠ, ರಮೇಶ ಗೋನಿ, ಮಹೇಶ ಚನ್ನಂಗಿ, ಗಜಾನಂದ ಸೊಗಲದ, ಸತೀಶ ನಾಯಕ, ಆಯ್.ಬಿ. ಹುಪ್ಪರಿ, ಕ್ಷೇತ್ರದ ಎಲ್ಲ ಶಿಕ್ಷಕ-ಶಿಕ್ಷಕಿಯರು ಬಿಈಓ ಕಛೇರಿ ಸಿಬ್ಬಂದ್ದಿ ,ಗಣ್ಯರಿದ್ದರು. ನಿರೂಪಣೆ, ಸ್ವಾಗತ, ವಂದನಾರ್ಪಣೆ ಎಂ.ಬಿ.ಹೆಗಡೆ ಮಾಡಿದರು.